Salman Khan Movie shooting stopped: ಮಾಜಿ ಪ್ರೆಯಸಿಗಾಗಿ ತ್ಯಾಗ ಮಾಡಿದ ಬ್ಯಾಡ್ ಬಾಯ್

Suvarna News   | Asianet News
Published : Nov 12, 2021, 05:09 PM IST

ಸಲ್ಮಾನ್ ಖಾನ್ (Salman Khan) ತನ್ನ ಸ್ನೇಹಿತರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂಬುದು ಬಾಲಿವುಡ್ ಇಂಡಸ್ಟ್ರಿಯಲ್ಲಿ ಫೇಮಸ್. ಇತ್ತೀಚೆಗಷ್ಟೇ ಶಾರುಖ್ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್ (Aryan Khan) ಡ್ರಗ್ಸ್ (Drug) ಪ್ರಕರಣದಲ್ಲಿ ಜೈಲಿಗೆ ಹೋಗಿದ್ದಾಗ ಸಲ್ಮಾನ್ ಪಠಾಣ್ ಚಿತ್ರದ ಶೂಟಿಂಗ್ ಶೆಡ್ಯೂಲ್ ಅಡ್ಜೆಸ್ಟ್ ಮಾಡಿದ್ದರು. ಈಗ ಅವರು ಕತ್ರಿನಾ ಕೈಫ್‌ಗಾಗಿ (Katrina Kaif)ಇದೇ ರೀತಿಯದನ್ನು ಮಾಡಲು ಹೊರಟಿದ್ದಾರೆ ಎಂಬ ಸುದ್ದಿ ಇದೆ. ವರದಿಗಳ ಪ್ರಕಾರ ಡಿಸೆಂಬರ್‌ನಲ್ಲಿ ಕತ್ರಿನಾ ತನ್ನ ಗೆಳೆಯ ವಿಕ್ಕಿ ಕೌಶಲ್‌ನನ್ನು (Vicky Kaushal) ಮದುವೆಯಾಗಲಿದ್ದಾರೆ. ಆದ್ದರಿಂದ ಸಲ್ಮಾನ್ ತಮ್ಮ ಟೈಗರ್ 3 (Tiger 3) ಚಿತ್ರದ ಚಿತ್ರೀಕರಣವನ್ನು (Shooting) ಸದ್ಯಕ್ಕೆ ಮುಂದೂಡಿದ್ದಾರೆ.

PREV
16
Salman Khan Movie shooting stopped: ಮಾಜಿ ಪ್ರೆಯಸಿಗಾಗಿ ತ್ಯಾಗ ಮಾಡಿದ ಬ್ಯಾಡ್ ಬಾಯ್

ಸಲ್ಮಾನ್ ಟೈಗರ್ 3 ಚಿತ್ರದ ಶೂಟಿಂಗ್ ಅನ್ನು ಸದ್ಯಕ್ಕೆ ಮುಂದೂಡಿದ್ದಾರೆ. ವರದಿಗಳ ಪ್ರಕಾರ, ಈಗ ಈ ಶೂಟಿಂಗ್ ಜನವರಿ 2022 ರಲ್ಲಿ ಮಾತ್ರ ಪ್ರಾರಂಭವಾಗಲಿದೆ. ಟೈಗರ್ 3 ರ ಮುಂದಿನ ಶೆಡ್ಯೂಲ್ ಡಿಸೆಂಬರ್ ನಲ್ಲಿ  ಪ್ರಾರಂಭವಾಗಬೇಕಿತ್ತು.

26

ಆದರೆ ಆ ಸಮಯದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆ ಬಗ್ಗೆ ಮಾತುಕತೆಗಳಿವೆ. ಆದ್ದರಿಂದ ಸಲ್ಮಾನ್ ಶೂಟಿಂಗ್ ಅನ್ನು ಜನವರಿಗೆ ಮುಂದೂಡಿದ್ದಾರೆ ಎಂದು ಹೇಳಲಾಗುತ್ತಿದೆ.

36

ಮುಂಬರುವ ಚಿತ್ರ ಅನಾಮಿ: ಅಂತಿಮ ಸತ್ಯದ ಪ್ರಚಾರದಲ್ಲಿ ಈ ತಿಂಗಳು ಅಂದರೆ ನವೆಂಬರ್‌ನಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರ ನವೆಂಬರ್ 26 ರಂದು ಬಿಡುಗಡೆಯಾಗಲಿದೆ. ಮಹೇಶ್ ಮಂಜ್ರೇಕರ್ ನಿರ್ದೇಶಿಸಿದ ಈ ಚಿತ್ರವು ಮರಾಠಿ ಬ್ಲಾಕ್‌ಬಸ್ಟರ್ ಮುಲ್ಶಿ ಪ್ಯಾಟರ್ನ್‌ನ ರಿಮೇಕ್ ಆಗಿದ್ದು, ಇದರಲ್ಲಿ ಸಲ್ಮಾನ್ ಮತ್ತು ಅವರ ತಂಗಿ ಗಂಡ ಆಯುಷ್ ಶರ್ಮಾ ಕೂಡ ಕಾಣಿಸಿಕೊಳ್ಳಲಿದ್ದಾರೆ.

46

ಸಲ್ಮಾನ್ ಮತ್ತು ಶಾರುಖ್ ಆಪ್ತ ಸ್ನೇಹಿತರು. ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಸಂದರ್ಭದಲ್ಲೂ ಸಲ್ಮಾನ್‌ ಖಾನ್‌ ಅವರು ಶಾರುಖ್ ಅವರ ಬೆಂಬಲಕ್ಕೆ ನಿಂತಿದ್ದರು. ಆರ್ಯನ್ ಬಂಧನದ ನಂತರ ಶಾರುಖ್ ಅವರನ್ನು ಭೇಟಿಯಾದ ಮೊದಲ ವ್ಯಕ್ತಿ ಸಲ್ಮಾನ್. 

56

ಇದಿಷ್ಟೇ ಅಲ್ಲ, ಆರ್ಯನ್ ಬಿಡುಗಡೆಯಾಗುವವರೆಗೂ ಸಲ್ಮಾನ್ ತಮ್ಮ ಸಿನಿಮಾದ ಶೂಟಿಂಗ್ ಕೂಡ ಕ್ಯಾನ್ಸಲ್ ಮಾಡಿದ್ದರು. ವಾಸ್ತವವಾಗಿ, ಸಲ್ಮಾನ್ ಅವರ ಟೈಗರ್ 3 ಮತ್ತು ಶಾರುಖ್ ಅವರ ಮುಂಬರುವ ಚಿತ್ರ ಪಠಾಣ್ ನಿಕಟ ಸಂಬಂಧ ಹೊಂದಿದೆ. 

66

ಇಬ್ಬರೂ ಪರಸ್ಪರರ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಆರ್ಯನ್ ಬಂಧನದಿಂದ ಪಠಾಣ್ ಚಿತ್ರೀಕರಣ ವಿಳಂಬವಾಗಿದ್ದು, ಈಗ ಕತ್ರೀನಾ ಕೈಫ್‌ ಮದುವೆ ಟೈಗರ್ 3 ಚಿತ್ರೀಕರಣದ ಮೇಲೆ ಪರಿಣಾಮ ಬೀರಿದೆ. ಕೋ ಸ್ಟಾರ್‌ ಹಿತದೃಷ್ಟಿಯಿಂದ ಸಲ್ಲಾನ್‌ ಟೈಗರ್ 3 ಚಿತ್ರದ ಶೂಟಿಂಗ್ ಶೆಡ್ಯೂಲ್ ನಲ್ಲಿ ಬದಲಾವಣೆ ಮಾಡಿದ್ದಾರೆ.

Read more Photos on
click me!

Recommended Stories