ಇತ್ತೀಚೆಗೆ 40 ದಾಟಿದ ನಟಿಯರು ಸಹ ಚಿತ್ರರಂಗದಲ್ಲಿ ಸದ್ದು ಮಾಡ್ತಿದ್ದಾರೆ. ಮೊದಲು 40 ದಾಟಿದ ನಟಿಯರಿಗೆ ಅವಕಾಶಗಳು ತುಂಬಾ ಕಡಿಮೆ ಸಿಗ್ತಿದ್ವು. ಒಂದು ವೇಳೆ ಅವಕಾಶ ಸಿಕ್ಕಿದ್ರೂ ತಾಯಿ, ಅತ್ತೆ, ಅಕ್ಕ ತಂಗಿ ಪಾತ್ರಗಳಿಗೆ ಸೀಮಿತವಾಗ್ತಿದ್ವು. ಆದ್ರೆ ಕೆಲವು ದಕ್ಷಿಣ ಭಾರತದ ನಟಿಯರು ನಲವತ್ತು ದಾಟಿದ್ರೂ ಕೂಡ ಯುವ ನಟಿಯರಿಗೆ ಪೈಪೋಟಿ ನೀಡ್ತಿದ್ದಾರೆ. ಅದ್ರಲ್ಲಿ ಮುಖ್ಯವಾಗಿ ತ್ರಿಶಾ ಬಗ್ಗೆ ಹೇಳಲೇಬೇಕು.