ಸೈಫ್ ಅಲಿ ಖಾನ್‌ರ 5000 ಕೋಟಿ ಆಸ್ತಿಯಲ್ಲಿ ಮಕ್ಕಳಿಗೆ ಒಂದೂ ಬಿಡಿಗಾಸೂ ಸಿಗೋಲ್ವಂತೆ!
First Published | Aug 17, 2022, 1:44 PM ISTಪಟೌಡಿ ಕುಟುಂಬದ 10ನೇ ನವಾಬನಾಗಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಅವರಿಗೆ 52 ವರ್ಷ ತುಂಬಿದೆ. ಸೈಫ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಕಾರಣದಿಂದ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಇದರ ಜೊತೆಗೆ ಅವರು ತಮ್ಮ 5000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಲ್ಲಿ ಒಂದು ಪೈಸೆಯನ್ನೂ ಮಕ್ಕಳಿಗೆ ನೀಡಲು ಸಾಧ್ಯವಿಲ್ಲ ಅಥವಾ ಅವರ ಆಸ್ತಿ ಮೇಲೆ ಅವರ ಮಕ್ಕಳು ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬ ಅಂಶಕ್ಕಾಗಿ ಅವರು ಸದಾ ಸುದ್ದಿಯಲ್ಲಿರುತ್ತಾರೆ. ವಾಸ್ತವವಾಗಿ, ಕಾನೂನಿನ ಸಮಸ್ಯೆಯಿಂದ ಅವರು ತಮ್ಮ ಆಸ್ತಿ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹರಿಯಾಣದ ಪಟೌಡಿ ಅರಮನೆಯ ಹೊರತಾಗಿ, ಸೈಫ್‌ನ ಅನೇಕ ಆಸ್ತಿಗಳು ಭೋಪಾಲ್‌ನಲ್ಲಿವೆ. ಸೈಫ್ ತನ್ನ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿಯಿಂದ ಈ ಆಸ್ತಿಯನ್ನು ಪಡೆದಿದ್ದಾರೆ. ಸೈಫ್ ತನ್ನ ನಾಲ್ಕು ಮಕ್ಕಳು ಅಂದರೆ ಮಗಳು ಸಾರಾ ಅಲಿ ಖಾನ್ ಮತ್ತು ಪುತ್ರರಾದ ಇಬ್ರಾಹಿಂ ಅಲಿ ಖಾನ್, ಸೈಫ್ ಅಲಿ ಖಾನ್, ಜೆಹ್ ಅಲಿ ಖಾನ್ ಹೆಸರಿಗೆ ಆಸ್ತಿಯನ್ನು ಏಕೆ ನೀಡಲು ಸಾಧ್ಯವಿಲ್ಲ ಎಂಬುದಕ್ಕೆ ಕಾರಣ ಇಲ್ಲಿದೆ.