ಮೊದಲ ಮಗು ನಿರೀಕ್ಷೆಯಲ್ಲಿದ್ದಾರಾ ಅತಿಯಾ ಶೆಟ್ಟಿ ಕೆ ಎಲ್ ರಾಹುಲ್ ? ತಾತ ಆಗೋ ಹಿಂಟ್ ಕೊಟ್ರಾ ಸುನೀಲ್ ಶೆಟ್ಟಿ?

First Published | Apr 1, 2024, 12:11 PM IST

ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆಯೇ? ಸುನೀಲ್ ಶೆಟ್ಟಿ ಆಡಿದ ಮಾತು ನೆಟ್ಟಿಗರಲ್ಲಿ ಇಂಥದೊಂದು ಗೆಸ್ಸಿಂಗ್‌ಗೆ ಕಾರಣವಾಗಿದೆ. 
 

ನಟಿ ಅತಿಯಾ ಶೆಟ್ಟಿ ಮತ್ತು ಪತಿ ಕ್ರಿಕೆಟಿಗ ಕೆಎಲ್ ರಾಹುಲ್ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ ಎಂದು ನೆಟ್ಟಿಗರು ಗೆಸ್ಸಿಂಗ್ ಗೇಮ್‌ನಲ್ಲಿ ತೊಡಗಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಕಾರ್ಯಕ್ರಮವೊಂದರಲ್ಲಿ ಸುನೀಲ್ ಶೆಟ್ಟಿ ಇತ್ತೀಚೆಗೆ ನೀಡಿದ ಹೇಳಿಕೆಯು ಈ ಅನುಮಾನಕ್ಕೆ ಕಾರಣವಾಗಿದೆ. 

ಡ್ಯಾನ್ಸಿಂಗ್ ರಿಯಾಲಿಟಿ ಶೋನ ಇತ್ತೀಚಿನ ಎಪಿಸೋಡ್‌ಗೆ 'ಗ್ರ್ಯಾಂಡ್ ಮಸ್ತಿ ವಿತ್ ಅಜ್ಜ-ಅಜ್ಜಿ' ಎಂಬ ಹೆಸರಿಡಲಾಗಿತ್ತು. ಮುಂದಿನ ವರ್ಷ ‘ಡ್ಯಾನ್ಸ್ ದೀವಾನೆ’ಗೆ ಮರಳಿದಾಗ ‘ನಾನಾ(ಅಜ್ಜ)ನಂತೆ ನಡೆಯುತ್ತೇನೆ’ ಎಂದು ಸುನೀಲ್ ಶೆಟ್ಟಿ ಹೇಳಿದ್ದೇ ಈ ಮಾತಿಗೆ ಕಾರಣ.

Tap to resize

KL ರಾಹುಲ್ ಮತ್ತು ಅತಿಯಾ ಕಾಮನ್ ಸ್ನೇಹಿತರ ಮೂಲಕ ಭೇಟಿಯಾದರು ಮತ್ತು ಪ್ರೀತಿಯಲ್ಲಿ ಬಿದ್ದರು. ಶೀಘ್ರದಲ್ಲೇ ಡೇಟಿಂಗ್ ಆರಂಭಿಸಿದ ಜೋಡಿ 2021 ರವರೆಗೆ ತಮ್ಮ ಪ್ರಣಯದ ಬಗ್ಗೆ ಮೌನವಾಗಿದ್ದರು.
 

ರಾಹುಲ್ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲು Instagram ನಲ್ಲಿ ತನ್ನ ಗೆಳತಿಗೆ ಪ್ರಣಯ ಹುಟ್ಟುಹಬ್ಬದ ಸಂದೇಶವನ್ನು ಹಾಕಿದರು. 

ಸುನೀಲ್ ಶೆಟ್ಟಿಯವರ ವಿಶಾಲವಾದ ಖಂಡಾಲಾ ಎಸ್ಟೇಟ್‌ನಲ್ಲಿ 2023ರಲ್ಲಿ  ಇವರಿಬ್ಬರ ವಿವಾಹ ಸಾಂಪ್ರದಾಯಿಕ ದಕ್ಷಿಣ ಭಾರತ ಶೈಲಿಯಲ್ಲಿ ನೆರವೇರಿತು. 

ಅತಿಯಾ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವದಂದು ರಾಹುಲ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡರು. ಇದರಲ್ಲಿ ಅವರ ನಿಶ್ಚಿತಾರ್ಥ, ಸಂಗೀತ ಮತ್ತು ಹಲ್ದಿಯ ತೆರೆಮರೆಯ ಫೋಟೋಗಳು ಸೇರಿದ್ದವು. 

ಕೆಲಸದ ವಿಷಯಕ್ಕೆ ಬಂದರೆ, ಅತಿಯಾ ಶೆಟ್ಟಿ ಬಾಲಿವುಡ್‌ನಲ್ಲಿ ಸೂರಜ್ ಪಾಂಚೋಲಿಯೊಂದಿಗೆ ಹೀರೋ (2015) ನಲ್ಲಿ ಪಾದಾರ್ಪಣೆ ಮಾಡಿದರು. ಇಲಿಯಾನಾ ಡಿಕ್ರೂಜ್, ಅರ್ಜುನ್ ಕಪೂರ್ ಮತ್ತು ಅನಿಲ್ ಕಪೂರ್ ಅವರೊಂದಿಗೆ ಮುಬಾರಕನ್ ನಲ್ಲಿ ಕಾಣಿಸಿಕೊಂಡರು. ಹಾಸ್ಯ-ನಾಟಕ ಮೋತಿಚೂರ್ ಚಕ್ನಾಚೂರ್‌ನಲ್ಲಿ ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ಅಭಿನಯಿಸಿದರು. 

ಮತ್ತೊಂದೆಡೆ, KL ರಾಹುಲ್ IPL 2024 ಗಾಗಿ ಆಡುತ್ತಿದ್ದಾರೆ. ಅವರು ಲಕ್ನೋ ಸೂಪರ್ ಜೈಂಟ್ಸ್ ನಾಯಕರಾಗಿದ್ದಾರೆ. ದಂಪತಿಯಲ್ಲಿ ಯಾರೊಬ್ಬರೂ ಮಗುವಿನ ಆಗಮನದ ಬಗ್ಗೆ ತುಟಿ ಬಿಚ್ಚಿಲ್ಲ.

Latest Videos

click me!