ಅರ್ಯನ್‌ ಹೆರಿಗೆ ವೇಳೆ ಗೌರಿ ಬದುಕಿ ಉಳಿಯುವುದಿಲ್ಲವೆಂದು ಹೆದರಿದ್ದ ಶಾರುಖ್‌!

First Published | Oct 6, 2021, 4:22 PM IST

ಡ್ರಗ್ಸ್ (Drugs) ಪಾರ್ಟಿಗೆ ಸಂಬಂಧಿಸಿದಂತೆ ಶಾರುಖ್ ಖಾನ್ (Shahrukh Khan) ಪುತ್ರ ಆರ್ಯನ್ ಖಾನ್‌ನನ್ನು  (Aryan Kahn) ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ  (NCB)  ಭಾನುವಾರ ಬಂಧಿಸಿದೆ. ಸೋಮವಾರ ಜಾಮೀನು ರಿಜೆಕ್ಟ್ ಆಗಿದ್ದು, ಆರ್ಯನ್ NCB  ಕಸ್ಟಡಿಯನ್ನು ಅಕ್ಟೋಬರ್‌ 7 ಗುರವಾರದವರೆಗೆ ವಿಸ್ತರಿಸಲಾಗಿದ . ಪ್ರಸ್ತುತ, ಈ ವಿಷಯದಲ್ಲಿ ಶಾರುಖ್ ಖಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅದೇ ಸಮಯದಲ್ಲಿ, ಶಾರುಖ್ ಎನ್‌ಸಿಬಿಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಶಾರುಖ್ ತಮ್ಮ ಮಗ ಮಾದಕ ದ್ರವ್ಯ ಪ್ರಕರಣದಲ್ಲಿ ಸಿಕ್ಕಿಬಿದ್ದ ನಂತರ ತಮ್ಮ ಪಠಾಣ್ ಚಿತ್ರದ ಚಿತ್ರೀಕರಣವನ್ನು ರದ್ದುಗೊಳಿಸಬಹುದು ಎಂದೂ ಹೇಳಲಾಗುತ್ತಿದೆ. ಅರ್ಯನ್‌ನಿಗೆ ಜನ್ಮ ನೀಡುವ ಸಂಧರ್ಭದಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಖಾನ್ (Gauri Khan)  ಅವರ ಆರೋಗ್ಯದ ಸ್ಥಿತಿ ತುಂಬಾ ಗಂಬೀರವಾಗಿತ್ತಂತೆ. ಸಂಪೂರ್ಣ ವಿಷಯ ತಿಳಿಯಲು ಕೆಳಗೆ ಓದಿ.

ಬಾಲಿವುಡ್‌ (Bollywood) ಸೂಪರ್‌ಸ್ಟಾರ್‌ ಶಾರುಖ್ ಖಾನ್‌ (Sharukh Khan) ಮತ್ತು ಗೌರಿಯ ಪ್ರೇಮ ಕಥೆ ಯುವ ಪ್ರೇಮಿಗಳಿಗೆ ಮಾದರಿ. ಎಸ್‌ಆರ್‌ಕೆ ಅವರ ಕೋಸ್ಟಾರ್‌ ಜೊತೆ ಲಿಂಕಪ್‌ ಬಗ್ಗೆ ಕೆಲವು ವದಂತಿಗಳಿದ್ದರೂ, ಇಬ್ಬರ ವೈವಾಹಿಕ ಜೀವನಕ್ಕೆ ಅಡ್ಡಿಯಾಗಿಲ್ಲ ಹಾಗೂ ಇಬ್ಬರೂ ಒಟ್ಟಿಗೆ ಎಲ್ಲಾ ಫಂಕ್ಷನ್‌ ಪಾರ್ಟಿಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. 

ಶಾರುಖ್ ಸಂದರ್ಶನದಲ್ಲಿ ಮಗ ಆರ್ಯನ್ ಹೆರಿಗೆಯ ಸಮಯದಲ್ಲಿ, ಗೌರಿ ಸಾಯುತ್ತಾರೆ ಎಂದು ಭಾವಿಸಿದ್ದರಂತೆ. ಗೌರಿ ಖಾನ್ ಮೊದಲ ಹೆರಿಗೆಯ ಸಮಯದಲ್ಲಿ ಗಂಭೀರ ಸ್ಥಿತಿಯಲ್ಲಿದ್ದರು ಎಂದು ಶಾರುಖ್ ಖಾನ್ ಒಮ್ಮೆ ಸಂದರ್ಶನವೊಂದರಲ್ಲಿ (interveiw) ಹೇಳಿದ್ದರು.
 

Tap to resize

ಮಗ ಆರ್ಯನ್ (Aryan Khan) ಜನಿಸುವ ಸಮಯದಲ್ಲಿ ಗೌರಿಯ ಹೆರಿಗೆ (Labour Pain) ನೋವನ್ನು ನೋಡಿ ನನಗೆ ತುಂಬಾ ಭಯವಾಯಿತು. ಗೌರಿ ನೋವಿನಿಂದ ಸಾಯುತ್ತಾಳೆ ಎಂದು ನಾನು ಭಾವಿಸಿದೆ. ಮಕ್ಕಳಿಗೆ ಜನ್ಮ ನೀಡುವುದರಿಂದ  ಸಾಯುವುದಿಲ್ಲ ಎಂದು ಅವರಿಗೆ ತಿಳಿದಿದ್ದರೂ ಕೂಡ ಅವರ ಹೆಂಡತಿಯ ಸ್ಥಿತಿಯನ್ನು ನೋಡಿ ಹೆದರಿದರು ಶಾರುಖ್‌.

ತನ್ನ ಪೋಷಕರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು. ಅದಕ್ಕೆ ನಾನು ಆಸ್ಪತ್ರೆಗೆ ಹೋಗೋಲ್ಲ, ಎಂದು ಗೌರಿ ತುಂಬಾ ದುರ್ಬಲಳಾಗಿದ್ದಳು, ಎಂದು ಶಾರುಖ್‌ ರಿವೀಲ್‌ ಮಾಡಿದ್ದರು. ಶಾರುಖ್ ಗೌರಿ ಅವರನ್ನು ಅಷ್ಟು ಆತಂಕದಲ್ಲಿ ಎಂದಿಗೂ ಗೌರಿ ನೋಡಿರಲಿಲ್ಲವಂತೆ. ಇದನ್ನು ಗೌರಿ ಸಹ ರಿವೀಲ್ ಮಾಡಿದ್ದರು. 

ನಾನು ಗೌರಿಗೆ ಟ್ಯೂಬ್‌ಗಳನ್ನು ಜೋಡಿಸಿದ್ದನ್ನು ನೋಡಿದೆ, ಅವಳು ತುಂಬಾ ನಿಧಾನವಾಗಿದ್ದಳು. ನಾನು ಸಿಸೇರಿಯನ್ ಸಮಯದಲ್ಲಿ ಆಪರೇಷನ್ ಥಿಯೇಟರ್ ಒಳಗೆ ಹೋದೆ ಮತ್ತು ಅಲ್ಲಿನ ದೃಶ್ಯವನ್ನು ನೋಡಿದಾಗ, ಗೌರಿ ಇನ್ನು ಬದುಕುವುದಿಲ್ಲ ಎಂದು ನನಗೆ ಅನಿಸಿತು ಎಂದು ಶಾರುಖ್ ಖಾನ್ ಹೇಳಿದ್ದರು.

ಆ ಸಮಯದಲ್ಲಿ ಶಾರುಖ್ ಮಗುವಿನ ಬಗ್ಗೆ  ಕೂಡ  ಯೋಚಿಸುತ್ತಿಲ್ಲ, ಏಕೆಂದರೆ ಗೌರಿ ನಡುಗುತ್ತಿದ್ದಳು ಎಂದು ಹೇಳಿದ್ದರು. ಇದನ್ನೆಲ್ಲ  ನೋಡಿ ನಟ  ತುಂಬಾ ಹೆದರಿದರಂತೆ. ಶಾರುಖ್  ಹಲವು ಬಾರಿ ಕುಟುಂಬದ ಬಗ್ಗೆ ತುಂಬಾ ವ್ಯಾಮೋಹ ಹೊಂದಿದ್ದಾರೆಂದು ಹೇಳಿ ಕೊಂಡಿದ್ದಾರೆ.

ತನ್ನ ಮಗನಿಗೆ ಆರ್ಯನ್ ಎಂದು ಏಕೆ ಹೆಸರಿಟ್ಟರು ಎಂದು ಸಹ ಶಾರುಖ್ ಹೇಳಿದ್ದರು. ಅವರಿಗೆ  ಈ ಹೆಸರನ್ನು ಕೇಳಲು ತುಂಬಾ ಇಷ್ಟವಾಗುತ್ತದೆ. ತನ್ನ ಮಗ ನನ್ನ ಹೆಸರು ಆರ್ಯನ್ ಖಾನ್  ಎಂದು ಹುಡುಗಿಗೆ ಹೇಳಿದಾಗ ಅವಳು ಹೆಸರಿನಿಂದ ಪ್ರಭಾವಿತಳಾಗುತ್ತಾಳೆ  ಎಂದು ಹೇಳಿದರು.  

ಶಾರುಖ್ ಮತ್ತು ಗೌರಿದಂಪತಿಗೆ ಮೂವರು ಮಕ್ಕಳಿದ್ದಾರೆ - ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್. ಆರ್ಯನ್ ಚಲನಚಿತ್ರ ತಯಾರಿಕೆಯಲ್ಲಿ ಕೋರ್ಸ್ ಮಾಡಿದ್ದರೆ, ಮಗಳು ಸುಹಾನಾ ತನ್ನ ತಂದೆಯಂತೆ ನಟಿಯಾಗಲು ಬಯಸುತ್ತಾಳೆ. ಅಬ್ರಾಮ್‌ ಇನ್ನೂ ಶಾಲೆಯಲ್ಲಿ ಓದುತ್ತಿದ್ದಾನೆ.

24 ವರ್ಷದ ಆರ್ಯನ್ ಲಂಡನ್‌ನ ಸೆವೆನ್ ಓಕ್ಸ್ ಶಾಲೆಯಿಂದ 12 ನೇ ತರಗತಿ ಪಾಸಾಗಿದ್ದಾರೆ. ಮೊದಲು ಅವರು ಮುಂಬೈನ ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ಓದುತ್ತಿದ್ದರು. ಮೇ 2021 ರಲ್ಲಿ, ಆರ್ಯನ್ ಪದವಿ ಪ್ರದಾನ ಸಮಾರಂಭದ ಫೋಟೋ ವೈರಲ್ ಆಗಿತ್ತು.

Latest Videos

click me!