ನನಗೂ ಸಹಾಯ ಬೇಕಿದೆ ನನ್ನ ಪರ ಯಾರೂ ನಿಲ್ಲುತ್ತಿಲ್ಲ; ಬೇಸರ ಹೊರ ಹಾಕಿದ ಸಲ್ಮಾನ್ ಖಾನ್

Published : Apr 03, 2025, 04:54 PM ISTUpdated : Apr 03, 2025, 05:02 PM IST

ಯಾಕೆ ಸಲ್ಮಾನ್ ಖಾನ್ ಸಿನಿಮಾ ಕೂಡ ಫ್ಲಾಪ್ ಆಗುತ್ತಿದೆ? ಬಾಯ್‌ಗೆ ಸಪೋರ್ಟ್‌ ಬೇಕಾ ಅಂತ ಯಾರೂ ಯಾಕೆ ಕೇಳಿಲ್ಲ?  

PREV
16
ನನಗೂ ಸಹಾಯ ಬೇಕಿದೆ ನನ್ನ ಪರ ಯಾರೂ ನಿಲ್ಲುತ್ತಿಲ್ಲ; ಬೇಸರ ಹೊರ ಹಾಕಿದ ಸಲ್ಮಾನ್ ಖಾನ್

ಹಿಂದಿ ಸಿನಿಮಾ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್, ಸೈಫ್ ಅಲಿ ಖಾನ್...ಹೀಗೆ ಒಂದಿಷ್ಟು ಜನರನ್ನು ವೀಕ್ಷಕರು ಹಟ್ಟ ಏರಿಸಿದರು. ಇವರ ಸಿನಿಮಾಗಳು ರಿಲೀಸ್ ಆದ್ರೆ ಮಾತ್ರ ಬಾಕ್ಸ್ ಆಫೀಸ್ ಮುಟ್ಟುತ್ತದೆ ಎನ್ನುತ್ತಿದ್ದರು.

26

ಇಷ್ಟು ದಿನ ಹೊಸಬರ ಸಿನಿಮಾ ನೋಡಲು ಜನ ಬರುತ್ತಿರಲಿಲ್ಲ ಆದರೆ ಈಗ ಸ್ಟಾರ್ ನಟ-ನಟಿಯರ ಸಿನಿಮಾ ನೋಡಲ ಕೂಡ ಬರುತ್ತಿಲ್ಲ. ಹೀಗಿರುವ ಬಾಕ್ಸ್ ಆಫೀಸ್‌ ಸುಲ್ತಾನ್‌ಗಳು ಇರಲಿ ಕೆಲಸ ಮಾಡುತ್ತಿರುವ ಸಣ್ಣ ಪುಟ್ಟ ಕಲಾವಿದರ ಪರಿಸ್ಥಿತಿ ಏನು? 

36

ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಸಿನಿಮಾ ರಿಲೀಸ್ ಆಯ್ತು. ದಿನದಿನಕ್ಕೆ ಕಲೆಕ್ಷನ್ ಕಡಿಮೆ ಆಗುತ್ತಿದೆ ಹೊರತು ಜಾಸ್ತಿ ಆಗುತ್ತಿಲ್ಲ. ಇದು ಸಲ್ಮಾನ್ ಖಾನ್‌ಗೆ ಮಾತ್ರವಲ್ಲ ಇಡೀ ಬಾಲಿವುಡ್‌ ಮಂದಿಗೆ ಶಾಕ್ ಆಗಿದೆ.

46

ಸಲ್ಮಾನ್ ಖಾನ್ ಮೇಲೆ ಕೋಟಿ ಸುರಿದರೆ ಡಬಲ್ ಕೋಟಿ ಬರುತ್ತೆ ಅಂತಾರೆ. ಇನ್ನು ಕಡಿಮೆ ಬಜೆಟ್ ಸಿನಿಮಾಗಳು ಸುಮ್ಮನೆ ರಿಲೀಸ್ ಮಾಡಿದರೂ 200 ಕೋಟಿ ಗಳಿಸುತ್ತದೆ ಆದರೆ ಈಗ ಅದೂ ಇಲ್ಲದಂತೆ ಆಗಿರುವುದು ಸಲ್ಮಾನ್ ಖಾನ್‌ಗೆ ಬೇಸರವಾಗಿದೆ.

56

ಯಾರ ಸಿನಿಮಾ ರಿಲೀಸ್‌ಗೆ ಸಜ್ಜಾಗಿದ್ದರೂ ಟ್ರೈಲರ್, ಟೀಸರ್, ಪೋಸ್ಟ್ ಹಾಗೂ ಫಸ್ಟ್‌ ಲುಕ್‌ ರಿಲೀಸ್ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಾಗಿಯಾಗುತ್ತಾರೆ ಆದರೆ ಸಲ್ಮಾನ್ ಸಿನಿಮಾಗೆ ಮಾತ್ರ ಯಾರು ಯಾಕೆ ಸಪೋರ್ಟ್ ಮಾಡುವುದಿಲ್ಲ ಅನ್ನೋದು ದೊಡ್ಡ ಪ್ರಶ್ನೆ.

66

ನನ್ನ ಚಿತ್ರಕ್ಕೂ ಎಲ್ಲರ ಸಪೋರ್ಟ್ ಬೇಕಿದೆ, ಬಾಲಿವುಡ್‌ ನನ್ನ ಪರವಾಗಿಯೂ ನಿಂತುಕೊಳ್ಳಬೇಕಿದೆ. ನನ್ನ ಸಿನಿಮಾ ಬಗ್ಗೆ ಯಾರೂ ಪಾಸಿಟಿವ್ ಮಾತನಾಡುವುದು ಅಥವಾ ವಿಮರ್ಶೆ ಬರೆಯುವುದನ್ನು ನಾನು ನೋಡಿಲ್ಲ ಎಂದು ಸಲ್ಲು ಬೇಸರ ಹೊರ ಹಾಕಿದರಂತೆ.

Read more Photos on
click me!

Recommended Stories