ಇದರಲ್ಲಿ ಅವರದು ಅತಿಥಿ ಪಾತ್ರ ಎಂದು ತಿಳಿದುಬಂದಿದೆ. ಈ ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ತಂಡವು ಹೇಳುತ್ತಾ, ಕಣ್ಣಪ್ಪದಲ್ಲಿ ದೈವತ್ವ, ಶಕ್ತಿ, ಪ್ರಶಾಂತತೆಗೆ ಆಕರ್ಷಕ ಉಪಸ್ಥಿತಿಯಾಗಿರುವ ಶಿವನ ಪಾತ್ರದಲ್ಲಿ ಅಕ್ಷಯ್ ಅವರನ್ನು ಪರಿಚಯಿಸುವುದು ಸಂತೋಷವಾಗಿದೆ ಎಂದು ಹೇಳಿದೆ. ಅಚಲವಾದ ಪ್ರೀತಿ, ಭಕ್ತಿ, ತ್ಯಾಗಕ್ಕೆ ಸಂಬಂಧಿಸಿದ ಯುಗಯುಗಗಳ ಕಥೆಯನ್ನು ನೋಡಿ ಎಂದು ತಂಡ ಹೇಳಿದೆ.
ಈ ಏಪ್ರಿಲ್ ನಲ್ಲಿ ಥಿಯೇಟರ್‌ನಲ್ಲಿ ಈ ಬೃಹತ್ ಚಿತ್ರವನ್ನು ವೀಕ್ಷಿಸಿ ಎಂದು ತಿಳಿಸಿದೆ. 'ಕಣ್ಣಪ್ಪ'ದಲ್ಲಿ ಶಿವನ ಪಾತ್ರದಲ್ಲಿ ನಟಿಸುವುದಕ್ಕೆ ಅಕ್ಷಯ್ ಕುಮಾರ್ ಸಂತೋಷ ವ್ಯಕ್ತಪಡಿಸಿದ್ದಾರೆ. ಇದು ದೈವತ್ವದ ಚಿತ್ರ ಎಂದು ಹೇಳಿದ್ದಾರೆ.