ಇಂದು ದೀಪಿಕಾ ಪಡುಕೋಣೆ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಜನಪ್ರಿಯ ಹೆಸರು. ಸಿನಿಮಾಗಳ ಜೊತೆ ಹಲವು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ರಾಯಭಾರಿ ಆಗಿದ್ದಾರೆ.
ಪ್ರಸ್ತುತ ದೀಪಿಕಾ ಪಡುಕೋಣೆ ಬಾಲಿವುಡ್ ಸೂಪರ್‌ಸ್ಟಾರ್ ಆಗಿದ್ದು, ಅವರು 2007 ರಲ್ಲಿ ಓಂ ಶಾಂತಿ ಓಂ ಮೂಲಕ ಉದ್ಯಮಕ್ಕೆ ಪ್ರವೇಶಿಸಿದಾಗಿನಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಸಿನಿಮಾ ನಟಿಯ ಜೊತೆಗೆ ಗ್ಲೋಬಲ್ ಐಕಾನಿಕ್ ಆಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿರುವ ದೀಪಿಕಾ ಪಡುಕೋಣೆ ಅವರ ಸಾಧನೆಯ ಹಿಂದೆ ಬ್ಯಾಡ್ಮಿಂಟನ್ ಆಟ ಪ್ರಮುಖ ಪಾತ್ರವಹಿಸಿದೆ.
ದೀಪಿಕಾರ ಯಶಸ್ಸಿನ ಜರ್ನಿಯಲ್ಲಿ ಕ್ರೀಡೆ ತನ್ನ ಪಾತ್ರವನ್ನು ವಹಿಸಿದೆ .ಈ ಮಟ್ಟಕ್ಕೆ ಬೆಳೆಯುವಲ್ಲಿ ನಿರ್ದಿಷ್ಟವಾಗಿ ಬ್ಯಾಡ್ಮಿಂಟನ್ ಪಾತ್ರ ಬಹಳ ಮುಖ್ಯ ಎಂದು ಸ್ವತಃ ದೀಪಿಕಾ ಪಡುಕೋಣೆ ಅವರು ಒಪ್ಪಿಕೊಂಡಿದ್ದಾರೆ.
ಮೂಲತಃ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ನಟಿಯ ಜೀವನ ಶೈಲಿಯಲ್ಲಿ ಶಿಸ್ತು (Desciplene) ಆಳವಡಿಸಿಕೊಳ್ಳಲು ಮತ್ತು ಅವರ ಕ್ಷೇತ್ರದಲ್ಲಿ ಶ್ರೇಷ್ಠತೆಗಾಗಿ ಶ್ರಮಿಸಲು ಈ ಆಟ ಸಹಾಯ ಮಾಡಿದೆ
ಬ್ಯಾಡ್ಮಿಂಟನ್ ದೀಪಿಕಾ ಪಡುಕೋಣೆ ರಕ್ತದಲ್ಲಿದೆ. ಆಕೆಯ ತಂದೆ ಪ್ರಕಾಶ್ ಪಡುಕೋಣೆ ಭಾರತೀಯ ಬ್ಯಾಡ್ಮಿಂಟನ್ ಲೆಜೆಂಡ್ (Indian Badminton Legend) ಆಗಿದ್ದು, ಅವರು 1971 ರಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ.
ದೀಪಿಕಾ ಅವರ ವ್ಯಕ್ತಿತ್ವವನ್ನು (Personality) ರೂಪಿಸುವಲ್ಲಿ ಮತ್ತು ಅವರು ಜಾಗತಿಕ ಸೂಪರ್‌ಸ್ಟಾರ್ ಆಗಲು ಸಹಾಯ ಮಾಡಿದ ಕೀರ್ತಿ ಪ್ರಾಥಮಿಕವಾಗಿ ಬ್ಯಾಡ್ಮಿಂಟನ್ ಆಟಕ್ಕೆ ಸಲ್ಲುತ್ತದೆ.
ಶಿಸ್ತಿನ ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಅಡಿಪಾಯವನ್ನು ಬ್ಯಾಡ್ಮಿಂಟನ್ ದೀಪಿಕಾ ಪಡುಕೋಣೆ ಅವರ ಭವಿಷ್ಯದ ಯಶಸ್ಸಿಗೆ ಒದಗಿಸಿದೆ.
ಪರಿಶ್ರಮ (Hard Work), ಟೀಮ್‌ವರ್ಕ್ (Team Work) ಮತ್ತು ಎಲ್ಲಾ ಕಷ್ಟಗಳ ವಿರುದ್ಧ ಉತ್ತಮ ಸಾಧನೆ ಮಾಡಿ ತನ್ನ ಉನ್ನತ್ತ ವ್ಯಕ್ತಿತ್ವ ತಾನೇ ಬೆಳೆಸಿಕೊಳ್ಳುವ ಗುಣಗಳನ್ನು ಬ್ಯಾಡ್ಮಿಂಟನ್ ಅಂಕಣದಲ್ಲಿ ದೀಪಿಕಾ ಪಡುಕೋಣೆ ಪಡೆದುಕೊಂಡರು.
ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಹಾಲಿವುಡ್‌ನಲ್ಲೂ ಸಹ ತನ್ನ ಛಾಪು ಮೂಡಿಸಿರುವ ದೀಪಿಕಾ ಅವರ ಪ್ರಯಾಣದಲ್ಲಿ ಬ್ಯಾಡ್ಮಿಂಟನ್ ಪಾತ್ರವನ್ನು ಕಡೆಗಣಿಸಲು ಸಾಧ್ಯವಿಲ್ಲ.