‘ಆದಿಪುರುಷ’ ರಾಮನ ಪಾತ್ರಕ್ಕೆ ಪ್ರಭಾಸ್ ಸಂಭಾವನೆ ಎಷ್ಟು?

First Published | Oct 5, 2022, 4:21 PM IST

ಸೌತ್‌ ಸೂಪರ್‌ಸ್ಟಾರ್‌ ಪ್ರಭಾಸ್‌ (Prabhas) ಆವರ ಅದಿಪುರುಷ  (Adipurush) ಸಿನಿಮಾದ ಟ್ರೇಲರ್‌ ಭಾನುವಾರ  ರೀಲಿಸ್‌ ಆಗಿದೆ. ಮಧ್ಯಪ್ರದೇಶದ ಸಚಿವರ ಕಾನೂನು ಕ್ರಮದ ಎಚ್ಚರಿಕೆ, ಬಾಯ್ಕಟ್‌ ಕರೆ ಮತ್ತು VFX ಸಂಬಂಧಿತ ಟ್ರೋಲ್‌ಗಳ ನಡುವೆಯೂ ಪ್ರಸ್ತುತ ಓಂ ರಾವುತ್ ಅವರ ಈ ಸಿನಿಮಾ  ಸುದ್ದಿಯಲ್ಲಿದೆ. ಇದರ ನಡುವೆ ಅದಿಪುರುಷದಲ್ಲಿನ ಪಾತ್ರಕ್ಕಾಗಿ ಪ್ರಭಾಸ್‌ ಪಡೆದ ಫೀಸ್‌ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ. ಅಷ್ಟಕ್ಕೂ ಬಾಹುಬಲಿ ನಟ ರಾಮನ ಪಾತ್ರಕ್ಕಾಗಿ ಎಷ್ಷು ಚಾರ್ಜ್‌ ಮಾಡಿದ್ದಾರೆ ಗೊತ್ತಾ?

ಪ್ರಭಾಸ್, ಸೈಫ್ ಅಲಿ ಖಾನ್ ಮತ್ತು ಕೃತಿ ಸನನ್ ಅಭಿನಯದ 'ಆದಿಪುರುಷ' ಚಿತ್ರ ಬಿಡುಗಡೆಗೆ ನಾಲ್ಕು ತಿಂಗಳ ಮುನ್ನವೇ ವಿವಾದಗಳ ಸುಳಿಯಲ್ಲಿ ಸಿಲುಕಿದೆ. ಇದರ ನಡುವೆಯೇ ಮ್ಯಾಗ್ನನ್ ಓಪಸ್‌ ತಯಾರಕರು ಭಾನುವಾರದಂದು ಚಿತ್ರದ ಮೊದಲ ಟೀಸರ್ ಅನ್ನು ಕೈ ಬಿಟ್ಟಿದ್ದಾರೆ. 

ಟೀಸರ್‌ ಬಿಡುಗಡೆಯ ತಕ್ಷಣವೇ ಚಿತ್ರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ. ಚಿತ್ರದ ವಿಎಫ್‌ಎಕ್ಸ್‌ಗಾಗಿ ಮತ್ತು ತಪ್ಪು ಸ್ಟಾರ್‌ಗಳ ಆಯ್ಕೆಗಾಗಿ ತಯಾರಕರನ್ನು ಟ್ರೋಲ್ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ 'ರಾವಣ' (ಸೈಫ್ ಅಲಿ ಖಾನ್) ಪಾತ್ರ ಅಲಾವುದ್ದೀನ್ ಖಿಲ್ಜಿಯಂತೆ ಕಾಣುತ್ತದೆ ಎಂದು ಹೇಳುತ್ತಿದ್ದಾರೆ.

Tap to resize

ಈ ಎಲ್ಲಾ ಟ್ರೋಲ್‌ಗಳ ಕಾರಣದಿಂದ  ಚಿತ್ರ ಈಗಾಗಲೇ ಹಿನ್ನಡೆಯನ್ನು ಎದುರಿಸುತ್ತಿದೆ. ಇದೆಲ್ಲದರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಭಾಸ್ ಚಿತ್ರಕ್ಕೆ ಪಡೆದಿರುವ ಭಾರೀ ಮೊತ್ತದ  ಸಂಭಾವನೆಯ ಬಗ್ಗೆ ವರದಿಗಳು ಮುನ್ನೆಲೆಗೆ ಬಂದಿವೆ.

ಪೌರಾಣಿಕ ಚಿತ್ರದಲ್ಲಿ ಭಗವಾನ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಪ್ರಭಾಸ್, 'ಬಾಹುಬಲಿ'  ಯಶಸ್ಸಿನ ನಂತರ ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ. ವರದಿಗಳನ್ನು ನಂಬುವುದಾದರೆ, 'ಆದಿಪುರುಷ' ಚಿತ್ರಕ್ಕಾಗಿ ನಟ 100 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ವಿಧಿಸಿದ್ದಾರೆ.

Adipurush Teaser

ಪ್ರಭಾಸ್ ನಂತರ, 'ಆದಿಪುರುಷ' ಚಿತ್ರದಲ್ಲಿ ಎರಡನೇ ಅತಿ ಹೆಚ್ಚು ಸಂಭಾವನೆ ಪಡೆದ ನಟ ಸೈಫ್ ಅಲಿ ಖಾನ್.  ಅವರು 12 ಕೋಟಿ ರೂಪಾಯಿಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

ಮತ್ತೊಂದೆಡೆ ಕೃತಿ ಸನೋನ್ 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರೆ, ಸನ್ನಿ ಸಿಂಗ್ 1.5 ಕೋಟಿ ರೂಪಾಯಿ ಮತ್ತು ಸೋನಾಲ್ ಚೌಹಾನ್ 50 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ವರದಿಯಾಗಿದೆ.

ಸೈಫ್ ಆಲಿ ಖಾನ್‌ ರಾವಣನಾಗಿ, ಕೃತಿ ಸನೋನ್‌ ಸೀತೆಯಾಗಿ, ಸನ್ನಿ ಲಕ್ಷ್ಮಣನಾಗಿ ಮತ್ತು ದೇವದತ್ತ ನಾಗೆ ಭಗವಾನ್ ಹನುಮಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
 

ಈ ನಡುವೆ  ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ‘ಆದಿಪುರುಷ’ ನಿರ್ಮಾಪಕರಿಗೆ ಎಚ್ಚರಿಕೆ ನೀಡಿದ್ದು, ಪೌರಾಣಿಕ ಪಾತ್ರಗಳ ತಪ್ಪಾಗಿ ಚಿತ್ರಿಸುವ ಯಾವುದೇ ದೃಶ್ಯವನ್ನು ಬಿಟ್ಟುಬಿಡಬೇಕು, ಇಲ್ಲದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಭಗವಾನ್ ಹನುಮಂತನ ಪಾತ್ರವನ್ನು ಚರ್ಮ ಧರಿಸಿ ತೋರಿಸಿರುವ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಓಂ ರಾವುತ್ ನಿರ್ದೇಶನದ 'ಆದಿಪುರುಷ' 500 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ. ಚಿತ್ರವು ಜನವರಿ 12, 2023 ರಂದು ಥಿಯೇಟರ್‌ಗಳನ್ನು ತಲುಪಲಿದೆ.ಇ ದು ದೇಶಾದ್ಯಂತ ಬಹು ಭಾಷೆಗಳಲ್ಲಿ ಸರಿಸುಮಾರು 20,000 ಪರದೆಗಳಲ್ಲಿ ಬಿಡುಗಡೆಯಾಗಲಿದೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಟೀಸರ್ ಎಂಬ ದಾಖಲೆಯನ್ನು ಚಿತ್ರ  ಈಗಾಗಲೇ ಸೃಷ್ಟಿಸಿದೆ.
 

Latest Videos

click me!