ರಾಮಾಯಣ ಶೂಟಿಂಗ್‌ಗೆ ಚಾಲನೆ: ರಾವಣನಾಗಿ ಯಶ್, ಶೀಘ್ರದಲ್ಲೇ ಸೇರುತ್ತಾರೆ ರಾಮ-ಸೀತೆ-ಹನುಮಂತ!

Published : May 02, 2025, 05:10 PM ISTUpdated : May 02, 2025, 05:27 PM IST

‘ರಾಕಿಂಗ್‌ ಸ್ಟಾರ್‌’ ಯಶ್‌ ರಾವಣನ ಪಾತ್ರದಲ್ಲಿ ಅಭಿನಯಿಸುತ್ತಿರುವ ‘ರಾಮಾಯಣ’ ಶೂಟಿಂಗ್‌ ಮುಂಬೈನಲ್ಲಿ ಆರಂಭ. ಕೆಲ ದಿನ ರಾವಣ ಪಾತ್ರದ ಚಿತ್ರೀಕರಣ. 2026ರ ದೀಪಾವಳಿ ವೇಳೆಗೆ ಬಿಡುಗಡೆಯಾಗುವ ಸಿನಿಮಾದ ಬಗ್ಗೆ ಭಾರಿ ಕುತೂಹಲ.

PREV
16
ರಾಮಾಯಣ ಶೂಟಿಂಗ್‌ಗೆ ಚಾಲನೆ: ರಾವಣನಾಗಿ ಯಶ್, ಶೀಘ್ರದಲ್ಲೇ ಸೇರುತ್ತಾರೆ ರಾಮ-ಸೀತೆ-ಹನುಮಂತ!

‘ರಾಮಾಯಣ’ ಸಿನಿಮಾದ ರಾವಣನ ಪಾತ್ರದ ಸಿದ್ಧತೆಯಲ್ಲಿ ತೊಡಗಿದ್ದ ಯಶ್‌ ಇದೀಗ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಮುಂಬೈಯಲ್ಲಿ ಯಶ್‌ ಅವರ ರಾವಣನ ಒಡ್ಡೋಲಗಕ್ಕೆಂದೇ ನಿರ್ಮಿಸಲಾಗಿರುವ ಬೃಹತ್‌ ಸೆಟ್‌ನಲ್ಲಿ ಭರದಿಂದ ಶೂಟಿಂಗ್‌ ನಡೆಯುತ್ತಿದೆ.

26

ಸದ್ಯಕ್ಕೆ ಕೆಲವು ದಿನಗಳ ಕಾಲ ಯಶ್‌ ಅವರ ರಾವಣ ಪಾತ್ರದ್ದಷ್ಟೇ ಶೂಟಿಂಗ್‌ ನಡೆಯಲಿದೆ. ಆ ಬಳಿಕ ಸಾಯಿ ಪಲ್ಲವಿ, ರಣಬೀರ್‌ ಕಪೂರ್‌, ಸನ್ನಿ ಡಿಯೋಲ್‌ ಅವರೂ ಶೂಟಿಂಗ್‌ನಲ್ಲಿ ಸೇರಿಕೊಳ್ಳಲಿದ್ದಾರೆ. 

36

ಅವರು ಸೀತೆ, ರಾಮ ಹಾಗೂ ಹನೂಮಂತನ ಪಾತ್ರದಲ್ಲಿ ನಟಿಸಲಿದ್ದಾರೆ. ಇದರಲ್ಲಿ ಸನ್ನಿ ಡಿಯೋಲ್‌ ಜೂನ್‌ ವೇಳೆಗೆ ಶೂಟಿಂಗ್‌ನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಇನ್ನು ಕೆಲವು ದಿನಗಳಲ್ಲಿ ‘ರಾಮಾಯಣ’ ಮೊದಲ ಭಾಗದ ಶೂಟಿಂಗ್‌ ಮುಕ್ತಾಯಗೊಳ್ಳಲಿದೆ. 

46

ಆ ಬಳಿಕ ಹೆಚ್ಚು ಗ್ಯಾಪ್‌ ಇಲ್ಲದೇ ಎರಡನೇ ಭಾಗದ ಶೂಟಿಂಗ್‌ ಆರಂಭವಾಗಲಿದೆ. ನಿತೇಶ್‌ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಮೊದಲ ಭಾಗ 2026ರ ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿದೆ.

56

ತಾವು ನಟಿಸುವ ಚಿತ್ರಗಳ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವ ಮೊದಲು ಹೀಗೆ ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆ ಸಲ್ಲಿಸುವ ತಮ್ಮ ಪರಂಪರೆಯನ್ನು ಯಶ್‌ ‘ರಾಮಾಯಣ’ ಚಿತ್ರಕ್ಕೂ ಮುಂದುವರಿಸಿದ್ದಾರೆ. 

66

ಈ ಚಿತ್ರದಲ್ಲಿ ಯಶ್ ನಟಿಸುವ ಜೊತೆಗೆ ನಮಿತ್ ಮಲ್ಹೋತ್ರಾ ಜತೆ ಸೇರಿ ನಿರ್ಮಾಣದಲ್ಲೂ ಪಾಲುದಾರರಾಗಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್‌ ಕಪೂರ್‌ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಸನ್ನಿ ಡಿಯೋಲ್‌ ಹನುಮಂತನಾಗಿ ನಟಿಸುತ್ತಿದ್ದಾರೆ. 

Read more Photos on
click me!

Recommended Stories