ತಮಿಳು ಹಾಸ್ಯ ನಟ ವಡಿವೇಲು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೋನಾ ಪಾಸಿಟಿವ್ ದೃಢಪಟ್ಟ ನಂತರ ನಟ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ.
25
ಗುರುವಾರ ಲಂಡನ್‌ನಿಂದ ಚೆನ್ನೈಗೆ ಮರಳಿದ್ದ ವಡಿವೇಲು ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೆಸ್ಟ್ ಮಾಡಲಾಗಿದ್ದು ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
35
ನಟನ ಆರೋಗ್ಯ ಸ್ಥಿತಿ ಸ್ಟೇಬಲ್ ಆಗಿದ್ದು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವಡಿವೇಲುಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
45
ನಟನೆಯಿಂದ ಬ್ರೇಕ್ ತೆಗೆದುಕೊಂಡಿರುವ ವಡಿವೇಲು ಅವರು 2011ರ ಚುನಾವಣೆಯಲ್ಲಿ ಡಿಎಂಕೆ ಪರ ಪ್ರಚಾರ ಮಾಡುತ್ತಾ ಡಿಎಂಡಿಕೆ ವಿರುದ್ಧ ಸ್ಟ್ರಾಂಗ್ ಸ್ಟೇಟ್‌ಮೆಂಟ್‌ಗಳನ್ನು ನೀಡುತ್ತಿದ್ದರು.
55
ಮಾಜಿ ತಮಿಳುನಾಡು ಸಿಎಂ, ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಅವರು ಸ್ಪರ್ಧಿಸುತ್ತಿದ್ದ ತಿರುವನೈಕೋವಿಲ್‌ನಲ್ಲಿ ಡಿಎಂಕೆ ಪರ ಪ್ರಚಾರ ಮಾಡುವಾಗ ನಟನತ್ತ ಚಪ್ಪಲಿ ಎಸೆದ ಘಟನೆ ನಡೆದಿತ್ತು.