ರಿಷಬ್‌ ಶೆಟ್ಟಿ 'ಕಾಂತಾರ ಚಾಪ್ಟರ್‌ 1': ಕೇವಲ 34 ನಿಮಿಷದಲ್ಲಿ 10,000 ಟಿಕೆಟ್‌ ಮಾರಾಟ

Published : Sep 27, 2025, 01:09 AM IST

‘ಕಾಂತಾರ ಚಾಪ್ಟರ್‌ 1’ ಟಿಕೆಟ್‌ ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ. ಕೇವಲ 34 ನಿಮಿಷಗಳಲ್ಲಿ 10,000 ಟಿಕೆಟ್‌ ಸೇಲ್‌ ಆಗುವ ಮೂಲಕ ಈ ಸಾಧನೆ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

PREV
15
ಟಿಕೆಟ್‌ ಬುಕಿಂಗ್‌ನಲ್ಲಿ ದಾಖಲೆ

ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್‌ 1’ ಟಿಕೆಟ್‌ ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ. ಕೇವಲ 34 ನಿಮಿಷಗಳಲ್ಲಿ 10,000 ಟಿಕೆಟ್‌ ಸೇಲ್‌ ಆಗುವ ಮೂಲಕ ಈ ಸಾಧನೆ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

25
ರಾಜ್ಯದೆಲ್ಲೆಡೆ ಬುಕಿಂಗ್‌

ಅಕ್ಟೋಬರ್‌ 2ರಂದು ಬೆಳಗ್ಗೆ 6.30ಕ್ಕೆ ಮೊದಲ ಶೋ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಕೆಲವು ಕಡೆ ಸಿನಿಮಾದ ಗರಿಷ್ಠ ಟಿಕೆಟ್‌ ದರ 1000 ರು.ಗಳಿಗೆ ಏರಿಕೆ ಆಗಿದೆ. ರಾಜ್ಯದೆಲ್ಲೆಡೆ ಮಲ್ಟಿಪ್ಲೆಕ್ಸ್‌ ಚೈನ್‌ ಹಾಗೂ ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಬುಕಿಂಗ್‌ ಆರಂಭವಾಗಿದೆ.

35
ಸ್ಟಾರ್‌ ಸಿನಿಮಾಗಳನ್ನೆಲ್ಲ ಹಿಂದಿಕ್ಕಿ ನಂಬರ್‌ 1

ಮೈಸೂರು, ಮಂಗಳೂರು ಸೇರಿದಂತೆ ಜಿಲ್ಲಾಕೇಂದ್ರಗಳಲ್ಲಿ ರು.750 ಗರಿಷ್ಠ ಟಿಕೆಟ್‌ ದರವಿದೆ. ಉಳಿದಂತೆ ಹೆಚ್ಚಿನೆಡೆ 350 ರು.ನಿಂದ 550ರು.ವರೆಗೆ ಸಾಮಾನ್ಯ ದರವಿದೆ. ಅತಿ ವೇಗದ ಬುಕಿಂಗ್‌ನಲ್ಲಿ ‘ಕಾಂತಾರ ಚಾಪ್ಟರ್‌ 1’ ಸ್ಟಾರ್‌ ಸಿನಿಮಾಗಳನ್ನೆಲ್ಲ ಹಿಂದಿಕ್ಕಿ ನಂಬರ್‌ 1 ಸ್ಥಾನದಲ್ಲಿದೆ.

45
ಪೇಯ್ಡ್‌ ಪ್ರೀಮಿಯರ್‌ ಶೋ

ರಜನಿಕಾಂತ್‌ ಅವರ ‘ಕೂಲಿ’ ಸಿನಿಮಾ 37 ನಿಮಿಷಗಳಲ್ಲಿ 10,000 ಟಿಕೆಟ್‌ ಸೇಲ್‌ ಮೂಲಕ 2ನೇ ಸ್ಥಾನಕ್ಕಿಳಿದಿದೆ. ‘ಓಜಿ’, ‘ಕೆಜಿಎಫ್‌ 2’, ‘ಲಿಯೋ’ ನಂತರದ ಸ್ಥಾನಗಳಲ್ಲಿವೆ. ಅಕ್ಟೋಬರ್‌ 1 ರಂದು ಪೇಯ್ಡ್‌ ಪ್ರೀಮಿಯರ್‌ ಶೋ ನಡೆಯುವ ಕುರಿತು ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ.

55
ಖಚಿತವಾದರೆ ಪೇಯ್ಡ್‌ ಪ್ರೀಮಿಯರ್‌

ಕಾಂತಾರ ಚಾಪ್ಟರ್‌ 1 ಪೇಯ್ಡ್‌ ಪ್ರೀಮಿಯರ್‌ಗೆ ಸಾಕಷ್ಟು ಬೇಡಿಕೆ ಇದೆ. ಆದರೆ ನಾವಿನ್ನೂ ಈ ವಿಚಾರದಲ್ಲಿ ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಅ.1ರೊಳಗೆ ಸಿನಿಮಾದ ಫೈನಲ್‌ ಔಟ್‌ಪುಟ್‌ ಬರುತ್ತದೆ ಎಂದು ಖಚಿತವಾದರೆ ಪೇಯ್ಡ್‌ ಪ್ರೀಮಿಯರ್‌ ಮಾಡುತ್ತೇವೆ. ಇಲ್ಲವಾದರೆ ಅಕ್ಟೋಬರ್‌ 2ರಿಂದಲೇ ಪ್ರದರ್ಶನ ನಡೆಯುತ್ತದೆ ಎಂದು ಹೊಂಬಾಳೆ ಫಿಲಂಸ್‌ ಚಲುವೇ ಗೌಡ ಹೇಳಿದ್ದಾರೆ.

Read more Photos on
click me!

Recommended Stories