ಸುಶಾಂತ್ ಸಾವಿನ ನಂತರದ ಟ್ರೋಲರ್‌ಗಳ ಮೇಲೆ ಕಿಡಿ ಕಾರಿದ ರಿಯಾ ಚಕ್ರವರ್ತಿ!

First Published | Jun 27, 2023, 5:23 PM IST

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput)ಅವರ ಗೆಳತಿ ಮತ್ತು ನಟಿ ರಿಯಾ ಚಕ್ರವರ್ತಿ (Rhea Chakraborty) ಟಿವಿ ರಿಯಾಲಿಟಿ ಶೋ 'ಎಂಟಿವಿ ರೋಡೀಸ್' ನಲ್ಲಿ (MTV Rodies) ಗ್ಯಾಂಗ್ ಲೀಡರ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮದ ಸಂಚಿಕೆಯಲ್ಲಿ ಅವರ ಹೋರಾಟ ಮತ್ತು ಹಳೆಯ ದಿನಗಳ ಬಗ್ಗೆ ಮಾತನಾಡಿದರು. ರಿಯಾ ಅವರು ಟ್ರೋಲರ್‌ಗಳ ಮೇಲೆ ಕಿಡಿ ಕಾರಿದ್ದಾರೆ. 

ನಟಿ  ರಿಯಾ ಚಕ್ರವರ್ತಿ ಇತ್ತೀಚೆಗೆ ತನ್ನ 'ರೋಡೀಸ್' ಶೋ ಮೂಲಕ ಟ್ರೋಲರ್‌ಗಳಿಗೆ ಸೆಡ್ಡು ಹೊಡೆದಿದ್ದರು. ತನ್ನ ಜೀವನವನ್ನು ಇತರರು ನಿರ್ದೇಶಿಸಲು ಬಿಡುವುದಿಲ್ಲ ಎಂದು ರಿಯಾ ಹೇಳಿದ್ದಾರೆ.

ಈ ಸಮಯದಲ್ಲಿ, ರಿಯಾ ಅವರು ತಮ್ಮ ಜೀವನದಲ್ಲಿ ಕಷ್ಟದ ದಿನಗಳನ್ನು ಎದುರಿಸಿದ್ದಾಗೆ ಹೇಳಿಕೊಂಡಿದ್ದರು.  ರಿಯಾ ಚಕ್ರವರ್ತಿ ಟ್ರೋಲರ್‌ಗಳ ಮೇಲೆ ಕೋಪಗೊಂಡರು.

Tap to resize

ಜನರು ಅವರಿಗೆ ಅನೇಕ ಮಾತುಗಳನ್ನು  ಹೇಳಿದರು. ಆದರೆ ಅವರು ಈ ಲೇಬಲ್‌ಗಳನ್ನು ಎಂದಿಗೂ ಸ್ವೀಕರಿಸಲಿಲ್ಲ, ಏಕೆಂದರೆ ಇತರರು ಅವರೆ ಬಗ್ಗೆ ಏನು ಹೇಳುತ್ತಾರೆಂದು ಅವರು ಹೆದರುವುದಿಲ್ಲ ಎಂದಿದ್ದಾರೆ ರಿಯಾ.

ತನ್ನ ಜೀವನವನ್ನು ಇತರರು ನಿರ್ದೇಶಿಸಲು ಬಿಡುವುದಿಲ್ಲ ಎಂದು ರಿಯಾ ಚಕ್ರವರ್ತಿ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, 'ಹಲವು ಜನರು ಅನೇಕ ಮಾತುಗಳನ್ನು ಹೇಳುತ್ತಾರೆ. ಈ ಹಿಂದೆಯೂ ನನ್ನ ಮೇಲೆ ಅನೇಕ ಹೆಸರುಗಳನ್ನು ಅಂಟಿಸಲಾಗಿದೆ ಮತ್ತು ನನ್ನ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಆದರೆ ನಾನು ಆ ಲೇಬಲ್‌ಗಳನ್ನು ಸ್ವೀಕರಿಸುತ್ತೇನಾ? ಅವರಿಂದಾಗಿ ನಾನು ನನ್ನ ಜೀವನದಲ್ಲಿ ನಿಲ್ಲುತ್ತೇನಾ? ಇಲ್ಲ, ಅವರುನನಗೆ ಯಾರು? ಎಂದು ಹೇಳಿದ್ದಾರೆ.

ರಿಯಾ ಚಕ್ರವರ್ತಿ 2012 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ರಿಯಾ ಅವರು ಚಲನಚಿತ್ರಗಳಲ್ಲಿ ಅಂತಹ ವಿಶೇಷ ಗುರುತನ್ನು ಮಾಡಲಿಲ್ಲ, ಆದರೆ ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ನಂತರ ಅವರು ಬೆಳಕಿಗೆ ಬಂದರು. 
 

ವಾಸ್ತವವಾಗಿ, ಸುಶಾಂತ್ ಆತ್ಮಹತ್ಯೆಯ ನಂತರ, ಸುಶಾಂತ್ ಕುಟುಂಬವು ರಿಯಾ ಸುಶಾಂತ್‌ಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದೆ. ಇದರೊಂದಿಗೆ ರಿಯಾ ಸುಶಾಂತ್‌ಗೆ ಡ್ರಗ್ಸ್ ನೀಡುತ್ತಿದ್ದರು ಎಂದು ಹೇಳಿದ್ದಾರೆ. ಇದಾದ ಬಳಿಕ ರಿಯಾ ಕೂಡ ಡ್ರಗ್ಸ್ ಪ್ರಕರಣದಲ್ಲಿ ಹಲವು ದಿನ ಜೈಲು ಸೇರಿದ್ದರು. 

ಆದರೆ, ಈಗ ಅವರ ವೃತ್ತಿ ಜೀವನ ಮತ್ತೆ ಹಳಿಗೆ ಬಂದಿದೆ. ರಿಯಾ ಚಕ್ರವರ್ತಿ ಅವರು 'MTV ರೋಡೀಸ್'ಗೂ ಮೊದಲು 'ಚೆಹ್ರೆ' ಎಂಬ ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ರಿಯಾ ಜೊತೆಗೆ ಅಮಿತಾಬ್ ಬಚ್ಚನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Latest Videos

click me!