ಪ್ರಿಯಾಂಕಾ ಚೋಪ್ರಾ-ನಿಕ್ ಜೊನಾಸ್ ಜೋಡಿ ಡಿವೋರ್ಸ್ ಆಗದಿರಲು ಅದೊಂದೇ ಕಾರಣವಂತೆ.. ಫೈನಲೀ ಗೊತ್ತಾಯ್ತಲ್ಲ!

Published : Jan 27, 2026, 11:41 PM IST

ನಿಕ್ ಜೋನಸ್ ಅವರ ಅಮೆರಿಕನ್ ಕುಟುಂಬದಲ್ಲಿ ಮಾತುಕತೆ ಬಹಳ ಶಿಸ್ತುಬದ್ಧವಾಗಿ ಮತ್ತು ಶಾಂತವಾಗಿ ನಡೆಯುತ್ತಿತ್ತು. ಹೀಗಾಗಿ, ಪ್ರಿಯಾಂಕಾ ತಮ್ಮ ಮದುವೆಯ ಆರಂಭಿಕ ದಿನಗಳಲ್ಲಿ ಎದುರಿಗಿದ್ದವರು ಮಾತು ಮುಗಿಸುವವರೆಗೂ ತಾಳ್ಮೆಯಿಂದ ಕಾಯುವುದನ್ನು ಕಲಿಯಬೇಕಾಯಿತಂತೆ. ಇದು ಅವರಿಗೆ ಒಂದು ದೊಡ್ಡ ಪಾಠ ಆಗಿತ್ತಂತೆ!

PREV
17

ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ದಾಂಪತ್ಯದ ಗುಟ್ಟು ರಟ್ಟು!

ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ಅಮೆರಿಕದ ಪಾಪ್ ಸಿಂಗರ್ ನಿಕ್ ಜೋನಸ್ (Nick Jonas) ಜೋಡಿ ಅಂದ್ರೆ ಇಡೀ ವಿಶ್ವವೇ ಕುತೂಹಲದಿಂದ ನೋಡುತ್ತದೆ. ಇವರಿಬ್ಬರೂ ಮದುವೆಯಾಗಿ ಏಳು ವರ್ಷಗಳಾಗುತ್ತಾ ಬಂದಿದ್ದರೂ, ಇವರ ನಡುವಿನ ಪ್ರೀತಿ ಮತ್ತು ಸಾಂಸ್ಕೃತಿಕ ಹೊಂದಾಣಿಕೆ ಇಂದಿಗೂ ಅನೇಕರಿಗೆ ಮಾದರಿ. ಸಾಂಸ್ಕೃತಿಕವಾಗಿ ಸಂಪೂರ್ಣ ಭಿನ್ನ ಹಾದಿಯಲ್ಲಿ ಬೆಳೆದು ಬಂದ ಈ ಜೋಡಿ, ಹಂತ ಹಂತವಾಗಿ ಪರಸ್ಪರರ ಸಂಪ್ರದಾಯಗಳನ್ನು ಹೇಗೆ ಅಪ್ಪಿಕೊಂಡರು ಎಂಬ ಬಗ್ಗೆ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಮನಬಿಚ್ಚಿ ಮಾತನಾಡಿದ್ದಾರೆ.

27

ಮಾತಿನ ಶೈಲಿ ಮತ್ತು ಹೊಂದಾಣಿಕೆ:

ಇತ್ತೀಚೆಗೆ ನಡೆದ 'ರೀಡ್ ದಿ ರೂಮ್' ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಪ್ರಿಯಾಂಕಾ, ತಮ್ಮ ಸಂವಹನದ ಶೈಲಿ ಹೇಗೆ ಭಿನ್ನವಾಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಭಾರತೀಯ ಕುಟುಂಬಗಳಲ್ಲಿ ಮಾತುಕತೆಗಳು ಸಾಮಾನ್ಯವಾಗಿ ತುಂಬಾ ವೇಗವಾಗಿ ಮತ್ತು ಒಬ್ಬರ ಮಾತಿನ ಮೇಲೆ ಇನ್ನೊಬ್ಬರು ಮಾತನಾಡುವಂತಿರುತ್ತದೆ. "ನಾವು ಭಾರತೀಯರು ಎದುರಿಗಿದ್ದವರು ಮಾತು ಮುಗಿಸುವ ಮುನ್ನವೇ ಅವರು ಏನು ಹೇಳುತ್ತಾರೆ ಎಂಬುದು ನಮಗೆ ಅರ್ಥವಾಗಿಬಿಡುತ್ತದೆ, ಹಾಗಾಗಿ ನಾವು ಕೂಡಲೇ ಮಾತನಾಡಲು ಶುರು ಮಾಡುತ್ತೇವೆ" ಎಂದು ಪ್ರಿಯಾಂಕಾ ನಗುತ್ತಾ ಹೇಳಿದ್ದಾರೆ.

37

ಆದರೆ ನಿಕ್ ಜೋನಸ್ ಅವರ ಅಮೆರಿಕನ್ ಕುಟುಂಬದಲ್ಲಿ ಮಾತುಕತೆ ಬಹಳ ಶಿಸ್ತುಬದ್ಧವಾಗಿ ಮತ್ತು ಶಾಂತವಾಗಿ ನಡೆಯುತ್ತಿತ್ತು. ಹೀಗಾಗಿ, ಪ್ರಿಯಾಂಕಾ ಅವರು ಮದುವೆಯ ಆರಂಭಿಕ ದಿನಗಳಲ್ಲಿ ಎದುರಿಗಿದ್ದವರು ಮಾತು ಮುಗಿಸುವವರೆಗೂ ತಾಳ್ಮೆಯಿಂದ ಕಾಯುವುದನ್ನು ಕಲಿಯಬೇಕಾಯಿತಂತೆ. ಇದು ಅವರಿಗೆ ಒಂದು ದೊಡ್ಡ ಸಾಂಸ್ಕೃತಿಕ ಬದಲಾವಣೆಯಾಗಿತ್ತು.

47

ನಿಕ್ ಎಂಬ 'ಇಂಡಿಯನ್ ಜಿಜು':

ಕೇವಲ ಪ್ರಿಯಾಂಕಾ ಮಾತ್ರವಲ್ಲ, ನಿಕ್ ಜೋನಸ್ ಕೂಡ ಭಾರತೀಯ ಸಂಸ್ಕೃತಿಗೆ ಬೇಗನೆ ಒಗ್ಗಿಕೊಂಡಿದ್ದಾರೆ. ಈಗ ಅವರು ಭಾರತೀಯ ಹಬ್ಬಗಳಾದ ಹೋಳಿ ಮತ್ತು ದೀಪಾವಳಿಯನ್ನು ಬಹಳ ಸಡಗರದಿಂದ ಆಚರಿಸುತ್ತಾರೆ. ಪ್ರಿಯಾಂಕಾ ಅವರ ದೊಡ್ಡ ಕುಟುಂಬದ ಸದಸ್ಯರೊಂದಿಗೆ ಬೆರೆಯುವುದು ಮತ್ತು ಭಾರತೀಯ ಶೈಲಿಯ ಮಾತುಕತೆಗಳಲ್ಲಿ ಭಾಗವಹಿಸುವುದನ್ನು ನಿಕ್ ಕಲಿತಿದ್ದಾರೆ. ಈ ಬದಲಾವಣೆಗಳೇ ಅವರ ದಾಂಪತ್ಯದ ಅಡಿಪಾಯವನ್ನು ಗಟ್ಟಿಗೊಳಿಸಿವೆ.

57

ಚಿತ್ರಕಥೆಯಂತಿದೆ ಇವರ ಪ್ರೇಮಕಥೆ:

ವೋಗ್ ವರದಿಯ ಪ್ರಕಾರ, ಇವರಿಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದು ವ್ಯಾನಿಟಿ ಫೇರ್ ಆಸ್ಕರ್ ಪಾರ್ಟಿಯಲ್ಲಿ. ಆಗ ಪ್ರಿಯಾಂಕಾ ಅವರ ಸೌಂದರ್ಯಕ್ಕೆ ಮಾರುಹೋದ ನಿಕ್, ಎಲ್ಲರ ಮುಂದೆ ಮೊಣಕಾಲೂರಿ ಕುಳಿತು, "ನೀನು ನಿಜವಾಗಿಯೂ ಇದ್ದೀಯಾ? ಇಷ್ಟು ದಿನ ನೀನು ಎಲ್ಲಿದ್ದೆ?" ಎಂದು ಕೇಳಿದ್ದರಂತೆ. ಅಲ್ಲಿಂದ ಶುರುವಾದ ಇವರ ಸ್ನೇಹ, ಮೆಸೇಜ್‌ಗಳ ಮೂಲಕ ಪ್ರೇಮಕ್ಕೆ ತಿರುಗಿ 2018ರಲ್ಲಿ ಅದ್ದೂರಿ ಮದುವೆಯಲ್ಲಿ ಅಂತ್ಯಗೊಂಡಿತು. ಇಂದಿಗೂ ಇವರು ಹಿಂದು ಮತ್ತು ಕ್ರೈಸ್ತ ಧರ್ಮದ ಎರಡೂ ಸಂಪ್ರದಾಯಗಳನ್ನು ಗೌರವಿಸುತ್ತಾರೆ.

67

ಮುಂದಿನ ಸಿನಿಮಾಗಳು:

ಸದ್ಯಕ್ಕೆ ಈ ದಂಪತಿಗೆ ಮಾಲ್ತಿ ಮೇರಿ ಎಂಬ ಮುದ್ದಾದ ಮಗಳಿದ್ದಾಳೆ. ವೃತ್ತಿಜೀವನದ ವಿಷಯಕ್ಕೆ ಬಂದರೆ, ಪ್ರಿಯಾಂಕಾ ಚೋಪ್ರಾ ಅವರು ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಬಹುನಿರೀಕ್ಷಿತ ಚಿತ್ರ 'ವಾರಣಾಸಿ'ಯಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ನಟಿಸಲು ಸಜ್ಜಾಗುತ್ತಿದ್ದಾರೆ. ಇದರ ಜೊತೆಗೆ 2026ರ ಫೆಬ್ರವರಿಯಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಪ್ರಿಯಾಂಕಾ ಭಾಷಣ ಮಾಡಲಿದ್ದಾರೆ.

77

ಒಟ್ಟಾರೆಯಾಗಿ, ಸಾಂಸ್ಕೃತಿಕ ಭಿನ್ನತೆಗಳ ನಡುವೆಯೂ ಪರಸ್ಪರ ಗೌರವ ಮತ್ತು ಪ್ರೀತಿಯಿಂದ ಸಂಸಾರ ನಡೆಸುವುದು ಹೇಗೆ ಎಂಬುದನ್ನು ಈ 'ಪವರ್ ಕಪಲ್' ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಸದ್ಯಕ್ಕೆ ಪ್ರಿಯಾಂಕಾ ಭಾರತದ ಸಿನಿಮಾ 'ವಾರಣಾಸಿ'ಯಲ್ಲಿ ನಟಿಸುತ್ತಿದ್ದಾರೆ. ಅತ್ತ ಅಮೆರಿಕಾದಲ್ಲಿ ಸಿಂಗರ್ ನಿಕ್ ಜಿನಾಸ್ ತಮ್ಮ ವೃತ್ತಿಯಲ್ಲಿ ಬ್ಯುಸಿಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories