ಸಮಂತಾ-ನಾಗ್ ಆ್ಯನಿವರ್ಸರಿ: ನೀನು ನನ್ನವನು, ನಾನು ನಿನ್ನವಳು ಎಂದ ಜೋಡಿ ಈಗ ಬೇರೆ ಬೇರೆ

Published : Oct 06, 2021, 05:12 PM ISTUpdated : Oct 06, 2021, 05:15 PM IST

ಸಮಂತಾ-ನಾಗ ಚೈತನ್ಯ ವಿವಾಹದ ದಿನ ಅಕ್ಟೋಬರ್ 6ರಂದು ಹಿಂದೂ ಸಂಪ್ರದಾಯದಂತೆ ಸತಿಪತಿಯಾಗಿದ್ದ ಸ್ಯಾಮ್-ನಾಗ್ ಕಳೆದ ವರ್ಷವಷ್ಟೇ ನೀನು ನನ್ನವನು ಎಂದು ಶುಭ ಹಾರೈಸಿದ್ದ ನಟಿ

PREV
18
ಸಮಂತಾ-ನಾಗ್ ಆ್ಯನಿವರ್ಸರಿ: ನೀನು ನನ್ನವನು, ನಾನು ನಿನ್ನವಳು ಎಂದ ಜೋಡಿ ಈಗ ಬೇರೆ ಬೇರೆ

ಸಮಂತಾ ಹಾಗೂ ನಾಗಚೈತನ್ಯ ಜೊತೆಯಾಗಿದ್ದರೆ ಇಂದು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರು. 2017 ಅಕ್ಟೋಬರ್ 6ರಂದು ಸ್ಯಾಮ್ ಹಾಗೂ ನಾಗ್ ಹಿಂದೂ ಸಂಪ್ರದಾಯದಂತೆ ಸಂಭ್ರಮದಿಂದ ಸತಿಪತಿಗಳಾಗಿದ್ದರು.

28

ಎರಡು ದಿನ ನಡೆದ ವಿವಾಹ ಕಾರ್ಯಕ್ರಮದಲ್ಲಿ ದಂಪತಿಗಳಾದ ಸೌತ್‌ನ ಜೋಡಿ ಕೆಲವು ದಿನಗಳ ಹಿಂದೆಯಷ್ಟೇ ವಿಚ್ಚೇದನೆ ಘೋಷಿಸಿದ್ದಾರೆ. ವಿಚ್ಚೇದಿತರಾಗಿರದಿದ್ದರೆ ಕೆಲವೇ ದಿನದಲ್ಲಿ 4 ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮಿಸುತ್ತಿದ್ದರು ಜೋಡಿ

38

ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವದ(Wedding Anniversary) ಸಂದರ್ಭ ಸಮಂತಾ ಪತಿಗಾಗಿ ಪ್ರೀತಿಯ ಶುಭಾಶಯ ಹೇಳಿದ್ದರು. ಈಗ ಆ ಹಳೆಯ ಶುಭಾಶಯ ನುಡಿಗಳು ಮತ್ತೆ ವೈರಲ್(Viral) ಆಗುತ್ತಿದೆ.

48

ನೀನು ನನ್ನವನು, ನಾನು ನಿನ್ನವಳು, ಯಾವುದೇ ಬಾಗಿಲು ಬರಲಿ ನಾವದನ್ನು ಜೊತೆಯಾಗಿ ತೆರೆಯುವ. ಹ್ಯಾಪಿ ಆನಿವರ್ಸರಿ ಎಂದು ಗಂಡನನ್ನು ಟ್ಯಾಗ್ ಮಾಡಿ ಸಮಂತಾ ವಿಶ್ ಮಾಡಿದ್ದರು.

58

ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ಮದುವೆಯ ಸಂದರ್ಭ ಪತಿಯ ಜೊತೆ ಕ್ಲಿಕ್ಕಿಸಿದ ಫೋಟೋವನ್ನು ಶೇರ್ ಮಾಡಿ ಈ ಶುಭಾಶಯ ಹಂಚಿಕೊಂಡಿದ್ದರು ನಟಿ

68

ಲಾಕ್‌ಡೌನ್ ನಿಯಮಗಳು ಸಡಿಲವಾದ ನಂತರ ಇಬ್ಬರೂ ವೆಕೇಷನ್ ಎಂಜಾಯ್ ಮಾಡಿದ್ದರು. ನಾಗಚೈತನ್ಯ ಬರ್ತ್‌ಡೇ ಆಚರಿಸಲು ಇಬ್ಬರೂ ಕಳೆದ ವರ್ಷ ನವೆಂಬರ್‌ನಲ್ಲಿ ಮಾಲ್ಡೀವ್ಸ್‌ಗೆ ಹೋಗಿದ್ದರು. ಆ ಫೋಟೋಗಳು ವೈರಲ್ ಆಗಿದ್ದವು. ಆದರೆ ಜೊತೆಯಾಗಿ ಅದು ಅವರ ಕೊನೆಯ ವೆಕೇಷನ್ ಎಂದು ಯಾರು ಊಹಿಸಿರಲಿಲ್ಲ.

78

ಜುಲೈ 2021 ರಲ್ಲಿ ಸಮಂತಾ ಅಕ್ಕಿನೇನಿ ತನ್ನ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳಲ್ಲಿ 'ಅಕ್ಕಿನೇನಿ' ಉಪನಾಮವನ್ನು ಕೈಬಿಟ್ಟಾಗ ವಿಚ್ಛೇದನದ ವದಂತಿಗಳು ಶರುವಾಗಿತ್ತು.

ಡಿಸೈನರ್ ಜೊತೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ರಾ ಸಮಂತಾ? ವಿಚ್ಚೇದನೆಗೆ ಇದೇ ಕಾರಣ ?

 

88

ಅಕ್ಟೋಬರ್ 2, 2020 ರಂದು ಚಾಯ್ ಮತ್ತು ಸಮಂತಾ ತಮ್ಮ ಸೋಷಿಯಲ್ ಮೀಡಿಯಾ ಎಕೌಂಟ್‌ಗಳ ಮೂಲಕ ತಾವಿಬ್ಬರೂ ವಿಚ್ಚೇದಿತರಾಗುತ್ತಿರುವುದಾಗಿ ಎನೌನ್ಸ್ ಮಾಡಿದ್ದಾರೆ.

click me!

Recommended Stories