ಇನ್ಮುಂದೆ ತಮಿಳು ನಟ ವಿಜಯ್‌ಗೆ ʼದಳಪತಿʼ ಎನ್ನಬೇಡಿ! ಹೊಸ ಹೆಸರು ಕೊಟ್ಟ TVK!
ಬಹಳ ಸಮಯದಿಂದ ದಳಪತಿ ವಿಜಯ್‌ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನಲಾಗಿತ್ತು. ಕೊನೆಗೂ ಅವರು ರಾಜಕೀಯಕ್ಕೆ ಬಂದಿದ್ದಾರೆ. ಈಗ ಇವರು ಹೆಸರು ಬದಲಾಗಿದ್ಯಾ? ಯಾರು ಹೆಸರಿಟ್ಟರು?
ಬಹಳ ಸಮಯದಿಂದ ದಳಪತಿ ವಿಜಯ್‌ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನಲಾಗಿತ್ತು. ಕೊನೆಗೂ ಅವರು ರಾಜಕೀಯಕ್ಕೆ ಬಂದಿದ್ದಾರೆ. ಈಗ ಇವರು ಹೆಸರು ಬದಲಾಗಿದ್ಯಾ? ಯಾರು ಹೆಸರಿಟ್ಟರು?
ಸಿನಿಮಾ ಮಾಡುವ ಟೈಮ್‌ನಿಂದಲೂ ದಳಪತಿ ವಿಜಯ್ ಅವರು ರಾಜಕೀಯದತ್ತ ಗಮನ ನೀಡಿದ್ದರು. ರಾಜಕೀಯದ ಬಗ್ಗೆ ಮಾತುಗಳನ್ನಾಡಿ ವಿರೋಧವನ್ನು ಕೂಡ ವ್ಯಕ್ತಪಡಿಸಿದ್ದರು.
2024ರಲ್ಲಿ ಯಾವ ಪಕ್ಷಕ್ಕೂ ಸೇರದೆ, ದಳಪತಿ ವಿಜಯ್ ಅವರು ʼತಮಿಳಗ ವೆಟ್ರಿ ಕಳಗಂʼ (TVK ) ಎಂಬ ಪಕ್ಷ ಸ್ಥಾಪನೆ ಮಾಡಿದ್ದಾರೆ.
TVK ಸಭೆಯಲ್ಲಿ ಆಧವ್ ಅರ್ಜುನ್ ಮಾತನಾಡಿ, "ದಳಪತಿ ವಿಜಯ್‌ಇನ್ಮುಂದೆ ದಳಪತಿ ಅಲ್ಲ, ವೆಟ್ರಿ ತಲೈವರ್‌ವಿಜಯ್‌ಎಂದು ಕರೆದಿದ್ದಾರೆ. ಈ ಮೂಲಕ ವಿಜಯ್‌ಗೆ ಹೊಸ ಹೆಸರು ನೀಡಲಾಗಿದೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆಯಲ್ಲಿ ವಿಜಯ್‌ಪಕ್ಷದವರು ಸ್ಪರ್ಧೆ ಮಾಡಲಿದ್ದಾರಂತೆ. ಈಗಾಗಲೇ ಅವರು ತಮಿಳುನಾಡಿನ ಡಿಎಂಕೆ ಪಕ್ಷ ಹಾಗೂ ನರೇಂದ್ರ ಮೋದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಟಿವಿಕೆ ಮೊದಲ ಸಭೆಯಲ್ಲಿ ಗಡಿ ನಿರ್ಣಯ, ಹಿಂದಿ ಹೇರಿಕೆ, ಜಿಎಸ್‌ಟಿ ಸಂಗ್ರಹದ ಬಗ್ಗೆ ಮಾತನಾಡಿದ್ದರು.
ಇನ್ನು ರಾಜಕೀಯದತ್ತ ಅವರು ಮುಖ ಮಾಡಲಿದ್ದು, ಸಿನಿಮಾದಿಂದ ದೂರ ಆಗಲಿದ್ದಾರೆ ಎನ್ನಲಾಗುತ್ತಿದೆ. ʼಜನ ನಾಯಗನ್ʼಸಿನಿಮಾ ಇವರ ಕೊನೇಸಿನಿಮಾ ಎಂಬ ಮಾತು ಕೇಳಿ ಬರುತ್ತಿದೆ.