ದಶಕದ ಹಿಂದೆ ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಆಸಿನ್ ಕೂಡ ಒಬ್ಬರು. ಮಲಯಾಳಿ ಮೂಲದ ಈ ನಟಿ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದರು. ತನ್ನ ಸಿನಿ ಜೀವನ ಉತ್ತುಂಗದಲ್ಲಿರುವಾಗಲೇ ಆಸಿನ್ ದಾಂಪತ್ಯಕ್ಕೆ ಕಾಲಿಟ್ಟರು. ಉದ್ಯಮಿ ರಾಹುಲ್ ಶರ್ಮಾ ಜೊತೆ ಹಸೆಮಣೆ ಏರಿದರು.
ಆಸಿನ್ ಎನ್ನುವುದಕ್ಕಿಂತ ಗಜನಿ ನಟಿ ಎಂದರೆ ಎಲ್ಲರಿಗೂ ಥಟ್ ಅಂತ ನೆನಪಾಗುತ್ತೆ. 2005ರಲ್ಲಿ ರಿಲೀಸ್ ಆಗಿದ್ದ ಗಜನಿ ಚಿತ್ರದ ಮೂಲಕ ಅಸಿನ್ ಮತ್ತಷ್ಟು ಖ್ಯಾತಿಗಳಿಸಿದರು. ನಟ ಸೂರ್ಯ ಜೊತೆ ಕಾಣಿಸಿಕೊಂಡಿದ್ದ ಅಸಿನ್ ಅಭಿಮಾನಿಗಳ ಹೃದಯ ಗೆದ್ದರು. ಈ ಸಿನಿಮಾ ಬಳಿಕ ಆಸಿನ್ ಸೌತ್‌ನಿಂದ ಬಾಲಿವುಡ್‌ಗೆ ಜಿಗಿದರು.
ಹಿಂದಿಯಲ್ಲಿ ಒಂದಿಷ್ಟು ಸಿನಿಮಾ ಮಾಡುವಾಗಲೇ ಆಸಿನ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಇವರ ದಾಂಪತ್ಯ ವಿಚ್ಛೇದನದ ವರೆಗೂ ಬಂದಿದೆ ಎನ್ನುವ ಮಾತು ಕೇಳಿಬರುತ್ತಿದೆ. ಅಸಿನ್ ಮತ್ತು ರಾಹುಲ್ ನಡುವೆ ಯಾವುದೇ ಸರಿ ಇಲ್ಲ ಇಬ್ಬರೂ ದೂರ ಆಗಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಆಸಿನ್ ಮತ್ತು ರಾಹುಲ್ ಶರ್ಮಾ 2016ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ಇವರ ದಾಂಪತ್ಯಕ್ಕೆ ಒಬ್ಬಳು ಮಗಳು ಕೂಡ ಇದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ನಟಿ ಮಗಳ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಿದ್ದರು. ಆದರೀಗ ಸೋಶಿಯಲ್ ಮೀಡಿಯಾದಿಂದನೂ ದೂರ ಸರಿದಿದ್ದಾರೆ. ಪೋಸ್ಟ್ ಶೇರ್ ಮಾಡದೆ ಅನೇಕ ಸಮಯವಾಗಿದೆ.
ಅಂದಹಾಗೆ ಇಬ್ಬರು ದೂರ ಆಗಲು ಕಾರಣ ರಾಹುಲ್ ಶರ್ಮಾ ಅವರ ಅಫೇರ್ ಎನ್ನಲಾಗಿದೆ. ರಾಹುಲ್ ಶರ್ಮಾ ಮತ್ತೋರ್ವ ಯುವತಿ ಜೊತೆ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಅಸಿನ್‌ಗೆ ಗೊತ್ತಾಗಿ ಎಚ್ಚರಿಕೆ ಕೂಡ ನೀಡಿದ್ದರಂತೆ. ಆದರೂ ಕ್ಯಾರೆ ಎನ್ನದ ರಾಹುಲ್ ಆ ಯುವತಿ ಜೊತೆ ಹೆಚ್ಚು ಆಪ್ತರಾಗಿದ್ದಾರೆ ಎನ್ನಲಾಗಿದೆ.
ಮಗಳಿದ್ದರೂ ಮತ್ತೋರ್ವ ಜೊತೆ ಸಂಬಂಧ ಹೊಂದಿರುವ ರಾಹುಲ್ ಶರ್ಮಾರಿಂದ ದೂರ ಆಗಲು ಆಸಿನ್ ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಸದ್ಯದಲ್ಲೇ ಆಸಿನ್ ಮತ್ತು ರಾಹುಲ್ ಶರ್ಮಾ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಗುಸುಗುಸು ಕೇಳಿಬರುತ್ತಿದೆ.
ಕಳೆದ ಕೆಲವು ತಿಂಗಳಿನಿಂದ ಆಸಿನ್ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದೇ ಪೋಸ್ಟ್ ಶೇರ್ ಮಾಡಿಲ್ಲ. ಕೊನೆಯದಾಗಿ ಮಗಳ 5ನೇ ವರ್ಷದ ಹುಟ್ಟುಹಬ್ಬ ಆಚರಣೆ ಫೋಟೋಗಳನ್ನು ಹಂಚಿಕೊಂಡಿದ್ದರು. ಅಲ್ಲದೇ ಪತಿಯ ಜೊತೆಗಿರುವ ಯಾವುದೇ ಫೋಟೋಗಳು ಸಹ ಕಾಣಿಸುತ್ತಿಲ್ಲ. ಸದ್ಯ ವೈರಲ್ ಆಗಿರುವ ಸುದ್ದಿಯ ಬಗ್ಗೆ ಆಸಿನ್ ಅಥವಾ ರಾಹುಲ್ ಶರ್ಮಾ ಪ್ರತಿಕ್ರಿಯೆ ನೀಡುತ್ತಾರಾ? ಕಾದುನೋಡಬೇಕಿದೆ.
ಜಾಹೀರಾತಿನ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ನಟಿ ಆಸಿನ್ ಬಳಿಕ ಸಿನಿಮಾರಂಗದಲ್ಲಿ ಖ್ಯಾತಿ ಗಳಿಸಿದರು. ಸೂರ್ಯ ಜೊತೆ ನಟಿಸಿದ 'ಗಜನಿ' ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟಿತು. ಈ ಸಿನಿಮಾ ಬಾಲಿವುಡ್ ಎಂಟ್ರಿಗೆ ಅವಕಾಶ ಮಾಡಿಕೊಟ್ಟಿತು. ಹಿಂದಿಯಲ್ಲಿ ಆಮೀರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್‌ರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿ ಅಸಿನ್ ಸೈ ಎನಿಸಿಕೊಂಡರು.