ವಿಜಯ್‌ ದೇವರಕೊಂಡ ಜೊತೆ ಲೀವ್‌ ಇನ್‌ ರಿಲೆಷನ್‌ಶಿಪ್‌ನಲ್ಲಿ ರಶ್ಮಿಕಾ; ಫೊಟೋಸ್ ವೈರಲ್‌!?

Published : Sep 06, 2023, 04:05 PM ISTUpdated : Sep 06, 2023, 04:07 PM IST

ರಶ್ಮಿಕಾ ಮಂದಣ್ಣ (Rashmika Mandanna)  ಮತ್ತು ವಿಜಯ್‌ ದೇವರಕೊಂಡ (Vijay Devarakonda) ಅವರ ಸಂಬಂಧದ ಚರ್ಚೆ ಬಹಳ ಕಾಲದಿಂದ ನಡೆಯುತ್ತಿದೆ. ಇಬ್ಬರೂ ಈ ಬಗ್ಗೆ ಇದುವರೆಗೂ ಬಾಯಿ ಬಿಟ್ಟಿಲ್ಲ. ಆದರೂ ಆಗಾಗ ಇವರು ಸಂಬಂಧದಲ್ಲಿದ್ದಾರೆ ಎಂಬ ವಂದತಿಗಳು ವೈರಲ್‌ ಆಗುತ್ತಲೇ ಇವೆ. ಈಗ ರೂಮರ್‌ಗಳು ಒಂದು ಹೆಜ್ಜೆ ಮುಂದೆ ಹೋಗಿದೆ. ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಫೋಟೋ ನಟಿ ವಿಜಯ್ ದೇವರಕೊಂಡ ಅವರೊಂದಿಗೆ ಲೈವ್-ಇನ್ ರಿಲೆಷನ್‌ಶಿಪ್‌ನಲ್ಲಿದ್ದಾರೆ ಎಂಬ ವದಂತಿಗಳನ್ನು ಹುಟ್ಟು ಹಾಕಿದೆ. 

PREV
110
ವಿಜಯ್‌ ದೇವರಕೊಂಡ ಜೊತೆ  ಲೀವ್‌ ಇನ್‌ ರಿಲೆಷನ್‌ಶಿಪ್‌ನಲ್ಲಿ ರಶ್ಮಿಕಾ;  ಫೊಟೋಸ್ ವೈರಲ್‌!?

ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಫೋಟೋ ವದಂತಿಯ ರೂಮರ್ಡ್ ಬಾಯ್ ಫ್ರೆಂಡ್ ವಿಜಯ್ ದೇವರಕೊಂಡ ಅವರೊಂದಿಗೆ ಲೈವ್-ಇನ್ ವದಂತಿಗಳನ್ನು ಹುಟ್ಟುಹಾಕಿದೆ

210

ರಶ್ಮಿಕಾ ಮಂದಣ್ಣ ಇತ್ತೀಚಿಗೆ ಹಂಚಿಕೊಂಡ ಫೋಟೋದಿಂದ ಅವರು ವಿಜಯ್ ದೇವರಕೊಂಡ ಅವರೊಂದಿಗೆ ವಾಸಿಸುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಮನವರಿಕೆಯಾಗಿದೆ. 

310

ವೈರಲ್  ಪೋಸ್ಟ್ ಪ್ರಕಾರ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಸಂಬಂಧದ ದೀರ್ಘಕಾಲದಿಂದಲೂ ಇದೆ. ಎಲ್ಲಾ ವದಂತಿಗಳು ಅಸಲಿ. ಹಾಗೇಯೇ ಈ ಕಪಲ್‌  ಲಿವ್-ಇನ್ ಸಂಬಂಧವನ್ನು ಹೊಂದಿದ್ದಾರೆ ಎಂದು ಇದು ಅನಧಿಕೃತವಾಗಿ ಖಚಿತಪಡಿಸುತ್ತದೆ.

410

ರೆಡ್ಡಿಟ್‌ನಲ್ಲಿ ವೈರಲ್ ಪೋಸ್ಟ್ ಪ್ರಕಾರ, ರಶ್ಮಿಕಾ ಅವರ ಹೊಸ ಇನ್‌ಸ್ಟಾಗ್ರಾಮ್ ಫೋಟೋವನ್ನು ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ-ಮನೆಯ ಟೆರೇಸ್‌ನಲ್ಲಿ ತೆಗೆದುಕೊಳ್ಳಲಾಗಿದೆ. ಫೋಟೋದಲ್ಲಿ, ರಶ್ಮಿಕಾ ಬೆರಗುಗೊಳಿಸುವ ಸೀರೆಯಲ್ಲಿ ಸಖತ್‌ ಸ್ಟನ್ನಿಂಗ್‌ ಆಗಿ ಕಾಣಿಸಿಕೊಂಡಿದ್ದಾರೆ. 

510

ಆದರೆ, ತಕ್ಷಣವೇ ನೆಟಿಜನ್ಸ್ ಗಮನ ಸೆಳೆದದ್ದು ಫೋಟೋದಲ್ಲಿನ ಹಿನ್ನೆಲೆ. ಇದು ವಿಜಯ್ ಅವರ ಇತ್ತೀಚಿಗೆ ಶೇರ್ ಮಾಡಿಕೊಂಡ ಚಿತ್ರವೊಂದಕ್ಕೆ ಹೋಲುತ್ತದೆ. ಆ ಫೋಟೋದಲ್ಲಿ ವಿಜಯ್‌ ಅವರು ತಮ್ಮ ಬಂಗಲೆಯ ಟೆರೇಸ್‌ನಲ್ಲಿ ಕೂತು ಪೋಸ್ ನೀಡುತ್ತಿದ್ದಾರೆ.

610

ಪೋಸ್ಟ್ ಇಂಟರ್ನೆಟ್‌ನಲ್ಲಿ ವೈರಲ್ ಆದ ತಕ್ಷಣ, ಅಭಿಮಾನಿಗಳು ಈ ಜೋಡಿ ನಿಜ ಜೀವನದಲ್ಲಿ ಒಟ್ಟಿಗೆ ಇದ್ದಾರೆ ಎಂದು ಊಹಿಸಲು ಪ್ರಾರಂಭಿಸಿದರು. 

710

'ಅವರು ಕನಿಷ್ಠ 3-4 ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ನಾನು ಹೇಳುತ್ತಿದ್ದೇನೆ' ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. 'ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಕೇಳಿದೆ. ಇದು ಎಷ್ಟು ನಿಜ ಎಂದು ಖಚಿತವಾಗಿಲ್ಲ' ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. 

810

ಈ ನಡುವೆ, ಇತ್ತೀಚೆಗೆ ವಿಜಯ್ ಅವರು ಮದುವೆಯ ವ್ಯವಸ್ಥೆಯನ್ನು  ನಂಬುತ್ತೇನೆ  ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ತನ್ನನ್ನು ತಾನು ವಿವಾಹಿತ ವ್ಯಕ್ತಿಯಂತೆ ನೋಡುತ್ತಿದ್ದೇನೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ, ಅವರು ತನ್ನ ಸಂಗಾತಿಯ ಬಗ್ಗೆ ಬಾಯಿ ಬಿಡಲಿಲ್ಲ. 

910

'ನಾನು ಮದುವೆ ಆಲೋಚನೆಯಿಂದ ಕಂಫರ್ಟಬಲ್‌ ಆಗಿದ್ದೇನೆ ಎಂದು ನಾನು ಭಾವಿಸುತ್ತೇನೆ.  ಮೊದಲು ಮದುವೆಗೆ ನನ್ನ ಸುತ್ತಲೂ ಯಾರೂ ಹೇಳಬಾರದ  ಪದವಾಗಿತ್ತು. ಅದು ತಕ್ಷಣವೇ ನನ್ನನ್ನು ಪ್ರಚೋದಿಸುತ್ತಿತ್ತು ಮತ್ತು ಕಿರಿಕಿರಿಗೊಳಿಸುತ್ತಿತ್ತು. ಆದರೆ ಈಗ ನಾನು ಅದರ ಬಗ್ಗೆ ಮಾತನಾಡುತ್ತೇನೆ .ನನ್ನ ಸ್ನೇಹಿತರು ಮದುವೆಯಾಗುವುದನ್ನು ನೋಡಿ ಖುಷಿ ಪಡುತ್ತಿದ್ದೇನೆ. ಸಂತೋಷದ ದಾಂಪತ್ಯ ಬೇಕು ಎನಿಸುತ್ತದೆ. ನಾನು ತೊಂದರೆಗೀಡಾದ ಮದುವೆಗಳನ್ನು ಆನಂದಿಸುತ್ತಿದ್ದೇನೆ. ಎಲ್ಲವೂ ಮನೋರಂಜನೆಯಾಗಿದೆ. ಆದರೆ ನನ್ನದೇ ಆದ ವೈವಾಹಿಕ ಜೀವನವನ್ನು ನಾನು ಹೊಂದಬೇಕೆಂದು ನಾನು ಭಾವಿಸುತ್ತೇನೆ. ಇದು ಜೀವನದಲ್ಲಿ ಒಂದು ಅಧ್ಯಾಯ. ಪ್ರತಿಯೊಬ್ಬರೂ ಅನುಭವಿಸಬೇಕು' ಎಂದು ಖುಶಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವಿಜಯ್ ಮದುವೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. 
 

1010

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ತಮ್ಮ ಸಂಬಂಧದ ವದಂತಿಗಳಿಗಾಗಿ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಅವರು ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್‌ನಂತಹ ಚಲನಚಿತ್ರಗಳಲ್ಲಿ ಒಟ್ಟಿಗೆ ನಟಿಸಿದಾಗಿನಿಂದ ಅವರ ನಡುವಿನ ಕೆಮಿಸ್ಟ್ರಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ.

Read more Photos on
click me!

Recommended Stories