ಈ ಕಾರಣಕ್ಕೆ ಈ ವರ್ಷ Salaman Khan ಮನೆಯಲ್ಲಿ ಇಲ್ಲ ಈದ್‌ ಪಾರ್ಟಿ !

Published : May 03, 2022, 05:07 PM IST

ಮಂಗಳವಾರ ವಿಶ್ವದಾದ್ಯಂತ ಈದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಾಮಾನ್ಯ ಜನರಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳವರೆಗೆ ಈದ್ ಹಬ್ಬವನ್ನು ಸಡಗರದಿಂದ ಆಚರಿಸುತ್ತಾರೆ.ಪ್ರತಿ ವರ್ಷ ಈದ್ ಸಂದರ್ಭದಲ್ಲಿ ಎಲ್ಲರೂ ಸಲ್ಮಾನ್ ಖಾನ್ (Salman Khan) ಅವರ ಈದ್ ಪಾರ್ಟಿಗಾಗಿ ಕಾಯುತ್ತಾರೆ. ವಾಸ್ತವವಾಗಿ, ಬಾಲಿವುಡ್‌ಗೆ ಸಂಬಂಧಿಸಿದ ಹೆಚ್ಚಿನ ಸೆಲೆಬ್ರಿಟಿಗಳು ಸಂಭ್ರಮಾಚರಣೆಗಾಗಿ ಸಲ್ಮಾನ್ ಅವರ ಮನೆಗೆ ತಲುಪುತ್ತಾರೆ. ಅದೇ ಸಮಯದಲ್ಲಿ, ವರದಿಗಳ ಪ್ರಕಾರ ಈ ಬಾರಿ ಸಲ್ಮಾನ್ ಮನೆಯಲ್ಲಿ ಈದ್ ಪಾರ್ಟಿ ನಡೆಯುವುದಿಲ್ಲ ವಂತೆ. 

PREV
18
ಈ ಕಾರಣಕ್ಕೆ ಈ  ವರ್ಷ Salaman Khan ಮನೆಯಲ್ಲಿ ಇಲ್ಲ ಈದ್‌ ಪಾರ್ಟಿ !

ಈ ಬಾರಿಯ ಈದ್ ಪಾರ್ಟಿಯ ಜವಾಬ್ದಾರಿಯನ್ನು ಸಲ್ಮಾನ್ ತಮ್ಮ ಸಹೋದರಿ ಅರ್ಪಿತಾ ಖಾನ್ ಮತ್ತು ಅವರ ಪತಿ ಆಯುಷ್ ಶರ್ಮಾ ಅವರಿಗೆ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದಂಪತಿಗಳು ತಡರಾತ್ರಿ ಅನೇಕ ಸೆಲೆಬ್ರಿಟಿಗಳಿಗೆ ಈದ್ ಪಾರ್ಟಿಯ ಆಮಂತ್ರಣಗಳನ್ನು ಕಳುಹಿಸಿದ್ದಾರೆ. 

28

ಈಟೈಮ್ಸ್ ಜೊತೆ ಮಾತನಾಡುತ್ತಾ, ಕುಟುಂಬದ ಹತ್ತಿರದ ಮೂಲಗಳು ಈ ವರ್ಷದ ಈದ್ ಪಾರ್ಟಿಯನ್ನು ಆಯುಷ್  ಮತ್ತು ಅರ್ಪಿತಾ ಆಯೋಜಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅರ್ಪಿತಾ ಖಾನ್ ಅವರ ಹೊಸ ಅಪಾರ್ಟ್‌ಮೆಂಟ್‌ನಲ್ಲಿ ಈದ್ ಪಾರ್ಟಿ ನಡೆಯಲಿದೆ
.
 

38

ಹೊರಬರುತ್ತಿರುವ ವರದಿಗಳ ಪ್ರಕಾರ, ಈ ಬಾರಿಯ ಈದ್ ಪಾರ್ಟಿ ಖಾರ್‌ನಲ್ಲಿರುವ  ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅವರ ಹೊಸ ಅಪಾರ್ಟ್‌ಮೆಂಟ್‌ನಲ್ಲಿ ನಡೆಯಲಿದೆ. ಮೂಲಗಳ ಪ್ರಕಾರ ಪ್ರತಿ ವರ್ಷದಂತೆ ಈ ವರ್ಷವೂ ಅನೇಕ ಸೆಲೆಬ್ರಿಟಿಗಳು ಪಾರ್ಟಿಗೆ ಹಾಜರಾಗಿದ್ದಾರೆ ಎಂದು  ವರದಿಯಾಗಿದೆ. 

48

ಇಡೀ ಖಾನ್ ಕುಟುಂಬ ಈ ಪಾರ್ಟಿಯಲ್ಲಿ ಭಾಗಿಯಾಗುತ್ತದೆ ಮತ್ತು ಒಟ್ಟಿಗೆ ಆಚರಿಸುತ್ತದೆ. ಈದ್ ಪಾರ್ಟಿಯಲ್ಲಿ ಪಾಲ್ಗೊಳ್ಳುವಂತೆ ಅರ್ಪಿತಾ-ಆಯುಷ್ ಸೆಲೆಬ್ರಿಟಿಗಳಿಗೆ ಮತ್ತು ಸಹೋದರ ಸಲ್ಮಾನ್ ಖಾನ್ ಅವರ ಆಪ್ತರಿಗೆ ಆಹ್ವಾನವನ್ನು ಕಳುಹಿಸಿದ್ದಾರೆ. 

58

ಹೊರಬರುತ್ತಿರುವ ಮಾಹಿತಿ ಪ್ರಕಾರ, ಅರ್ಪಿತಾ-ಆಯುಷ್ ಈದ್ ಪಾರ್ಟಿಗೆ ಸ್ಥಳ, ಆಹಾರ ಮತ್ತು ಸಂಗೀತಕ್ಕಾಗಿ ವಿಶೇಷ ಯೋಜನೆ ಕೂಡ ಮಾಡಿದ್ದಾರೆ.  ಈ ವರ್ಷದ ಆರಂಭದಲ್ಲಿ ಇಬ್ಬರೂ ಖರೀದಿಸಿದ ತಮ್ಮ ಫ್ಲೈಯಿಂಗ್ ಕಾರ್ಪೆಟ್ ಕಟ್ಟಡದಲ್ಲಿ ದಂಪತಿಗಳು ತಮ್ಮ ಹೊಸ ಅಪಾರ್ಟ್ಮೆಂಟ್‌ನಲ್ಲಿ ಪಾರ್ಟಿಯನ್ನು ಆಯೋಜಿಸುತ್ತಾರೆ.

68

ಈ ದಿನಗಳಲ್ಲಿ ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಅವರು ತಮ್ಮ ಮುಂಬರುವ ಚಿತ್ರ ಕಭಿ ಈದ್ ಕಭಿ  ದೀವಾಲಿ ಚಿತ್ರಕ್ಕಾಗಿ ಸುದ್ದಿಯಲ್ಲಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ ಎಂದು ವರದಿಯಾಗಿದೆ. 

78

ಈ ಚಿತ್ರದಲ್ಲಿ ಅವರ ಜೊತೆ   ಆಯುಷ್ ಶರ್ಮಾ ಮತ್ತು ಶಹನಾಜ್ ಗಿಲ್  ಸಹ ನಟಿಸಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹೊರಬಂದಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಪೂಜಾ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. 

88

ಇದಲ್ಲದೆ, ಸಲ್ಮಾನ್ ಶೀಘ್ರದಲ್ಲೇ ತಮ್ಮ ಬಹು ನಿರೀಕ್ಷಿತ ಚಿತ್ರ ನೋ ಎಂಟ್ರಿ 2 ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ ಎಂಬ ಸುದ್ದಿ ಇದೆ. ಅನೀಸ್ ಬಾಜ್ಮಿ ನಿರ್ದೇಶನದ ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಫರ್ದೀನ್ ಖಾನ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories