ಹೃದಯ, ಪೌರತ್ವ ಎರಡ್ರಲ್ಲೂ ಹಿಂದೂಸ್ತಾನಿ: OMG 2 ವಿವಾದ ನಡುವೆ ಭಾರತೀಯ ಪೌರತ್ವ ಪಡೆದ ದಾಖಲೆ ಹಂಚ್ಕೊಂಡ ಅಕ್ಷಯ್ ಕುಮಾರ್

Published : Aug 15, 2023, 01:33 PM ISTUpdated : Aug 15, 2023, 02:18 PM IST

ಅಕ್ಷಯ್‌ಕುಮಾರ್‌ ಅವರ OMG 2 ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ವಿವಾದದ ನಡುವೆಯೂ ಸದ್ದು ಮಾಡ್ತಿದೆ. ಬಾಲಿವುಡ್‌ ನಟ ಅಕ್ಷಯ್‌ ಭಾರತೀಯ ಪ್ರಜೆಯಲ್ಲ ಎನ್ನುತ್ತಿದ್ದವರಿಗೆ ಈಗ ಕೊನೆಗೂ ಉತ್ತರ ಕೊಟ್ಟಿದ್ದಾರೆ.

PREV
19
ಹೃದಯ, ಪೌರತ್ವ ಎರಡ್ರಲ್ಲೂ ಹಿಂದೂಸ್ತಾನಿ: OMG 2 ವಿವಾದ ನಡುವೆ ಭಾರತೀಯ ಪೌರತ್ವ ಪಡೆದ ದಾಖಲೆ ಹಂಚ್ಕೊಂಡ ಅಕ್ಷಯ್ ಕುಮಾರ್

ಅಕ್ಷಯ್‌ಕುಮಾರ್‌ ಅವರ OMG 2 ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ವಿವಾದದ ನಡುವೆಯೂ ಸದ್ದು ಮಾಡ್ತಿದೆ. ಈ ನಡುವೆ ಭಾರತದ 77ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ತಿರೋ ಬೆನ್ನಲ್ಲೇ ಅಕ್ಷಯ್‌ ಕುಮಾರ್‌ ಮತ್ತೊಂದು ಸುದ್ದಿ ಹಂಚಿಕೊಂಡಿದ್ದಾರೆ. ಅಕ್ಷಯ್‌ ಕುಮಾರ್‌ ಭಾರತೀಯ ಪ್ರಜೆಯಲ್ಲ ಎನ್ನುತ್ತಿದ್ದವರಿಗೆ ಈಗ ಕೊನೆಗೂ ಉತ್ತರ ಕೊಟ್ಟಿದ್ದಾರೆ. 
 

29

ಅಕ್ಷಯ್ ಕುಮಾರ್ ಈಗ ಭಾರತೀಯ ಪ್ರಜೆ ಅಂದರೆ ಭಾರತೀಯ ಪೌರತ್ವ ಪಡೆದುಕೊಂಡಿದ್ದಾರೆ. ಅವರು ತಮ್ಮ ಅಧಿಕೃತ ಸರ್ಕಾರಿ ದಾಖಲೆಗಳ ಚಿತ್ರದೊಂದಿಗೆ ಎಕ್ಸ್‌ ಅಂದರೆ ಈ ಹಿಂದಿನ ಟ್ವಿಟ್ಟರ್‌ನಲ್ಲಿ  ಪುರಾವೆಯನ್ನು ಹಂಚಿಕೊಂಡಿದ್ದಾರೆ. ಅಕ್ಷಯ್‌ ಕುಮಾರ್‌ ಈ ಹಿಂದೆ ಕೆನಡಾದ ಪ್ರಜೆಯಾಗಿದ್ದರು, ಇದಕ್ಕಾಗಿ ಅವರು ಆಗಾಗ್ಗೆ ಹಲವರಿಂದ ಟೀಕೆಗೆ ಒಳಗಾಗಿದ್ದರು.

39

ಅಕ್ಷಯ್‌ ಕುಮಾರ್‌ ತನ್ನ ಹೆಸರನ್ನು ಅಕ್ಷಯ್ ಹರಿಓಂ ಭಾಟಿಯಾ ಎಂದು ನಮೂದಿಸಿದ್ದು, ಈ ದಾಖಲೆಯನ್ನು ಎಕ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಅಲ್ಲದೆ, ಅವರು ತಮ್ಮ ಟ್ವೀಟ್‌ಗೆ ‘’ಹೃದಯ ಹಾಗೂ ಪೌರತ್ವ ಎರಡೂ ಸಹ ಹಿಂದೂಸ್ತಾನಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! ಜೈ ಹಿಂದ್" ಎಂಬ ಕ್ಯಾಪ್ಷನ್‌ ಅನ್ನು ಹಂಚಿಕೊಂಡಿದ್ದಾರೆ. ಅಕ್ಷಯ್‌ ಕುಮಾರ್‌ ಈ ಸುದ್ದಿ ಹಂಚಿಕೊಂಡ ಬೆನ್ನಲ್ಲೇ  ಅಭಿಮಾನಿಗಳು ಅಭಿನಂದಿಸಿದ್ದು, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. 

49

2019 ರಲ್ಲಿ, ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅಕ್ಷಯ್‌ ಕುಮಾರ್‌ ಶೀಘ್ರದಲ್ಲೇ ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಭರವಸೆ ನೀಡಿದ್ದರು. ಆದರೂ, ಇನ್ನೂ ಪೌರತ್ವ ಪಡೆಯದ ಬಗ್ಗೆ 3 ವರ್ಷಗಳ ಬಳಿಕ ಕಾರ್ಯಕ್ರಮವೊಂದರಲ್ಲಿ ಅಪ್ಡೇಟ್‌ ಅನ್ನು ಹಂಚಿಕೊಂಡಿದ್ದರು. 

 

59

“ಕೆನಡಾದ ಪಾಸ್‌ಪೋರ್ಟ್ ಹೊಂದಿರುವುದು ನಾನು ಭಾರತೀಯನಿಗಿಂತ ಕಡಿಮೆ ಎಂದು ಅರ್ಥವಲ್ಲ. I am very much Indian. ಕಳೆದ 9 ವರ್ಷಗಳಿಂದ ಪಾಸ್‌ಪೋರ್ಟ್‌ ಪಡೆದಾಗ ನಾನು ಇಲ್ಲಿದ್ದೆ. ಮತ್ತು ಮತ್ತು ಏಕೆ, ಏನಾಯಿತು, ನನ್ನ ಚಲನಚಿತ್ರಗಳು ಯಾಕೆ ಓಡ್ತಿಲ್ಲ ಎಂಬ ಕಾರಣವನ್ನು ಪಡೆಯಲು ನಾನು ಬಯಸುವುದಿಲ್ಲ.. ಎಂದು ಹೇಳಿದ್ದರು.

69

ಅಲ್ಲದೆ, ಭಾರತೀಯ ಪೌರತ್ವ ಪಡೆಯುವ ಬಗ್ಗೆ 2019 ರಲ್ಲಿ ಹೇಳಿದ್ದೆ, ನಾನು ಅದಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ಬಳಿಕ ಕೋವಿಡ್‌ ಸಾಂಕ್ರಾಮಿಕ ರೋಗ ಬಂದಿತ್ತು. ಮತ್ತು 2 - 2.5 ವರ್ಷಗಳ ಕಾಲ ಎಲ್ಲವೂ ಸ್ಥಗಿತಗೊಂಡಿತು. ನನ್ನ renounce letter ಬಂದಿದೆ ಮತ್ತು ಶೀಘ್ರದಲ್ಲೇ ನನ್ನ ಸಂಪೂರ್ಣ ಪಾಸ್‌ಪೋರ್ಟ್ ಬರಲಿದೆ. ನಾನು ಏನು ಮಾಡಬೇಕು. ನಾನು ಸಾಂಕ್ರಾಮಿಕ ರೋಗವನ್ನು ತಂದಿಲ್ಲ ಎಂದೂ ಅವರು ಹೇಳಿದ್ದರು.

79

ಅಕ್ಷಯ್ ಕುಮಾರ್‌ ಅವರ ಮುಂಬರುವ ಚಲನಚಿತ್ರಗಳು
ಪಂಕಜ್ ತ್ರಿಪಾಠಿ ಜೊತೆಗೆ ಅಕ್ಷಯ್ ಕುಮಾರ್‌ ಅವರ OMG 2 ಚಿತ್ರ ಕಳೆದ ಶುಕ್ರವಾರ ಬಿಡುಗಡೆಯಾಯಿತು ಮತ್ತು Gadar 2 ರ ಪ್ರಬಲ ಹೋರಾಟದ ಹೊರತಾಗಿಯೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.

89

ಇದರ ಹೊರತಾಗಿ, ಸೂರರೈ ಪೊಟ್ರು ಚಿತ್ರದ ಹಿಂದಿ ರೀಮೇಕ್‌ನಲ್ಲೂ ನಟಿಸಿದ್ದು,  ಸೆಪ್ಟೆಂಬರ್ 1 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ಹಾಗೂ,  ಟೈಗರ್ ಶ್ರಾಫ್ ಅವರೊಂದಿಗೆ ಆಕ್ಷನ್ ಥ್ರಿಲ್ಲರ್ ಚಿತ್ರ ಬಡೇ ಮಿಯಾನ್ ಚೋಟೆ ಮಿಯಾನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ಈದ್ 2024 ರ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.

 

99

ಜತೆಗೆ, ಅಕ್ಷಯ್ ಕುಮಾರ್ ಕಾಮಿಡಿ ಫ್ರ್ಯಾಂಚೈಸ್ ಹೌಸ್‌ಫುಲ್‌ನ ಐದನೇ ಭಾಗದಲ್ಲಿ ರಿತೇಶ್ ದೇಶ್‌ಮುಖ್ ಅವರೊಂದಿಗೆ ಮತ್ತೆ ಒಂದಾಗಲಿದ್ದಾರೆ. ಹೆಚ್ಚು ನಿರೀಕ್ಷಿತ ಹೇರಾ ಫೆರಿ 3 ನಲ್ಲಿಯೂ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. 

Read more Photos on
click me!

Recommended Stories