ನನ್ನ ಕುಛ್ ಕುಚ್ ಹೋತಾ ಚಿತ್ರದಲ್ಲಿ ಬರುವ ಸಣ್ಣ ಪಾತ್ರಕ್ಕೆ ಆಗಲೇ ಹಲರವನ್ನು ಭೇಟಿಯಾಗಿದ್ದೆ. ಆದರೂ ಯಾರೂ ಆ ಪಾತ್ರ ನಿರ್ವಹಿಸಲು ಒಪ್ಪಲೇ ಇಲ್ಲ. ಈ ಬಗ್ಗೆ ಕರಣ್ ಚಿಂತಿತರಾಗಿದ್ದರೆ. ಯಾವದೋ ಪಾರ್ಟಿಯಲ್ಲಿ ಮೂಲೆಯಲ್ಲಿ ಇದರ ಬಗ್ಗೆಯೇ ಯೋಚಿಸ್ತಾ ನಿಂತಿದ್ದರಂತೆ. ಆಗ, ಸಲ್ಮಾನ್ ಖಾನ್ ಬಂದು ಏನ್ ಪ್ರಾಬ್ಲಂ ಅಂತ ಕೇಳಿದಾಗ ಕಾರಣವನ್ನೂ ಹೇಳಿದ್ದರಂತೆ. ನಂತರ ನಾನೇ ಟ್ರೈ ಮಾಡುತ್ತೇನೆಂದು ತುಂಬು ಹೃದಯದಿಂದ ತಾವಾಗೇ ಒಪ್ಪಿಕೊಂಡರಂತೆ. ಇದು ನಂಗೆ ನಂಬಲೂ ಆಗದ ವಿಷಯವೆಂದು ಕರಣ್ ಹೇಳಿ ಕೊಂಡಿದ್ದಾರೆ.