ಶೀಘ್ರದಲ್ಲಿ ಅಪ್ಪ ಆಗ್ತಾರಂತೆ ಅವಿವಾಹಿತ Salman Khan: ಹಿಂಟ್​ ಕೊಟ್ಟ ನಟ- ಯಾರಿವಳು ಸುಂದರಿ?

Published : Sep 25, 2025, 01:03 PM IST

"Too Much" ಚಾಟ್ ಶೋನಲ್ಲಿ ನಟ ಸಲ್ಮಾನ್ ಖಾನ್ ಶೀಘ್ರದಲ್ಲೇ ತಾನು ಅಪ್ಪನಾಗುವುದಾಗಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಆಕೆ ಯಾರಿರಬಹುದು ಎಂಬ ಕುತೂಹಲ ಮೂಡಿಸಿದೆ.  

PREV
17
ಸಲ್ಮಾನ್- ಆಮೀರ್​ ಸುದ್ದಿಯಲ್ಲಿ

ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಪ್ರಸ್ತುತ ಸುದ್ದಿಯಲ್ಲಿದ್ದಾರೆ ಮತ್ತು "Too Much" ಎಂಬ ಚಾಟ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ನಡೆಸಿಕೊಡುವ ಈ ಅಮೆಜಾನ್ ಪ್ರೈಮ್ ಶೋ ಇಂದು ಸೆಪ್ಟೆಂಬರ್ 25 ರಂದು ಪ್ರಾರಂಭವಾಗಲಿದೆ.

27
ಐಶ್ವರ್ಯ ಜೊತೆ ಸಂಬಂಧ

ಬಾಲಿವುಡ್​​ ಇಂಡಸ್ಟ್ರಿಯ ಮೋಸ್ಟ್​ ಎಲಿಜಿಬಲ್​ ಬ್ಯಾಚಲರ್​ ಎಂದು ಕರೆಸಿಕೊಳ್ಳುವ ಸಲ್ಮಾನ್​ ಖಾನ್​ (Salman Khan) ಅವರಿಗೆ ಈಗ 59 ವರ್ಷ ವಯಸ್ಸು. ಅಷ್ಟಕ್ಕೂ ಅವಿವಾಹಿತರಾಗಿರೋ ಸಲ್ಮಾನ್​ ಬಾಳಲ್ಲಿ ಎಂಟ್ರಿ ಕೊಟ್ಟ ಮಹಿಳೆಯರು ಬಹಳಷ್ಟು ಮಂದಿ. ಆದರೆ ಅದರಲ್ಲಿ ಬಹಳ ಫೇಮಸ್​ ಆಗಿದ್ದು, ನಟಿ ಐಶ್ವರ್ಯ ರೈ. ಸಲ್ಮಾನ್​ ಖಾನ್​ ಜೊತೆಗೆ ನಟಿ ಐಶ್ವರ್ಯ ರೈ ಅವರ ಕುಚ್​ ಕುಚ್​ ಬಾಲಿವುಡ್​ನಲ್ಲಿ ಹೊಸ ವಿಷಯವೇನಲ್ಲ.

37
ನಟಿ ಜೊತೆ ಡೇಟಿಂಗ್​

ಇವರ ಲವ್​ ಸ್ಟೋರಿ ಒಂದು ಹಂತ ಮುಂದಕ್ಕೆ ಹೋಗಿತ್ತು. ಐಶ್ವರ್ಯ ಅವರು, ಅಭಿಷೇಕ್‌ ಬಚ್ಚನ್‌ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಸಲ್ಮಾನ್‌ ಖಾನ್‌ ಜೊತೆ ಡೇಟಿಂಗ್‌ನಲ್ಲಿ ಇದ್ದರು. ಇವರಿಬ್ಬರ ಮದುವೆ ನಡೆಯುತ್ತದೆ ಎಂದು ಭಾರಿ ಸುದ್ದಿಯಾಗಿತ್ತು. ಐಶ್ವರ್ಯ ರೈ ತಮಗೆ ಕೈಕೊಟ್ಟ ವಿಷಯವನ್ನು ಇಂದಿಗೂ ಸಲ್ಮಾನ್​ ನೋವಿನಿಂದ ಹೇಳುವುದು ಇದೆ.

47
ಹೊಸ ವಿಷಯ ರಿವೀಲ್​

ಅದು ಬಿಡಿ, ಇದೀಗ ಹೊಸ ವಿಷಯ ಏನೆಂದರೆ, "Too Much" ಎಂಬ ಚಾಟ್ ಶೋನಲ್ಲಿ ಸಲ್ಮಾನ್​ ಖಾನ್​ ಹೊಸ ವಿಷಯವನ್ನು ರಿವೀಲ್​ ಮಾಡಿದ್ದಾರೆ. ಅದೇನೆಂದರೆ, ಶೀಘ್ರದಲ್ಲಿಯೇ ನಾನು ಅಪ್ಪ ಆಗುತ್ತಿದ್ದೇನೆ ಎಂದಿದ್ದಾರೆ. ಅಷ್ಟಕ್ಕೂ, ಸಿನಿ ಉದ್ಯಮದಲ್ಲಿ ಮದುವೆಯಾಗದೇ ಮಕ್ಕಳನ್ನು ಹೊಂದಿರುವ ಅನೇಕ ಜನರಿದ್ದಾರೆ. ನಿಸ್ಸಂಶಯವಾಗಿ, ಎಲ್ಲಾ ಅಭಿಮಾನಿಗಳು ಸಲ್ಮಾನ್ ಖಾನ್ ಅವರ ಮಗುವನ್ನು ನೋಡಲು ಬಯಸುತ್ತಾರೆ.

57
ಸಲ್ಮಾನ್ ಖಾನ್ ಹೇಳಿದ್ದು

ಮಕ್ಕಳ ಬಗ್ಗೆ ಮಾತನಾಡುತ್ತಾ, ಸಲ್ಮಾನ್ ಖಾನ್, "ಒಂದು ದಿನ, ಶೀಘ್ರದಲ್ಲೇ, ನನಗೆ ಮಕ್ಕಳಾಗುತ್ತವೆ. ನನಗೆ ಮಕ್ಕಳಾಗುತ್ತವೆ ಅಷ್ಟೇ, ಮತ್ತೇನೂ ಹೇಳಲ್ಲ... ನೋಡೋಣ" ಎಂದು ಹೇಳಿದರು. ಆದರೆ, ಈ ಬಗ್ಗೆ ಯಾರ ಹೆಸರನ್ನೂ ಉಲ್ಲೇಖಿಸದೇ ಮೌನವಾಗಿದ್ದಾರೆ. ಆದರೆ ಮಕ್ಕಳಾಗುವುದು ಮಾತ್ರ ಕನ್​ಫರ್ಮ್​ ಎಂದಿದ್ದಾರೆ.

67
ಯಾರೀಕೆ ಸುಂದರಿ?

ಸಲ್ಮಾನ್​ ಖಾನ್​ ಇಷ್ಟು ಹೇಳುತ್ತಿದ್ದಂತೆಯೇ ಅವಳು ಯಾರಿರಬಹುದು ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಇದಾಗಲೇ ಆಕೆ ಗರ್ಭಿಣಿಯಾಗಿದ್ದಿರಬಹುದು ಎಂದೂ ಕೆಲವರು ಹೇಳುತ್ತಿದ್ದರೆ, ಸುಮ್ಮನೇ ಪ್ರಚಾರಕ್ಕಾಗಿ ಸಲ್ಮಾನ್​ ಖಾನ್​ ಹೀಗೆ ಹೇಳಿರಲಿಕ್ಕೆ ಸಾಕು ಎಂದಿದ್ದಾರೆ ಮತ್ತೆ ಕೆಲವರು.

77
ಸಲ್ಮಾನ್​ ಬಗ್ಗೆ ಐಶ್ವರ್ಯ ರೈ ಹೇಳಿದ್ದೇನು?

ಸಲ್ಮಾನ್​ ಖಾನ್​ರಿಂದ ದೂರವಾಗಿದ್ದ ಬಗ್ಗೆ ಒಮ್ಮೆ ಬಹಿರಂಗಪಡಿಸಿದ್ದ ಐಶ್ವರ್ಯ ರೈ ಬಚ್ಚನ್​ (Aishwarya Rai Bachchan ), ನಾನು ಸಲ್ಮಾನ್ ಖಾನ್ ರ ಮದ್ಯದ ಚಟ, ನಿಂದನೆಯಿಂದ ಬೇಸತ್ತಿದ್ದೆ. ಇದರ ಹೊರತಾಗಿಯೂ, ನಾನು ಅವರ ಬೆಂಬಲಕ್ಕೆ ನಿಂತಿದ್ದೆ. ಪ್ರತಿಯಾಗಿ ನನಗೆ ಸಿಕ್ಕಿದ್ದು ಸಲ್ಮಾನ್​ರ ಮೌಖಿಕ, ದೈಹಿಕ ಮತ್ತು ಭಾವನಾತ್ಮಕ ನಿಂದನೆ ಹಾಗೂ ದ್ರೋಹ ಮತ್ತು ಅವಮಾನ ಎಂದು ಈ ಸಂದರ್ಶನದಲ್ಲಿ ಹೇಳಿದ್ದರು. ಆದರೂ ಸಲ್ಮಾನ್​ ಮೇಲೆ ನಟಿಗೆ ಇದ್ದ ವ್ಯಾಮೋಹ ಆಗ್ಗಾಗ್ಗೆ ರಿವೀಲ್​ ಆಗುತ್ತಲೇ ಇದೆ.

ಇದನ್ನೂ ಓದಿ: ಜನರಿಗೆ ಬೇಡವಾಯ್ತಾ Bigg Boss? ಟಾಪ್​ 10 ನಲ್ಲಿ ಒಂದೂ ಸ್ಥಾನ ಗಿಟ್ಟಿಸಿಕೊಳ್ಳದ ರಿಯಾಲಿಟಿ ಷೋ

Read more Photos on
click me!

Recommended Stories