Anushka Sharma ಅವರ ಬರ್ತ್‌ಡೇ ಡ್ರೆಸ್‌ ಬೆಲೆ ಎಷ್ಷು ಗೊತ್ತಾ?

Published : May 03, 2022, 05:03 PM IST

ಮೇ 1 ರಂದು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ (Anushka Sharma) ತಮ್ಮ ಹುಟ್ಟುಹಬ್ಬವನ್ನು ಬಹಳ ವಿಶೇಷ ರೀತಿಯಲ್ಲಿ ಆಚರಿಸಿಕೊಂಡರು. ಹುಟ್ಟುಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಶೇಷ ಸಂದರ್ಭಕ್ಕಾಗಿ ನಟಿ ತುಂಬಾ ಸುಂದರವಾದ ಉಡುಪನ್ನು ಆರಿಸಿಕೊಂಡರು. ಸಿಂಪಲ್‌ ಆಗಿ ಕಾಣುವ ಆ ಡ್ರೆಸ್‌ ಬೆಲೆ ಕೇಳಿದರೆ ಶಾಕ್‌ ಆಗುವುದು ಗ್ಯಾರಂಟಿ.

PREV
16
 Anushka Sharma ಅವರ ಬರ್ತ್‌ಡೇ ಡ್ರೆಸ್‌ ಬೆಲೆ ಎಷ್ಷು ಗೊತ್ತಾ?

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೇ 1 ರಂದು ತಮ್ಮ 34 ನೇ ಹುಟ್ಟುಹಬ್ಬವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸಿಕೊಂಡರು. ಅವರ ಹುಟ್ಟುಹಬ್ಬದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 

26

ಹುಟ್ಟುಹಬ್ಬದಂದು ವಿರಾಟ್ ಕೊಹ್ಲಿಯ ಲೇಡಿ ಲವ್‌ ನಟಿ ಅನುಷ್ಕಾ ಶರ್ಮ ಹೂವಿನ ಪ್ರಿಟೆಂಡ್‌ ಉಡುಗೆಯನ್ನು ಧರಿಸಿದ್ದರು. ಇದರಲ್ಲಿ ಅವರು ತುಂಬಾ ಮುದ್ದಾಗಿ ಕಾಣುತ್ತಿದ್ದರು. ಅಷ್ಟಕ್ಕೂ ಈ ಸಮಯದಲ್ಲಿ ನಟಿ ತೊಟ್ಟಿರುವ ಡ್ರೆಸ್‌ನ ಬೆಲೆ ಎಷ್ಟು  ಗೊತ್ತಾ?

36

ಅನುಷ್ಕಾ ಶರ್ಮಾ ತಮ್ಮ ಹುಟ್ಟುಹಬ್ಬದ ಆಚರಣೆಯ ಮೂರು ಫೋಟೋಗಳನ್ನು ತಮ್ಮ Instagram ನಲ್ಲಿ ಹಂಚಿಕೊಂಡಿದ್ದಾರೆ. ಒಂದು ಚಿತ್ರದಲ್ಲಿ, ಅವರು ಕೇಕ್ ತಿನ್ನುತ್ತಿರುವುದನ್ನು ಕಾಣಬಹುದು.  ಎರಡನೇ ಚಿತ್ರದಲ್ಲಿ, ಅವರು ಕ್ಯಾಮೆರಾವನ್ನು ನೋಡುತ್ತಾ ನಗುತ್ತಿದ್ದಾರೆ.

46

'ನಾನು ಹೆಚ್ಚು ಸಂತೋಷವಾಗಿದ್ದೇನೆ, ಹೆಚ್ಚು ಪ್ರೀತಿಸುತ್ತೇನೆ, ಹೆಚ್ಚು ಅರ್ಥಮಾಡಿಕೊಳ್ಳುತ್ತೇನೆ, ನನ್ನನ್ನು ಕಡಿಮೆ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇನೆ, ಹೆಚ್ಚು ಕೇಳುತ್ತಿದ್ದೇನೆ, ಕಡಿಮೆ ಸಂತೋಷವನ್ನು ಕಂಡುಕೊಳ್ಳುತ್ತಿದ್ದೇನೆ, ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ, ನನ್ನನ್ನು, ಇತರರನ್ನು ಮತ್ತು ಸನ್ನಿವೇಶಗಳನ್ನು ಹೆಚ್ಚು  ಒಪ್ಪಿಕೊಳ್ಳಲು ನನಗೆ ಸಾಧ್ಯವಾಗುತ್ತದೆ.  ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸುತ್ತೇನೆ ನನ್ನ ಅಭಿಪ್ರಾಯಗಳನ್ನು  ಸ್ವತಃ  ಗೌರವಿಸುತ್ತೇನೆ. ಈ ಏಜಿಂಗ್‌ ಬ್ಯುಸಿನೆಸ್‌  ಉತ್ತಮವಾಗಿ ನಡೆಯುತ್ತಿದೆ.  ಪ್ರತಿಯೊಬ್ಬರೂ ಅದನ್ನು ಪ್ರಯತ್ನಿಸಬೇಕು.  ನೀವು ನನಗೆ ಕಳುಹಿಸಿದ ಎಲ್ಲಾ ಶುಭಾಶಯಗಳು ಮತ್ತು ಪ್ರೀತಿಗೆ ಧನ್ಯವಾದಗಳು' ಎಂದು ಅನುಷ್ಕಾ ಫೋಟೋ ಜೊತೆ ಬರೆದಿದ್ದಾರೆ. 

56

ಇನ್ನೂ ಹುಟ್ಟುಹಬ್ಬದಂದು ಅನುಷ್ಕಾ  ಡ್ರೆಸ್ ತೊಟ್ಟಿದ್ದ ಉಡುಪಿನ ಬೆಲೆ ಮತ್ತು ಬ್ರಾಂಡ್ ಬಗ್ಗೆ  ಹೇಳುವುದಾದರೆ ಅನುಷ್ಕಾ ತನ್ನ ಹುಟ್ಟುಹಬ್ಬದಂದು 'ಜಿಮ್ಮರ್‌ಮ್ಯಾನ್' ಬ್ರಾಂಡ್ ಡ್ರೆಸ್ ಧರಿಸಿದ್ದರು. ಈ ಉಡುಪಿನ ಬೆಲೆ $ 650 ಅಂದರೆ 49,740 ರೂಪಾಯಿಗಳು.

66

ಕೆಲಸದ ಮುಂಭಾಗದಲ್ಲಿ, ಅನುಷ್ಕಾ ಮುಂದಿನ ದಿನಗಳಲ್ಲಿ 'ಚಕ್ಡಾ ಎಕ್ಸ್‌ಪ್ರೆಸ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅವರು ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಜೂಲನ್ ಗೋಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories