ನವದೆಹಲಿ (ಜ. 08) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದಾಗಿನಿಂದ ನಟಿ ರಿಯಾ ಚಕ್ರವರ್ತಿ ಮಾಧ್ಯಮಗಳ ಗಮನದಿಂದ ದೂರ ಉಳಿದಿದ್ದಾರೆ. ಇದೀಗ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದು ಪೋಟೋ ವೈರಲ್ ಆಗುತ್ತಿದೆ. ರಿಯಾ ಇತ್ತೀಚೆಗೆ 'ರೋಡೀಸ್' ಖ್ಯಾತಿಯ ರಾಜೀವ್ ಲಕ್ಷ್ಮಣ್ ಅವರ ಮಗ ರಿದಮ್ ಅವರ ಮೊದಲ ಜನ್ಮದಿನ ಸಂಭ್ರಮಲ್ಲಿ ಭಾಗವಹಿಸಿದ್ದರು. ಈ ಪೋಟೋಗಳನ್ನು ರಾಜೀವ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು 'ನನ್ನ ಸ್ನೇಹಿತೆ' ಎಂದು ಕರೆದಿದ್ದಾರೆ. ಆತ್ಮೀಯವಾಗಿ ಕೆಲವು ಸಮಯ ಕಳೆದಿದ್ದು ಒಬ್ಬರನ್ನೊಬ್ಬರು ತಬ್ಬಿಕೊಂಡಿರುವ ಪೋಟೋ ನೆಟ್ಟಿಗರ ಕಮೆಂಟ್ ಗೂ ಸಿಕ್ಕಿದೆ. ಕಮೆಂಟ್ ಗಳ ಕಾಟ ತಾಳಲಾರದೆ ರಾಜೀವ್ ಪೋಟೋವನ್ನು ನಂತರ ಡಿಲೀಟ್ ಮಾಡಿದ್ದಾರೆ. ರಿಯಾ ಮುಖದಲ್ಲಿ ನಗು ಇದೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ರಿಯಾ ನಂತರ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ಮಾಧ್ಯಮಗಳಿಂದ ದೂರ ಉಳಿದಿದ್ದರು . Rhea recently attended the 'Roadies' fame Rajiv Lakshman’s son Rhythm's first birthday ರಿಯಾ ಚಕ್ರವರ್ತಿ ಪೋಟೋಕ್ಕೆ ಹರಿದು ಬಂದ ಕಮೆಂಟ್ಸ್.. ಪೋಟೋ ಡಿಲೀಟ್