Latest Videos

ನಯನತಾರ, ಸಮಂತ ಆದ್ಮೇಲೆ ಈ ಸೌತ್ ಸ್ಟಾರ್ಸ್ ಬಾಲಿವುಡ್‌ನಲ್ಲಿ ಮಿಂಚಲು ಸಜ್ಜು!

First Published Sep 15, 2023, 5:02 PM IST

ದಕ್ಷಿಣದ ನಟಿ ನಯನತಾರಾ (Nayanthara) ಜವಾನ್ (Jawan) ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರೆ, ಅವರ ನಂತರ ಇನ್ನೂ ಮೂವರು ತಮಿಳು ನಟಿಯರು ಹಿಂದಿ ಚಿತ್ರಗಳಲ್ಲಿ ನಟಿಸಲು ಹೋಗಿದ್ದಾರೆ ಎಂದು ಸುದ್ದಿಯಾಗಿದೆ. ಆ ನಟಿಯರು ಯಾರಾರು ಗೊತ್ತಾ?
 

ನಯನತಾರಾ:
ನಯನತಾರಾ ದಕ್ಷಿಣ ಭಾರತದ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್. ಇದುವರೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಂತಹ ಭಾಷೆಗಳಲ್ಲಿ ಮಾತ್ರನಟಿಸಿದ್ದರು. ಈಗ ನಯನತಾರಾ, ಶಾರುಖ್ ಖಾನ್ ಅವರ ಜವಾನ್ ಚಿತ್ರದ ಮೂಲಕ ಬಾಲಿವುಡ್‌ಗೆ  ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿ ಅವರ ಮೊದಲ ಚಿತ್ರ ರೂ.600 ಕೋಟಿಗೂ ಹೆಚ್ಚು ಗಳಿಸಿದೆ. 

ಕೀರ್ತಿ ಸುರೇಶ್:
ಕೀರ್ತಿ ಸುರೇಶ್ ಅವರು ನಯನತಾರಾ ಅವರನ್ನು ಬಾಲಿವುಡ್‌ಗೆ ಹಿಂಬಾಲಿಸಿದ್ದಾರೆ. ಅಟ್ಲಿ ನಿರ್ಮಾಣದ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಕಮಿಟ್ ಆಗಿದ್ದಾರೆ. ಇದು ವಿಜಯ್ ಅಭಿನಯದ ತಮಿಳಿನ ತೇರಿ ಚಿತ್ರದ ರಿಮೇಕ್. ಈ ಚಿತ್ರದಲ್ಲಿ ಬಾಲಿವುಡ್ ನಟ ವರುಣ್ ಧವನ್‌ಗೆ ಜೋಡಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ ಚಿತ್ರದ ಬಗ್ಗೆ ಪ್ರಕಟಣೆ ಹೊರ ಬೀಳಲಿದೆ ಎಂದು ಹೇಳಲಾಗುತ್ತಿದೆ, ಇದು ನಟಿ ಕೀರ್ತಿ ಸುರೇಶ್ ಅವರ ಬಾಲಿವುಡ್ ಚೊಚ್ಚಲ ಚಿತ್ರ.

ತ್ರಿಷಾ:
ನಟಿ ತ್ರಿಷಾ ಹಿಂದಿಯಲ್ಲಿ ಈ ಹಿಂದೆ ಒಂದೇ ಒಂದು ಚಿತ್ರದಲ್ಲಿ ನಟಿಸಿದ್ದರು. 2010 ರ ಕಟ್ಟಾ ಮೀಠಾ ಚಿತ್ರದ ನಂತರ ಅವರು ಬಾಲಿವುಡ್‌ನಲ್ಲಿ ನಟಿಸುವುದನ್ನು ನಿಲ್ಲಿಸಿದರು. ಇದೀಗ 13 ವರ್ಷಗಳ ನಂತರ ಬಾಲಿವುಡ್‌ಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ವಿಷ್ಣುವರ್ಧನ್ ನಿರ್ದೇಶನದ ಹೊಸ ಹಿಂದಿ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ನಟಿಸಲಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಎದುರು ಕಾಣಿಸಿಕೊಳ್ಳಲಿದ್ದಾರೆ.

ಸಾಯಿ ಪಲ್ಲವಿ:
ತಮಿಳುನಾಡಿನ ನಟಿ ಸಾಯಿ ಪಲ್ಲವಿ ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲೂ ಫೇಮಸ್. ಸದ್ಯ ತಮಿಳಿನಲ್ಲಿ ಶಿವಕಾರ್ತಿಕೇಯನ್ ಎದುರು ನಟಿಸುತ್ತಿರುವ ಸಾಯಿ ಪಲ್ಲವಿ, ಮುಂದೆ ಬಾಲಿವುಡ್‌ಗೆ ಕಾಲಿಡಲು ಸಜ್ಜಾಗಿದ್ದಾರೆ. ಸುನೀಲ್ ಪಾಂಡೆ ನಿರ್ದೇಶನದ ಹಿಂದಿ ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ ನಟಿಸಲಿದ್ದಾರೆ. ಸದ್ಯದಲ್ಲೇ ಈ ಸುದ್ದಿ ಘೋಷಣೆಯಾಗುವ ನಿರೀಕ್ಷೆ ಇದೆ. 

click me!