ಸಂತ್ರಸ್ತೆ ಹೆಸರು ಬಹಿರಂಗ; ಸಲ್ಮಾನ್, ಅಕ್ಷಯ್, ರಾಕುಲ್, ಚಾರ್ಮಿಗೆ ದೊಡ್ಡ ಸಂಕಷ್ಟ
* ಹೈದರಾಬಾದ್ ಹೊರವಲಯದಲ್ಲಿ ವೈದ್ಯೆ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ
* ಬಾಲಿವುಡ್ ಮತ್ತು ಟಾಲಿವುಡ್ನ 38 ಸೆಲೆಬ್ರೆಟಿಗಳಿಗೆ ಸಂಕಷ್ಟ
* 2019 ರಲ್ಲಿ ಹೈದರಾಬಾದ್ ಹೊರವಲಯದಲ್ಲಿ ವೈದ್ಯೆ ಮೇಲೆ ಕೀಚಕ ಕೃತ್ಯ
* ಅತ್ಯಾಚಾರ ಸಂತ್ರಸ್ತೆಯ ನಿಜವಾದ ಹೆಸರು ಬಳಸಿದ್ದರು
ನವದೆಹಲಿ/ ಮುಂಬೈ(ಸೆ. 07) ಈ ಸುದ್ದಿ ನಿಜಕ್ಕೂ ಒಂದು ದೊಡ್ಡ ಎಚ್ಚರಿಕೆ ಘಂಟೆ.. ಸಂತಾಪ.. ವಿಷಾದ ಸೂಚಿಸಿದ್ದ ಸೆಲೆಬ್ರಿಟಿಗಳ ಮೇಲೆ ಈಗ ಪ್ರಕರಣ ದಾಖಲಾಗಿದೆ. ಸೋಶಿಯಲ್ ಮೀಡಿಯಾದ ನಿಯಮಗಳನ್ನು ಮುರಿದಿದ್ದು ಅವರಿಗೆ ಈಗ ಸಂಕಷ್ಟ ತಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಕೆಲ ಸೆಲಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಈಗ ಅವರ ಮೇಲೆ ಪ್ರಕರಣ ದಾಖಲಿಸುವಂತೆ ಮಾಡಿದೆ. ಬಾಲಿವುಡ್ ನಟರಾದ ಸಲ್ಮಾನ್ ಖಾನ್ , ಅಕ್ಷಯ್ ಕುಮಾರ್ , ಅನುಪಮ್ ಖೇರ್, ಅಜಯ್ ದೇವಗನ್, ರಾಕುಲ್ ಪ್ರೀತ್ ಸಿಂಗ್ ಮೇಲೆ ಪ್ರಕರಣ ದಾಖಲಾಗಿದೆ. ಒಟ್ಟು 38 ಮಂದಿ ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮದ್ಯದ ನಶೆ..ಮಾನಿನಿಯರ ಸಖ್ಯ.. ವರ್ಮಾ ಡ್ಯಾನ್ಸ್ ವಿಡಿಯೋ
2019ರಲ್ಲಿ ಹೈದರಾಬಾದಿನಲ್ಲಿ ನಡೆದಿದ್ದ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಇವರಿಗೆ ಸಮಸ್ಯೆ ತಂದಿದೆ. ಟೋಲ್ ಪ್ಲಾಜಾ ಬಳಿ ನಾಲ್ವರು ಆರೋಪಿಗಳು ಯುವತಿಯ ಮೇಲೆ ಅತ್ಯಾಚಾರವೆಸಗಿದ್ದರು. ಈ ಪ್ರಕರಣದಲ್ಲಿ ಸಂತ್ರಸ್ತೆ ಹೆಸರನ್ನು ಬಹಿರಂಗ ಮಾಡಿದ್ದು ಸಮಸ್ಯೆ ತಂದೊಡ್ಡಿದೆ.
ಸಂತ್ರಸ್ತೆಯ ಹೆಸರನ್ನು ಸೆಲೆಬ್ರಿಟಿಗಳು ಬಹಿರಂಗ ಮಾಡಿದ್ದರು. ಕಾನೂನು ಪ್ರಕಾರ ಇದು ತಪ್ಪಾಗಲಿದ್ದು ಸೆಲೆಬ್ರಿಟಿಗಳ ಸಂತಾಪ ಮತ್ತು ವಿಷಾದ ಅವರಿಗೆ ಸಂಕಷ್ಟ ತಂದಿಟ್ಟಿದೆ.
ಬಾಲಿವುಡ್ ಹಾಗೂ ಟಾಲಿವುಡ್ನ ಒಟ್ಟು 38 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ದೆಹಲಿ ಮೂಲದ ವಕೀಲ ಗೌರವ್ ಗುಲಾಟಿ ದೂರು ನೀಡಿದ್ದರು. ಸಾಮಾಜಿಕ ಜವಾಬ್ದಾರಿಯನ್ನು ಮರೆತು ಸೆಲೆಬ್ರಿಟಿಗಳು ಯುವತಿಯ ಹೆಸರನ್ನು ಬಹಿರಂಗ ಮಾಡಿದ್ದು ಸರಿಯಲ್ಲ ಎಂದು ವಕೀಲರಾದ ಗೌರವ್ ಗುಲಾಟಿ ಆರೋಪಿಸಿದ್ದು ಸೆಲೆಬ್ರಿಟಿಳ ಬಂಧನವಾಗಬೇಕು ಎಂದು ಒತ್ತಾಯಿಸಿದ್ದಾರೆ.