ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ರಿಷಿ ಕಪೂರ್‌ ಭೇಟಿಗೆ ಕಾರಣವೇನು?

First Published Sep 5, 2022, 4:24 PM IST

ಬಾಲಿವುಡ್‌ ಹಿರಿಯ ನಟ ದಿವಂಗತ ರಿಷಿ ಕಪೂರ್ (Rishi Kapoor) ಅವರ 70ನೇ ಜನ್ಮದಿನ. 4 ಸೆಪ್ಟೆಂಬರ್ 1952 ರಂದು ಜನಿಸಿದ ರಿಷಿ ಕಪೂರ್ 20 ಏಪ್ರಿಲ್ 2020 ರಂದು ಜಗತ್ತಿಗೆ ವಿದಾಯ ಹೇಳಿದರು. ಆದರೆ ಅವರ ಚಿತ್ರ ಹಾಗೂ ಜೀವನದ ಕಥೆಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ರಿಷಿ ಕಪೂರ್ ಯಾವಾಗಲೂ ತಮ್ಮ ವಿಷಯವನ್ನು ಮುಕ್ತವಾಗಿ ಹೇಳಲು ಇಷ್ಟಪಡುತ್ತಿದ್ದರು. ಬಹುಶಃ ಅದಕ್ಕಾಗಿಯೇ ಅವರು ತಮ್ಮ ಆತ್ಮಚರಿತ್ರೆಗೆ 'ಖುಲ್ಲಮ್ ಖುಲ್ಲಾ' ಎಂದು ಹೆಸರಿಸಿದ್ದಾರೆ. ಈ ಪುಸ್ತಕದಲ್ಲಿ ರಿಷಿಯ ಜೀವನಕ್ಕೆ ಸಂಬಂಧಿಸಿದ ಅನೇಕ ಕಥೆಗಳಿವೆ. ಕೆಲವು ವಿವಾದಗಳಿಂದ ಕೂಡಿದ್ದು, ಕೆಲವು ಕುತೂಹಲಕಾರಿಯಾಗಿವೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆಗಿನ ಸಂಬಂಧದ ಬಗ್ಗೆಯೂ ಅವರು ಈ ಪುಸ್ತಕದಲ್ಲಿ ಹೇಳಿದ್ದಾರೆ.ರಿಷಿ ಕಪೂರ್ ದಾವೂದ್ ಇಬ್ರಾಹಿಂನನ್ನು ಎರಡು ಬಾರಿ ಹೇಗೆ ಭೇಟಿಯಾದರು ಎಂದು ಹೇಳಿಕೊಂಡಿದ್ದಾರೆ.

ಪುಸ್ತಕದ ಪ್ರಕಾರ, 1988ರಲ್ಲಿ, ರಿಷಿ ಕಪೂರ್ ತಮ್ಮ ವಿಶೇಷ ಸ್ನೇಹಿತ ಬಿಟ್ಟು ಆನಂದ್ ಅವರೊಂದಿಗೆ ದುಬೈಗೆ ಹೋದಾಗ, ಅವರು ದಾವೂದ್ ಅವರನ್ನು ಮೊದಲ ಬಾರಿಗೆ ಭೇಟಿಯಾದರು. ರಿಷಿ ಹೇಳಿದ ಪ್ರಕಾರ ಅಪರಿಚಿತ ವ್ಯಕ್ತಿಯೊಬ್ಬ ವಿಮಾನ ನಿಲ್ದಾಣಕ್ಕೆ ಬಂದು ಫೋನ್ ಕೊಟ್ಟು ದಾವೂದ್ ನಿಮ್ಮ ಜೊತೆ ಮಾತನಾಡುತ್ತಾನೆ ಎಂದು ಹೇಳಿದ್ದ ಎಂದು ಬರೆದಿದ್ದಾರೆ.

ದಾವೂದ್ ರಿಷೆ ಜೊತೆಗೆ ಮಾತನಾಡಿದರು. ದುಬೈನಲ್ಲಿ ಅವರನ್ನು ಸ್ವಾಗತಿಸಲಾಯಿತು. ಏನಾದರೂ ಅಗತ್ಯವಿದ್ದರೆ ತಿಳಿಸಬಹುದು ಎಂದು ಹೇಳಿದರು. ಅಷ್ಟೇ ಅಲ್ಲ ದಾವೂದ್ ರಿಷಿಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಈ ಆಹ್ವಾನವನ್ನು ಕೇಳಿ ರಿಷಿ ಕಪೂರ್‌ ತುಂಬಾ ಆಶ್ಚರ್ಯ ಪಟ್ಟಿದ್ದರಂತೆ.

ಸ್ವಲ್ಪ ಸಮಯದ ನಂತರ ಅವರಿಗೆ ದಾವೂದ್‌ನ ಬಲಗೈ ಬಂಟನ ಪರಿಚಯವಾಯಿತು ಮತ್ತು ದಾವೂದ್ ನಟನ ಜೊತೆಗೆ ಚಹಾ ಕುಡಿಯಲು ಬಯಸುತ್ತಾನೆ ಎಂದು ಹೇಳಿದನು. ದಾವೂದ್‌ನ ಆಹ್ವಾನವನ್ನು ರಿಷಿ ಒಪ್ಪಿಕೊಂಡರು.

ಅವರು ಮತ್ತು ಅವರ ಸ್ನೇಹಿತ ಬಿಟ್ಟೂವನ್ನು ರೋಲ್ಸ್ ರಾಯ್ಸ್ ಕಾರಿನಲ್ಲಿ ಹೋಟೆಲ್‌ಗೆ ಕರೆದೊಯ್ದರು. ಆದರೆ ಅವರಿಗೆ ಯಾವ ಸ್ಥಳ ಎಂದು ಗುರುತಿಸಲು ಸಾಧ್ಯವಾಗಲಿಲ್ಲ. ದಾವೂದ್ ಸೂಟ್ ಧರಿಸಿದ್ದ. ಮದ್ಯ ಸೇವಿಸದ ಕಾರಣ ಚಹಾದ ವ್ಯವಸ್ಥೆ ಮಾಡಲಾಗಿತ್ತು.

ಸುಮಾರು ನಾಲ್ಕು ಗಂಟೆಗಳ ಕಾಲ ಹಲವು ವಿಷಯಗಳ ಬಗ್ಗೆ ಇವರಿಬ್ದರು ಚರ್ಚಿಸಿದ್ದರು. ಈ ವೇಳೆ ದಾವೂದ್ ಆತನ  ಬಗ್ಗೆ ಹಲವು ವಿಷಯಗಳನ್ನು ಹೇಳಿಕೊಂಡಿದ್ದ. ತನ್ನ ಅಪರಾಧ ಚಟುವಟಿಕೆಗಳ ಬಗ್ಗೆಯೂ ಹೇಳಿದ್ದಾನೆ. ಈ ಸಭೆಯಲ್ಲಿ ದಾವೂದ್ ರಿಷಿ ಕಪೂರ್‌ಗೆ ಮುಂಬೈನಲ್ಲಿ ಒಬ್ಬ ವ್ಯಕ್ತಿ ಅಲ್ಲಾನ ವಿರುದ್ಧ ಹೋಗುತ್ತಿದ್ದಾನೆ, ಆದ್ದರಿಂದ ಅವನು ಅವನನ್ನು ಕೊಂದಿದ್ದೇನೆ ಎಂದು ಹೇಳಿಕೊಂಡಿದ್ದನು ಎಂದು ರಿಷಿ ಪುಸ್ತಕದಲ್ಲಿ ಹೇಳಿದ್ದಾರೆ.

'ತವೈಫ್'  ಚಿತ್ರದಲ್ಲಿನ ನಟನ ಪಾತ್ರದ ಹೆಸರು ದಾವೂದ್ ಆಗಿರುವುದರಿಂದ ದಾವೂದ್‌ ರಿಷಿಯ  'ತವೈಫ್' ಚಿತ್ರವನ್ನು ಇಷ್ಷಪಟ್ಟಿದ್ದಾಗ  ರಿಷಿಯೊಂದಿಗೆ ಹಂಚಿ ಕೊಂಡಿದ್ದನಂತೆ. ಈ ಚಿತ್ರದಿಂದ ದಾವೂದ್ ಹೆಸರು ಮತ್ತೂ ಜನಪ್ರಿಯವಾಯಿತಂತೆ. 

ದಾವೂದ್‌ನನ್ನು ಭೇಟಿಯಾಗಲು ಹೋದಾಗ ತುಂಬಾ ಹೆದರಿಕೊಂಡಿದ್ದೆ. ಆದರೆ ನಂತರ  ಭಯ ಹೋಯಿತು ಎಂದು ಎಂದು ರಿಷಿ  ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.. ರಿಷಿ ಪ್ರಕಾರ 1989ರಲ್ಲಿ ದಾವೂದ್ ನನ್ನು ಎರಡನೇ ಬಾರಿ ಭೇಟಿಯಾಗಿದ್ದರು. ಆ ವೇಳೆ ಪತ್ನಿ ನೀತು ಕೂಡ ಜೊತೆಗಿದ್ದರು. ದುಬೈನ ಅಂಗಡಿಯೊಂದರಲ್ಲಿ ನೀತು ಜೊತೆ ಇದ್ದೆ, ಅಲ್ಲಿ ದಾವೂದ್ ಕೂಡ ಸಿಕ್ಕಿದ್ದನು  ಎಂದು ರಿಷಿ ಪುಸ್ತಕದಲ್ಲಿ ಬರೆದಿದ್ದಾರೆ.

click me!