ಬಾಲಿವುಡ್‌ನ ಈ ಅಪೂರ್ಣ ಲವ್‌ಸ್ಟೋರಿಗಳ ಜೋಡಿ ಇಂದಿಗೂ ಫೇಮಸ್‌

First Published | Feb 14, 2023, 6:59 PM IST

ಬಾಲಿವುಡ್‌ನಲ್ಲಿ ಕೆಲವು ಪ್ರೇಮಕಥೆಗಳು ಸಖತ್‌ ಫೇಮಸ್‌. ದಶಕಗಳು ಕಳೆದರೂ ಅವುಗಳ ಚರ್ಚೆ ಉಲ್ಲೇಖ ಆಗಾಗ ನಡೆಯುತ್ತಲೇ ಇರುತ್ತದೆ. ಆದರೆ ಈ ಪ್ರೇಮಕಥೆಗಳು ಗಮ್ಯ ಸ್ಥಾನ ತಲುಪಲು ಸಾಧ್ಯವಾಗಲಿಲ್ಲ. ಸಿನಿಮಾರಂಗದ ಬಹಳ ಜನಪ್ರಿಯ ಆದರೆ  ಅಪೂರ್ಣವಾಗಿ ಉಳಿದಿರುವ ಲವ್‌ಸ್ಟೋರಿ ಹಾಗೂ ಜೋಡಿಗಳು ಇವು.

ಹಮ್ ದಿಲ್ ದೇ ಚುಕೇ ಸನಮ್ ಚಿತ್ರದ ಶೂಟಿಂಗ್ ವೇಳೆ ಸಲ್ಮಾನ್ ಮತ್ತು ಐಶ್ವರ್ಯಾ ಪರಸ್ಪರ ಹತ್ತಿರವಾಗಿದ್ದರು. ಇಬ್ಬರ ಪ್ರೇಮಕಥೆಯು ನೂರಾರು ಸುದ್ದಿಗಳು ಹರಿದಾಡಿದವು. ಇಬ್ಬರೂ ಆಗಾಗ ಒಟ್ಟಿಗೆ ಕಾಣಿಸುತ್ತಿದ್ದರು. ಆದರೆ, ಅವರು 3-4 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಬೇರ್ಪಟ್ಟರು. ನಂತರ ಇಬ್ಬರೂ ಒಂದಷ್ಟು ಆರೋಪಗಳನ್ನು ಪರಸ್ಪರರ ಮೇಲೆ ಮಾಡಿ, ವಿವಾದಗಳೊಂದಿಗೆ ತಮ್ಮ ಸುಂದಾರವಾದ ಸಂಬಂಧ ಮುರಿದುಕೊಂಡರು. ಆದರೆ. ಇಂದಿಗೂ  ಇವರಿಬ್ಬರ ಪ್ರೇಮದ ಕಥೆ ಎಲ್ಲರ ನೆನಪಿನಲ್ಲಿ ಉಳಿದಿದೆ.
 

ಅಮಿತಾಬ್ ಬಚ್ಚನ್ ಮತ್ತು ರೇಖಾ ಬಗ್ಗೆ ಮಾತನಾಡುತ್ತಾ, ಅವರ ಪ್ರೇಮಕಥೆಯು ಅಪೂರ್ಣವಾಗಿಯೇ ಉಳಿದಿದೆ. ಇವರಿಬ್ಬರು ಮೊದಲು ಒಟ್ಟಿಗೆ ಕೆಲಸ ಮಾಡಿದ್ದು ದೋ ಅಂಜಾನೆ ಮೇ ಚಿತ್ರದಲ್ಲಿ. ಈ ಚಿತ್ರದ ನಂತರ, ರೇಖಾ ಬಿಗ್ ಬಿ ಬಗ್ಗೆ ಹುಚ್ಚರಾದರು ಮತ್ತು ಕ್ರಮೇಣ ಇಬ್ಬರ ನಿಕಟತೆ ಹೆಚ್ಚಾಗತೊಡಗಿತು. ನಂತರ ಇವರಿಬ್ಬರ ಜೋಡಿ ತೆರೆಯ ಮೇಲೆಯೂ ಸಿನಿ ಪ್ರೇಮಿಗಳಿಗೆ ಹುಚ್ಚು ಹಿಡಿಸಿತು. ಇಬ್ಬರ ಲವ್ ಸ್ಟೋರಿ ಇಂಡಸ್ಟ್ರಿಯಲ್ಲಿ ಚರ್ಚೆಯಾಯಿತು. ಅಂತಿಮವಾಗಿ ಜಯಾ ಬಚ್ಚನ್ ಅವರು ತಮ್ಮ ಮದುವೆ ಉಳಿಸಿಕೊಂಡರು. ಆದರೆ, ಇವತ್ತಿಗೂ ರೇಖಾ  ಬಿಗ್ ಬಿ ಪ್ರೀತಿಯ ವಿಷಯ ಪ್ರಸ್ತಾಪವಾಗುತ್ತದೆ.

Tap to resize

ಮದುವೆಯಾಗಿದ್ದರೂ ರಾಜ್ ಕಪೂರ್ ಹೃದಯ ನರ್ಗೀಸ್ ಅವರಿಗೆ ಸೋತಿತು. ನರ್ಗೀಸ್ ಕೂಡ ಅವರನ್ನು ಪ್ರೀತಿಸತೊಡಗಿದರು. ರಾಜ್ ಕಪೂರ್ ಅವರು ತಮ್ಮ ಪ್ರತಿಯೊಂದು ಚಿತ್ರದಲ್ಲೂ ನರ್ಗೀಸ್ ಅವರನ್ನು ಹಾಕಿಕೊಳ್ಳುವವರೆಗೆ ಪರಿಸ್ಥಿತಿ  ತಲುಪಿತ್ತು. ಆದರೆ ಇತರ ಪ್ರೇಮಕಥೆಗಳಂತೆ ಅವರ ಕಥೆಯೂ ಅಪೂರ್ಣವಾಗಿಯೇ ಉಳಿಯಿತು. ವಾಸ್ತವವಾಗಿ, ನರ್ಗೀಸ್ ರಾಜ್ ಕಪೂರ್ ಅವರನ್ನು ಮದುವೆಯಾಗಲು ಬಯಸಿದ್ದರು.ಆದರೆ ರಾಜ್‌ಕಪೂರ್‌  ಅವರು ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಬಿಡಲು ಸಿದ್ಧರಿರಲಿಲ್ಲ. ಇದನ್ನು ಮನಗಂಡ ನರ್ಗೀಸ್, ರಾಜ್ ಕಪೂರ್ ಜೊತೆಗಿನ ಸಂಬಂಧವನ್ನು ಮುರಿದುಕೊಂಡು ಸುನೀಲ್ ದತ್ ಅವರನ್ನು ಮದುವೆಯಾದರು.

ದಿಲೀಪ್ ಕುಮಾರ್ ಮತ್ತು ಮಧುಬಾಲಾ ಇಬ್ಬರ ನಡುವೆ ಅಪಾರ ಪ್ರೀತಿ ಇತ್ತು. ಆದರೆ ಮಧುಬಾಲಾ ತಂದೆಗೆ ದಿಲೀಪ್ ಕುಮಾರ್ ಜೊತೆ ತಮ್ಮ ಮಗಳು ಸಂಬಂಧ ಮುಂದುವರಿಸೋದು ಇಷ್ಟವಿರಲಿಲ್ಲ. ತಂದೆಯ ಒತ್ತಾಯದ ಮುಂದೆ ಮಧುಬಾಲಾ ತನ್ನ ಪ್ರೀತಿಯನ್ನು ತ್ಯಾಗ ಮಾಡಿದರು ಎನ್ನಲಾಗಿದೆ. 

ದೇವ್ ಆನಂದ್ ಮತ್ತು ಸುರಯ್ಯ ಅವರ ಪ್ರೇಮಕಥೆ ಇಂದಿಗೂ ನೆನಪಿದೆ. ಚಿತ್ರದ ಚಿತ್ರೀಕರಣದ ವೇಳೆ ಸುರಯ್ಯ ಅವರ ಜೀವಕ್ಕೆ ಅಪಾಯವಿದ್ದು, ದೇವ್ ಆನಂದ್ ಅವರನ್ನು ರಕ್ಷಿಸಿದ್ದರು ಎಂದು ಹೇಳಲಾಗಿದೆ. ಆಗ ದೇವ್ ಆನಂದ್ ಕೂಡ ಆಕೆಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಆದರೆ ಸುರಯ್ಯನ ಅಜ್ಜಿ ಈ ಸಂಬಂಧವನ್ನು ಒಪ್ಪಲಿಲ್ಲ,  ಹಿಂದೂ-ಮುಸ್ಲಿಂ ಎಂಬ ಕಾರಣದಿಂದ  ಪರಿಸ್ಥಿತಿ ಎಷ್ಟು ಹದಗೆಟ್ಟಿತು ಎಂದರೆ ಸುರಯ್ಯನ ಅಜ್ಜಿ ದೇವ್ ಆನಂದ್‌ಗೆ ಪೊಲೀಸರಿಂದ ಬೆದರಿಕೆ ಹಾಕಿದರು. ಇದಾದ ನಂತರ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುವುದನ್ನು ಬಿಟ್ಟು ಬೇರೆಯಾದರು.ದೇವ್ ಆನಂದ್ ಕಲ್ಪನಾ ಕಾರ್ತಿಕ್ ಅವರನ್ನು ಮದುವೆಯಾದರು. ಆದರೆ ಸುರಯ್ಯ ಅವರು ಸಾಯುವವರೆಗೂ ಹಾಗೇ ಇದ್ದರು.

ಶತ್ರುಘ್ನ ಸಿನ್ಹಾ ಮತ್ತು ರೀನಾ ರಾಯ್ ಅವರ ಅಪೂರ್ಣ ಪ್ರೇಮಕಥೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಒಟ್ಟಿಗೆ ಸಿನಿಮಾ ಮಾಡುವಾಗ ಅವರ ಪ್ರೀತಿ ಶುರುವಾಯಿತು. ಇದೇ ವೇಳೆ ಶತ್ರುಘ್ನ ಪೂನಂ ಅವರನ್ನು ಭೇಟಿಯಾದರು. ರೀನಾ ಯಾವುದೋ ಕೆಲಸದ ನಿಮಿತ್ತ ವಿದೇಶಕ್ಕೆ ಹೋದಾಗ ಶತ್ರುಘ್ನ ಪೂನಂ ಅವರನ್ನು ವಿವಾಹವಾದರು. ಆದರೆ, ಇದಾದ ಬಳಿಕವೂ ಅವರಿಬ್ಬರ ಸಂಬಂಧ ಮುಂದುವರೆಯಿತು. ರೀನಾ ಮದುವೆಯಾಗುವಂತೆ ಒತ್ತಡ ಹೇರಿದಾಗ ಪತ್ನಿಯನ್ನು ಬಿಡಲು ಮನಸ್ಸಾಗದೆ ರೀನಾ ಅವರಿಂದ ಶತ್ರುಘ್ನ ಸಿನ್ಹಾ ದೂರವಾದರು

Latest Videos

click me!