ನನ್ನ ಮಗಳಿಗೆ ಕರೀನಾ ಕಪೂರ್ ಮಗ ಆಟ ಸಾಮಾನ್ ಕೊಟ್ಟು ಕಿತ್ತುಕೊಂಡ ಅಂತ ಸೈಫ್ ಬೈದಿದ್ರು: ಆಲಿಯಾ ಭಟ್
ಸ್ಟಾರ್ ನಟರ ಮನೆಯಲ್ಲಿ ನಮ್ಮ ಮನೆಗಳಂತೆ ನಡೆಯುತ್ತದೆ....ಆಲಿಯಾ ಭಟ್ ಪ್ಲೇ ಡೇಟ್ ಎಂದು ತೈಮೂರ್ ಮತ್ತು ಜೆಹ್ ಬಳಿ ಕರ್ಕೊಂಡು ಹೋಗುತ್ತಾರಂತೆ.
ಸ್ಟಾರ್ ನಟರ ಮನೆಯಲ್ಲಿ ನಮ್ಮ ಮನೆಗಳಂತೆ ನಡೆಯುತ್ತದೆ....ಆಲಿಯಾ ಭಟ್ ಪ್ಲೇ ಡೇಟ್ ಎಂದು ತೈಮೂರ್ ಮತ್ತು ಜೆಹ್ ಬಳಿ ಕರ್ಕೊಂಡು ಹೋಗುತ್ತಾರಂತೆ.
ಬಾಲಿವುಡ್ ಸ್ಟಾರ್ ಕಿಡ್, ಪ್ಯಾಪರಾಜಿಗಳ ನೆಚ್ಚಿನ ಕಂದಮ್ಮ ಅಂದ್ರೆ ಕರೀನಾ ಕಪೂರ್ ಮಕ್ಕಳಾದ ತೈಮೂರ್ ಅಲಿ ಖಾನ್ ಮತ್ತು ಜೆಹ್ ಅಲಿ ಖಾನ್ ಎನ್ನಬಹುದು. ಈಗ ಆಲಿಯಾ ಭಟ್ ಮಗಳು ಕೂಡ ಈ ಲಿಸ್ಟ್ ಸೇರಿಕೊಳ್ಳುತ್ತಾಳೆ.
ಸ್ಟಾರ್ ಮಕ್ಕಳು ಅಂದ್ರೆ ಆಟವಾಡಲು ರಸ್ತೆಗೆ ಕರ್ಕೊಂಡು ಬರಲು ಆಗುತ್ತಾ? ಹೀಗಾಗಿ ಪ್ಲೇ ಡೇಟ್ ಅಂತ ಒಂದೊಂದು ದಿನ ಒಬ್ಬೊಬ್ಬರ ಮನೆಗೆ ಭೇಟಿ ನೀಡುತ್ತಾರೆ.
ಆಗ ಜೆಹ್ ಮಾಡಿದ ತುಂಟಾಟ ನೋಡಿಕೊಂಡು ಸೈಫ್ ಸುಮ್ಮನೆ ಇರಲಿಲ್ಲ ಎಲ್ಲರ ಎದುರು ಬೈದು ಬುದ್ಧಿ ಹೇಳಿದ ಘಟನೆಯಲ್ಲಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಆಲಿಯಾ ಭಟ್ ಹಂಚಿಕೊಂಡಿದ್ದಾರೆ.
ಒಮ್ಮೆ ರಾಹಾಳನ್ನು ಕರೀನಾ ಕಪೂರ್ ಮನೆಗೆ ಕರೆದುಕೊಂಡು ಹೋಗಿದ್ದೆ. ಮೂವರು ಮಕ್ಕಳು ಸೇರಿಕೊಂಡು ಆಟವಾಡಿ ಸಮಯ ಕಳೆಯಲಿ ಎಂದು.
ತೈಮೂರ್ ಮತ್ತು ಜೆಹ್ ತುಂಬಾ ಒಳ್ಳೆ ಮಕ್ಕಳು. ರಾಹಾಳನ್ನು ನೋಡಿ ಜೆಹ್‌ಗೆ ಸಖತ್ ಖುಷಿ ಆಯ್ತು ಅನ್ಸುತ್ತೆ. ಆರಂಭದಲ್ಲಿ ಅವನ ಬಳಿ ಇದ್ದ ಎಲ್ಲಾ ಆಟ ಸಾಮಾನ್‌ಗಳನ್ನು ತಂದು ಆಕೆಯ ಮುಂದೆ ಇಟ್ಟ.
ಸ್ವಲ್ಪ ಸಮಯದ ನಂತರ ಜೆಹ್ ಕೊಟ್ಟ ಎಲ್ಲಾ ಆಟ ಸಾಮಾನ್‌ಗಳನ್ನು ಮತ್ತೆ ತೆಗೆದುಕೊಂಡು ವಾಪಸ್ ಹೋಗಿಬಿಟ್ಟ. ಆಗ ರಾಹಾ ಫುಲ್ ಶಾಕ್‌ನಲ್ಲಿ ನೋಡುತ್ತಿದ್ದಳು ಏನ್ ಆಗುತ್ತಿದೆ ಅಂತ.
ಇದನ್ನು ಸೈಫ್ ಅಲಿ ಖಾನ್ ಗಮನಿಸಿದ್ದರೆ. ಜೆಹ್ ಆಕೆ ನಿನಗಿಂತ ಪುಟ್ಟ ಹುಡುಗಿ ಈ ರೀತಿ ಕೊಟ್ಟು ತೆಗೆದುಕೊಳ್ಳಬಾರದು ಎಂದು ಬೈದು ಬುದ್ಧಿ ಹೇಳಿದ್ದರು.