ಮುಂಬೈ (ಜ. 05) ಬಾಲಿವುಡ್ ಬ್ಯೂಟಿ.. ರಣವೀರನ ರಾಣಿ ದೀಪಿಕಾ ಪಡುಕೋಣೆಗೆ ಹುಟ್ಟುಹಬ್ಬದ ಸಂಭ್ರಮ. ಸೆಲೆಬ್ರಿಟಿಗಳು ಅಭಿಮಾನಿಗಳು ಶುಭಾಶಯದ ಸುರಿಮಳೆಗೈದಿದ್ದಾರೆ. ಹೊಸ ವರ್ಷ ಹೊಸದಾಗಿ ಆರಂಭಿಸಿದ್ದ ದೀಪಿಕಾ ಸೋಶಿಯಲ್ ಮೀಡಿಯಾದಲ್ಲಿ ಹಳೆಯ ನೆನಪುಗಳನ್ನೆಲ್ಲ ತೆಗೆದು ಹಾಕಿದ್ದರು. ದೀಪಿಕಾ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಶುಭಾಶಯಗಳು ಹರಿದು ಬಂದಿವೆ. ಹೃತಿಕ್ ರೋಶನ್, ಆಲಿಯಾ ಭಟ್ ದೀಪಿಕಾಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇಬ್ಬರು ಸುತ್ತಾಡುತ್ತಿರುವ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕನ್ನಡದ ಐಶ್ವರ್ಯಾ ಚಿತ್ರದ ಮುಖೇನ ದೀಪಿಕಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಚಿತ್ರರಂಗಕ್ಕೂ ಬರುವ ಮುನ್ನ ಮಾಡೆಲಿಂಗ್ ಲೋಕದಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದರು. ಓಂ ಶಾಂತಿ ಓಂ ಚಿತ್ರ ದೀಪಿಕಾಗೆ ದೊಡ್ಡ ಬ್ರೇಕ್ ತಂದುಕೊಟ್ಟಿತು. ಚೆನ್ನೈ ಎಕ್ಸ್ ಪ್ರೆಸ್, ರಾಮ್ ಲೀಲಾ, ಬಾಜಿರಾವ್ ಮಸ್ತಾನಿಯಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡಿದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇದ್ದ ದೀಪಿಕಾ ಹೊಸ ವರ್ಷದ ಸಂದರ್ಭ ಹಳೆಯ ಪೋಸ್ಟ್ ಎಲ್ಲ ಡಿಲೀಟ್ ಮಾಡಿ ಸಣ್ಣ ಶಾಕ್ ನೀಡಿದ್ದರು. ನಮ್ಮ ಕಡೆಯಿಂದಲೂ ದೀಪಿಕಾಗೆ ಜನ್ಮದಿನದ ಶುಭಾಶಯ Birthday girl Deepika Padukone spotted on brunch date with Ranveer Singh See pictures ದೀಪಿಕಾ ಪಡುಕೋಣೆಗೆ ಜನ್ಮದಿನ ಸಂಭ್ರಮ.. ಹಾರೈಕೆಗಳ ಸುರಿಮಳೆ