ಜಾನೆ ಜಾನ್ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕರೀನಾ ವೈನ್ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಅವರು ತಮ್ಮ ಮೇಕ್ಅಪ್ ಅನ್ನು ನೈಸರ್ಗಿಕವಾಗಿ ಇಟ್ಟುಕೊಂಡರು ಮತ್ತು ಅವರ ಕೇಶವಿನ್ಯಾಸಕ್ಕಾಗಿ ಸರಳವಾದ ಬನ್ ಅನ್ನು ಆರಿಸಿಕೊಂಡರು.
ಕರೀನಾ ಕಪೂರ್ ಈ ಚಿತ್ರದ ಮೂಲಕ OTTಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 23 ವರ್ಷಗಳ ಹಿಂದೆ ತಾವು 2000 ರ ರೆಫ್ಯೂಜಿ ಚಲನಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸಮಯಕ್ಕಿಂತ ಈಗ ಹೆಚ್ಚು ಆತಂಕ ಹೊಂದಿದ್ದೇನೆ ಎಂದು ಅವರು ಈವೆಂಟ್‌ನಲ್ಲಿ ಒಪ್ಪಿಕೊಂಡರು.
'23 ವರ್ಷಗಳ ಹಿಂದೆ ಇದ್ದಕ್ಕಿಂತ ಹೆಚ್ಚು ಆತಂಕಕ್ಕೊಳಗಾಗಿದ್ದೇನೆ. ಏಕೆಂದರೆ ನಾನು ಕಿರುತೆರೆಯ ಪರದೆ ಮೇಲೆ ಪ್ರೋಮೋವನ್ನು ತುಂಬಾ ಹತ್ತಿರದಿಂದ ನೋಡುತ್ತಿದ್ದೆ. ಹಾಗಾಗಿ ಜನರು ತಮ್ಮ ಮನೆಗಳಲ್ಲಿ ನನ್ನನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ನಾನು ಆತಂಕಗೊಂಡಿದ್ದೇನೆ, ಆದರೆ ನನಗೆ ಒಂದು ವಿಷಯ ಖಚಿತವಾಗಿ ತಿಳಿದಿದೆ- ನಾವೆಲ್ಲರೂ ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡಿದ್ದೇವೆ,' ಎಂದು ಕರೀನಾ ಅವರು ಹೇಳಿದರು.
'ಆ ಸಮಯದಲ್ಲಿ ನಾನು ಜೆಹ್ ಗರ್ಭಿಣಿಯಾಗಿದ್ದೆ. ಮತ್ತು ಇದು ತುಂಬಾ ಸುಂದರ ಕಲ್ಪನೆ. ಎಲ್ಲ ಒಟ್ಟಿಗೆ ಸೇರಿದೆ. ಎಲ್ಲರೂ ನೆಟ್‌ಫ್ಲಿಕ್ಸ್‌ನಲ್ಲಿ ತುಂಬಾ ಕೆಲಸ ಮಾಡುತ್ತಿದ್ದಾರೆ ಮತ್ತು ಅದು ತುಂಬಾ ಒಳ್ಳೆಯದು. ನಾನು ಹಿಂದೆ ಉಳಿಯಲು ಬಯಸುವುದಿಲ್ಲ,' ಎಂದು ಓಟಿಟಿ ಎಂಟ್ರಿ ಬಗ್ಗೆ ಅವರು ಹೇಳಿದರು,
'ಜೈದೀಪ್ ಮತ್ತು ವಿಜಯ್ ಯಾವಾಗಲೂ ತುಂಬಾ ಸಿದ್ಧರಾಗಿರುತ್ತಾರೆ. ಸೈಫ್ ಹೇಳಿದ ಮಾತಿನೊಂದಿಗೆ ನಾನು ಶೂಟಿಂಗ್‌ಗೆ ಹೋಗಿದ್ದೆ. ಧೋರಣೆ ತೊರೆದು, ನಿನ್ನ ಕಾಲ ಮೇಲೆ ಇರುವುದು ಉತ್ತಮ ಎಂದು ಸೈಫ್ ಹೇಳಿದ್ದರು' ಎಂಬ ವಿಷಯವನ್ನು ಕರೀನಾ ಹಂಚಿಕೊಂಡಿದ್ದಾರೆ.
'ಅವರು (ವಿಜಯ್ ಮತ್ತು ಜೈದೀಪ್ ) ಅತ್ಯಂತ ಪ್ರತಿಭಾವಂತರು ಮತ್ತು ಸಂಭಾಷಣೆಗಳನ್ನು ಸುಧಾರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದೂ ಅವರು ಹೇಳಿದರು. ನಾನು ಶಾಲೆಯಲ್ಲಿ ವಿದ್ಯಾರ್ಥಿಯಂತೆ ಇರುತ್ತೇನೆ ಎಂದು ಸೈಫ್‌ಗೆ ಉತ್ತರಿಸಿದೆ. ಅವರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ನಾನು ನಿರಂತರವಾಗಿ ಗಮನಿಸುತ್ತಿದ್ದೆ' ಎಂದೂ ಕರೀನಾ ಇನ್ನಷ್ಟೂ ತೆರೆದು ಕೊಂಡರು.
'ಜೈದೀಪ್ ಯಾವಾಗಲೂ ಕೆಲಸದಲ್ಲಿ ತುಂಬಾ ತಯಾರಿ ಮತ್ತು ಸಂಯೋಜನೆ ಹೊಂದಿದ್ದರು. ವಿಜಯ್ ಸ್ವಲ್ಪ ನನ್ನಂತೆಯೇ, ಅವರು ಸೆಟ್‌ನಲ್ಲಿ ನಗುತ್ತಾ ಮೋಜು ಮಾಡುತ್ತಾರೆ, ಆದರೆ ಅವರ ಪ್ರತಿಯೊಂದು ದೃಶ್ಯವೂ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಅವರು ಚಿಂತನಶೀಲ ವ್ಯಕ್ತಿ. ಸೆಟ್‌ನಲ್ಲಿ ಆ ವಾತಾವರಣದಲ್ಲಿ ಇದ್ದುದರಿಂದ ನಾನು ಕೂಡ ಸದಾ ಜಾಗೂರಕಳಾಗಿದೆ. ನಟನಿಗೆ ಯಾವಾಗಲೂ ಸೆಟ್‌ನಲ್ಲಿ ಇತರ ನಟರು ಭಯ ಇರಬೇಕು, ಇಲ್ಲದಿದ್ದರೆ ಅದು ಫಲಪ್ರದವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಸುತ್ತಲೂ ಒಂದು ನಿರ್ದಿಷ್ಟ ಮಟ್ಟದ ಜಾಗರೂಕತೆಯನ್ನು ಹೊಂದಿರುವುದು ಸಂತೋಷ,' ಎಂದು ಕರೀನಾ ಹೇಳಿದರು.
ಜಾನೆ ಜಾನ್ ಚಿತ್ರವನ್ನು ಸುಜೋಯ್ ಘೋಷ್ ನಿರ್ದೇಶಿಸಿದ್ದಾರೆ ಮತ್ತು ಕರೀನಾ ಕಪೂರ್ ಖಾನ್ ಮತ್ತು ವಿಜಯ್ ವರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ನೆಟ್‌ಫ್ಲಿಕ್ಸ್ ಚಿತ್ರದ ಟ್ರೈಲರ್ ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಿದೆ. ಕರೀನಾ ಕಪೂರ್ ಖಾನ್ ಸಂಪೂರ್ಣ ಹೊಸ ಗಮನಾರ್ಹ ನೋಟದಲ್ಲಿ ಕಾಣಿಸಿಕೊಂಡಿದ್ದು ತಾಯಿ ಪಾತ್ರವನ್ನು ಹೊಂದಿದ್ದಾರೆ.
ಜಾನೆ ಜಾನ್ ಕರೀನಾ ಅವರ ಜನ್ಮದಿನ ಸೆಪ್ಟೆಂಬರ್ 21 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಕೀಗೊ ಹಿಗಾಶಿನೊ ಅವರ ಹೆಚ್ಚು ಮಾರಾಟವಾದ ಕಾದಂಬರಿ ಡೆವೊಷನ್ ಆಫ್ ಸಸ್ಪೆಕ್ಟ್ ಎಕ್ಸ್‌ನ ಅಧಿಕೃತ ರೂಪಾಂತರ.