Ponniyin Selvan: ಐಶ್ವರ್ಯಾ ರೈ ಚಿತ್ರ ಕಲೆಕ್ಷನ್‌ನಲ್ಲಿ ಶೇ. 50ರಷ್ಷು ಡೌನ್

Published : Oct 05, 2022, 04:43 PM IST

ಮಣಿರತ್ನಂ  (ManiRatnam) ನಿರ್ದೇಶನದ, 'ಪೊನ್ನಿಯಿನ್ ಸೆಲ್ವನ್:1 (Ponniyin Selvan)' ಮೊದಲ ಮೂರು ದಿನಗಳಲ್ಲಿ 100 ಕೋಟಿ ಕ್ಲಬ್‌ಗೆ ಪ್ರವೇಶಿಸುವ ಮೂಲಕ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಪ್ರಭಾವಶಾಲಿ ಆರಂಭವನ್ನು ಪಡೆಯಿತು. ಆದರೆ ಈ ಸಿನಿಮಾ ಮಂಡೆ ಟೆಸ್ಟ್‌ನಲ್ಲಿ ಚಿತ್ರವು ಅದರ ಸಂಗ್ರಹದಲ್ಲಿ 50 ಪ್ರತಿಶತದಷ್ಟು ಕುಸಿತ ಕಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಆರಂಭದ ನಂತರ, ಟ್ರೇಡ್ ವಿಶ್ಲೇಷಕರು 'ಪೊನ್ನಿಯಿನ್ ಸೆಲ್ವನ್'ನ ಸೋಮವಾರದ ಪರೀಕ್ಷೆಯಲ್ಲೂ ಉತ್ತಮ ಪ್ರದರ್ಶನವನ್ನು ಕಾಣುತ್ತದೆ ಎಂದು ಎದುರು ನೋಡುತ್ತಿದ್ದರು. ಆದರೆ, ಮಣಿರತ್ನಂ ಅವರ ನಿರ್ದೇಶನದ ಚಿತ್ರವು ಭಾನುವಾರಕ್ಕೆ ಹೋಲಿಸಿದರೆ ಅದರ ಸಂಗ್ರಹಣೆಯಲ್ಲಿ ನೇರವಾಗಿ 50 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ.

PREV
16
Ponniyin Selvan: ಐಶ್ವರ್ಯಾ ರೈ ಚಿತ್ರ ಕಲೆಕ್ಷನ್‌ನಲ್ಲಿ ಶೇ. 50ರಷ್ಷು ಡೌನ್

ಬಹುತಾರಾಗಣದ ಚಿತ್ರ, 'ಪೊನ್ನಿಯಿನ್ ಸೆಲ್ವನ್: ಐ' ಅಥವಾ 'ಪಿಎಸ್: 1', ಸೋಮವಾರದ ಪರೀಕ್ಷೆಯಲ್ಲಿ ಸ್ವಲ್ಪ ಹಿಂದುಳಿದಿದೆ. ಮೊದಲ ಮೂರು ದಿನಗಳಲ್ಲಿ 100 ಕೋಟಿ ಗಳಿಸಿದ ಚಿತ್ರದ ಕಲೆಕ್ಷನ್ ಭಾನುವಾರಕ್ಕೆ ಹೋಲಿಸಿದರೆ ಸೋಮವಾರ (ಅಕ್ಟೋಬರ್ 3) ಭಾರಿ ಕುಸಿತ ದಾಖಲಿಸಿದೆ.

26

ಆರಂಭಿಕ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಪ್ರಕಾರ, ಸೋಮವಾರದಂದು ಚಿತ್ರ 19.5 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದು ಭಾನುವಾರಕ್ಕಿಂತ ಸುಮಾರು 50 ಪ್ರತಿಶತದಷ್ಟು ಕಡಿಮೆ. ಭಾನುವಾರದಂದು 39.2 ಕೋಟಿ ಗಳಿಸಿದ ನಂತರ ಈ ಚಿತ್ರದ ಕಲೆಕ್ಷನ್ ಕೇವಲ ಮೂರು ದಿನಗಳಲ್ಲಿ 100 ಕೋಟಿ ದಾಟಿದೆ.

36

‘ಪೊನ್ನಿಯಿನ್ ಸೆಲ್ವನ್:1, ಚೋಳ ಸಾಮ್ರಾಜ್ಯದ ಇತಿಹಾಸ ಬಿಂಬಿಸುವ ನಿಯತಕಾಲಿಕ ನಾಟಕವು ಸೆಪ್ಟೆಂಬರ್ 30 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. ಇದು ತನ್ನ ಆರಂಭಿಕ ದಿನದ ಕಲೆಕ್ಷನ್‌ನಲ್ಲಿ ರೂ 36.5 ಕೋಟಿ ಗಳಿಸಿತು ಮತ್ತು ನಂತರ ಎರಡನೇ ದಿನ ರೂ 34.6 ಕೋಟಿ ಗಳಿಸಿತು. 

46

ಪೊನ್ನಿಯಿನ್ ಸೆಲ್ವನ್: ಇದುವರೆಗಿನ  ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಹೀಗಿದೆ:
ಶುಕ್ರವಾರ: 36.5 ಕೋಟಿ ರೂ 
ಶನಿವಾರ: 34.6 ಕೋಟಿ ರೂ 
ಭಾನುವಾರ: 39.2 ಕೋಟಿ ರೂ
ಸೋಮವಾರ: ರೂ 19.5 ಕೋಟಿ ರೂ. 

56

ಪೊನ್ನಿಯಿನ್ ಸೆಲ್ವನ್: 1’ ಚಿತ್ರ ತಮಿಳು ಭಾಷೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ. ಸೋಮವಾರದ ಆರಂಭಿಕ ಅಂಕಿಅಂಶಗಳನ್ನು ಸೇರಿಸಿದರೆ, ಚಿತ್ರವು ತಮಿಳಿನಲ್ಲಿ ಸುಮಾರು 104.95 ಕೋಟಿ ರೂಪಾಯಿಗಳನ್ನು ಗಳಿಸಿದೆ. 

66

ನಂತರ ತೆಲುಗು 12 ಕೋಟಿ ರೂಪಾಯಿಗಳನ್ನು ಗಳಿಸಿದೆ. ಅದೇ ಸಮಯದಲ್ಲಿ, ಹಿಂದಿಯಲ್ಲಿ 'ಪಿಎಸ್:1 ಚಿತ್ರದ ಕಲೆಕ್ಷನ್ ಇದುವರೆಗೆ ಸುಮಾರು 10 ಕೋಟಿ ರೂ. ಮತ್ತು ಮಲಯಾಳಂನಲ್ಲಿ ಸುಮಾರು 2.5 ಕೋಟಿ ರೂ ಗಳಿಸಿದೆ.
 

Read more Photos on
click me!

Recommended Stories