ಈ ವರ್ಷ ರಶ್ಮಿಕಾ ಮಂದಣ್ಣ ಹಸೆಮಣೆ ಏರೋದು ಹೌದಾ?

Published : Apr 01, 2024, 04:03 PM IST

ಅದಿತಿ ರಾವ್ ಹೈದರಿ ಇತ್ತೀಚಿಗೆ ತಮ್ಮ ಎಂಗೇಜ್ಮೇಟ್‌ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದರ ನಂತರ 2024ರಲ್ಲಿ ಮದುವೆಯಾಗಲಿರುವ ದಕ್ಷಿಣದ ಚೆಲುವೆಯರ ಬಗ್ಗೆ ಚರ್ಚೆಗಳು ಶುರುವಾಗಿದೆ. ಹಾಗಾದರೆ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ,  ಪೂಜಾ ಹೆಗ್ಡೆ  ಮುಂತಾದ ನಟಿಯರು ಈ ವರ್ಷ ಹಸೆಮಣೆ ಏರಲಿದ್ದಾರಾ?

PREV
19
ಈ ವರ್ಷ ರಶ್ಮಿಕಾ ಮಂದಣ್ಣ ಹಸೆಮಣೆ ಏರೋದು ಹೌದಾ?

ಅದಿತಿ ರಾವ್ ಹೈದರಿ: 
ಇತ್ತೀಚಿಗೆ ಅದಿತಿ ರಾವ್ ಹೈದರಿ  ಮತ್ತು ಸಿದ್ಧಾರ್ಥ್ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದರು. ಇಬ್ಬರೂ ನಿಶ್ಚಿತಾರ್ಥದ ಉಂಗುರಗಳನ್ನು ಧರಿಸಿರುವ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ.ಇದಕ್ಕೂ ಮೊದಲು ದೇವಸ್ಥಾನದಲ್ಲಿ ಈ ಜೋಡಿ ಗುಟ್ಟಾಗಿ ಮದ್ವೆಯಾಗಿದೆ ಎಂಬ ಸುದ್ದಿಯೋ ಹರಡಿತ್ತು. 


 

29

ರಶ್ಮಿಕಾ ಮಂದಣ್ಣ:
ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ, ನಟ ವಿಜಯ್ ದೇವರಕೊಂಡ ಅವರೊಂದಿಗಿನ ಸಂಬಂಧದ ಚರ್ಚೆ ಬಹಳ ಕಾಲದಿಂದ ನಡೆಯುತ್ತಿದೆ. ಈ  ಊಹಾಪೋಹಗಳ ಪ್ರಕಾರ  ನಟಿ ಶೀಘ್ರದಲ್ಲೇ ಮದುವೆಯಾಗುತ್ತಾರೆ.

39

 ತಮನ್ನಾ ಭಾಟಿಯಾ:
 ಸೌತ್‌ ಚೆಲುವೆ ತಮನ್ನಾ ಭಾಟಿಯಾ ನಟ ವಿಜಯ್ ವರ್ಮಾ ಅವರೊಂದಿಗೆ ಸಂಬಂಧ ಹೊಂದಿದ್ದಾರೆ. ಇಬ್ಬರ ಫೋಟೋಗಳು  ಅವರ ಸಂಬಂಧದ ಬಗ್ಗೆ ಎಲ್ಲವನ್ನೂ ಹೇಳುತ್ತವೆ.

 

49

ಪೂಜಾ ಹೆಗ್ಡೆ:
ನಟಿ ಪೂಜಾ ಹೆಗ್ಡೆ ಈಗ ಒಂಟಿಯಾಗಿದ್ದು, ಯಾವುದೇ ಸಂಬಂಧದಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ. ಅವರು ತಮ್ಮ ವೃತ್ತಿಜೀವನದಲ್ಲಿ ನಿರತರಾಗಿದ್ದು  ಹಲವಾರು ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ. ಇದೀಗ ರೋಹನ್ ಮೆಹ್ತಾ ಜೊತೆಗಿನ ವೀಡಿಯೋವೊಂದು ವೈರಲ್ ಆಗುತ್ತಿದೆ. ಈ ಜೋಡಿ ಶೀಘ್ರದಲ್ಲಿ ಮದುವೆ ಘೋಷಿಸುತ್ತೆ ಎನ್ನಲಾಗುತ್ತಿದೆ.

59

ಸಾಯಿ ಪಲ್ಲವಿ:
ಸಾಯಿ ಪಲ್ಲವಿ ದಕ್ಷಿಣ ಭಾರತದ ಅದ್ಭುತ ನಟಿ.. ಅವರು ತಮ್ಮ ಅಭಿನಯದಿಂದ ಕೋಟ್ಯಾತರ ಅಭಿಮಾನಿಗಳು ಹೃದಯ ಗೆದ್ದಿದ್ದಾರೆ. ಅವರು ತನ್ನ ವೃತ್ತಿಜೀವನದಲ್ಲಿ ನಿರತರಾಗಿದ್ದು ಸದ್ಯಕ್ಕೆ ಸೆಟಲ್‌ ಆಗಲು ಬಯಸುತ್ತಿಲ್ಲ.

69

ಶ್ರುತಿ ಹಾಸನ್:
ನಟಿ ಶ್ರುತಿ ಹಾಸನ್ ಅವರು ಶಾಂತನು ಹಜಾರಿಕಾ ಅವರೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದಾರೆ. ಇಬ್ಬರೂ ಒಟ್ಟಿಗೆ ವಿವಿಧ ಸಂದರ್ಭಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎನ್ನಲಾಗಿದೆ.
 

79

ನಿತ್ಯಾ ಮೆನನ್:
ವಿವಿಧ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿನ ಕೆಲಸಕ್ಕಾಗಿ ನಿತ್ಯಾ ಮೆನನ್ ಇನ್ನೊಬ್ಬ ಪ್ರಸಿದ್ಧ ತಾರೆ. ನಟಿ ಶೀಘ್ರದಲ್ಲೇ ಮದುವೆಯಾಗುವ ಉದ್ದೇಶವನ್ನು ಹೊಂದಿಲ್ಲ.

89

ಅನುಷ್ಕಾ ಶೆಟ್ಟಿ:
ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿ ಅವರ ಹೆಸರು ಬಹಳಕಾಲದಿಂದ ಅವರ ಸಹನಟ ಪ್ರಭಾಸ್‌ ಜೊತೆ ಕೇಳಿಬರುತ್ತಲೇ ಇದೆ. ಚಿತ್ರದಲ್ಲಿನ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಗೆ ಫಿದಾ ಆದ ಅಭಿಮಾನಿಗಳು ಅವರನ್ನು ನಿಜ ಜೀವನದಲ್ಲೂ ಜೊತೆಯಾಗಿ ನೋಡಲು ಇಷ್ಷಪಡುತ್ತಾರೆ

99

ತ್ರಿಶಾ ಕೃಷ್ಣನ್:
ಪೊನ್ನಿಯಿನ್ ಸೆಲ್ವನ್ 2 ಚಿತ್ರದಲ್ಲಿ ನಟಿಸುತ್ತಿರುವ ತ್ರಿಶಾ ಕೃಷ್ಣನ್ ಅವರು ಮಲಯಾಳಂ ನಿರ್ಮಾಪಕರೊಂದಿಗೆ ಸಂಪರ್ಕ ಹೊಂದಿದ್ದಾರೆ. ಆದರೆ, ಮದುವೆಯ ಊಹಾಪೋಹಗಳನ್ನು ನಟಿ ಅಲ್ಲಗಳೆದಿದ್ದಾರೆ.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories