ಸೈಫ್ ಅಲಿ ಖಾನ್ ಆರೋಗ್ಯ ಈಗ ಹೇಗಿದೆ? ಯಾವಾಗ ಡಿಸ್ಚಾರ್ಜ್? ಡಾಕ್ಟರ್ ಕೊಟ್ಟ ಅಪ್‌ಡೇಟ್ ಏನು?

Published : Jan 20, 2025, 03:20 PM IST

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ಚಾಕು ಇರಿದ ವಿಚಾರದ ಕುರಿತಂತೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೊಸದಾದ ಅಪ್‌ಡೇಟ್ ನೀಡಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.   

PREV
18
ಸೈಫ್ ಅಲಿ ಖಾನ್ ಆರೋಗ್ಯ ಈಗ ಹೇಗಿದೆ? ಯಾವಾಗ ಡಿಸ್ಚಾರ್ಜ್? ಡಾಕ್ಟರ್ ಕೊಟ್ಟ ಅಪ್‌ಡೇಟ್ ಏನು?

ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಅವರ ಮೇಲೆ ಆಗುಂತಕ ಮನೆಗೆ ನುಗ್ಗಿ ಚಾಕು ಇರಿತಕ್ಕೆ ಒಳಗಾದ ಸುದ್ದಿ ಕೇಳಿ ಇಡೀ ಬಾಲಿವುಡ್ ಚಿತ್ರ ಜಗತ್ತೇ ಒಂದು ಕ್ಷಣ ಬೆಚ್ಚಿ ಬಿದ್ದಿದೆ. ಹಲವು ಬಾಲಿವುಡ್ ನಟರು ಆಸ್ಪತ್ರೆಗೆ ಭೇಟಿ ನೀಡಿ ಸೈಫ್ ಅಲಿ ಖಾನ್ ಅವರ ಆರೋಗ್ಯ ವಿಚಾರಿಸಿದ್ದಾರೆ.

28

ಇದೀಗ ಸೈಫ್ ಅಲಿ ಖಾನ್ ಅವರ ಆರೋಗ್ಯ ಹೇಗಿದೆ ಎನ್ನುವುದರ ಕುರಿತಂತೆ ಚಿಕಿತ್ಸೆ ಪಡೆಯುತ್ತಿರುವ ಲೀಲಾವತಿ ಆಸ್ಪತ್ರೆ ವೈದ್ಯರಾದ ಡಾ ನೀರಜ್ ಉತ್ತಮಣಿ ಹೊಸದಾಗಿ ಅಪ್‌ಡೇಟ್ ನೀಡಿದ್ದಾರೆ. ಇದರ ಜತೆಗೆ ಸೈಫ್ ಅಲಿ ಖಾನ್ ಯಾವಾಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ ಎನ್ನುವುದನ್ನು ತಿಳಿಸಿದ್ದಾರೆ.

38

ಹೌದು, ಮುಂಬೈನ ಲೀಲಾವತಿ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ನೀರಜ್ ಅವರು, ಸೈಫ್ ಅಲಿ ಖಾನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಸುಧಾರಿಸುತ್ತಾ ಬಂದಿದೆ. ಹೀಗಾಗಿ ಆತಂಕಕ್ಕೆ ಓಳಗಾಗುವ ಅಗತ್ಯವಿಲ್ಲ ಎಂದಿದ್ದಾರೆ.

48

ಇನ್ನು ಸೈಫ್ ಅಲಿ ಖಾನ್‌ ಅವರು ಯಾವಾಗ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನುವ ಕುತೂಹಲದ ಬಗ್ಗೆ ಡಾಕ್ಟರ್ ನೀರಜ್ ತುಟಿಬಿಚ್ಚಿದ್ದಾರೆ. 'ನಾವು ಇಲ್ಲಿಯವರೆಗೂ ಸೈಫ್ ಯಾವಾಗ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನುವುದರ ಬಗ್ಗೆ ಅವರ ಕುಟುಂಬದವರ ಜತೆ ಹಾಗೂ ವೈದ್ಯರ ಜತೆ ಯಾವುದೇ ಚರ್ಚೆಯಾಗಿಲ್ಲ. ಸದ್ಯಕ್ಕೆ ಈ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ ಎಂದಿದ್ದಾರೆ.

58

ಇನ್ನು ಸೈಫ್ ಅಲಿ ಖಾನ್‌ ಅವರು ಯಾವಾಗ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನುವ ಕುತೂಹಲದ ಬಗ್ಗೆ ಡಾಕ್ಟರ್ ನೀರಜ್ ತುಟಿಬಿಚ್ಚಿದ್ದಾರೆ. 'ನಾವು ಇಲ್ಲಿಯವರೆಗೂ ಸೈಫ್ ಯಾವಾಗ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನುವುದರ ಬಗ್ಗೆ ಅವರ ಕುಟುಂಬದವರ ಜತೆ ಹಾಗೂ ವೈದ್ಯರ ಜತೆ ಯಾವುದೇ ಚರ್ಚೆಯಾಗಿಲ್ಲ. ಸದ್ಯಕ್ಕೆ ಈ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ ಎಂದಿದ್ದಾರೆ.

68

ಜನವರಿ 16ರ ತಡರಾತ್ರಿ ಬಾಂಗ್ಲಾದೇಶ ಮೂಲದ ಮೊಹಮ್ಮದ್ ಶೌರಿಫುಲ್ ಇಸ್ಲಾಂ ಶಹಜಾದ್ ಎನ್ನುವ ವ್ಯಕ್ತಿ, ನಟ ಸೈಫ್ ಅಲಿ ಖಾನ್ ಅವರ ಮನೆಯನ್ನು ಅಕ್ರಮವಾಗಿ ಪ್ರವೇಶಿಸಿದ್ದು ಅಲ್ಲದೇ, ಬೆಡ್‌ರೂಂನಲ್ಲಿ ಮಲಗಿದ್ದ ಸೈಫ್ ಅವರ ಮೇಲೆ ಮಾರಣಾಂತಿಕವಾಗಿ ಚಾಕುವಿನಿಂದ ಚುಚ್ಚಿದ್ದನು.

78

ಸೈಫ್ ಅಲಿ ಖಾನ್ ಮೇಲೆ ಒಂದೆರಡು ಬಾರಿಯಲ್ಲ ಬರೋಬ್ಬರಿ ಆರು ಬಾರಿ ಚಾಕುವಿನಿಂದ ಚುಚ್ಚಿದ್ದಾನೆ. ಈ ರಬಸದಲ್ಲಿ, ಚಾಕುವಿನ ಒಂದು ತುಣುಕು ಸೈಫ್ ಅಲಿ ಖಾನ್ ದೇಹದಲ್ಲಿಯೇ ಉಳಿದುಕೊಂಡಿತ್ತು. ಇದಾದ ಬಳಿಕ ಲೀಲಾವತಿ ಆಸ್ಪತ್ರೆಯ ವೈದ್ಯರು ಸರ್ಜರಿ ಬಳಿಕ ಆ ಚಾಕುವಿನ ತುಣುಕನ್ನು ಯಶಸ್ವಿಯಾಗಿ ಹೊರತೆಗೆದಿದ್ದರು. 

88
Saif ali khan

ಸಮಾಧಾನಕರ ವಿಚಾರವೇನೆಂದರೆ, ತಕ್ಷಣದಲ್ಲಿ ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಆರೋಗ್ಯದಲ್ಲಿ ಕೂಡಾ ಸುಧಾರಣೆಯಾಗುತ್ತಿದೆ. ಆದಷ್ಟು ಬೇಗ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

Read more Photos on
click me!

Recommended Stories