ಸರ್ಸೆ ನಿನ್ನ ಸೆರಗ ಹಾಡು ಎಲ್ಲಾ ಪ್ಲಾಟ್‌ಫಾರ್ಮ್‌ನಿಂದ ತೆಗೆಯಿರಿ, ಕೇಂದ್ರ ಸರ್ಕಾರದ ಖಡಕ್ ವಾರ್ನಿಂಗ್

Published : Mar 17, 2026, 06:08 PM IST

ಸರ್ಸೆ ನಿನ್ನ ಸೆರಗ ಹಾಡು ಎಲ್ಲಾ ಪ್ಲಾಟ್‌ಫಾರ್ಮ್‌ನಿಂದ ತೆಗೆಯಿರಿ, ಕೇಂದ್ರ ಸರ್ಕಾರದ ಖಡಕ್ ವಾರ್ನಿಂಗ್, ಕನ್ನಡ ಚಿತ್ರರಂಗ ಮಾನ ದೇಶದಲ್ಲಿ ಹರಾಜಾಗಿದೆ. ಅತ್ಯಂತ ಕೀಳುಮಟ್ಟದ ಸಾಹಿತ್ಯ ಬರೆದ ನಿರ್ದೇಶಕ ಪ್ರೇಮ್ ಹಾಗೂ ಕೆಡಿ ಸಿನಿಮಾಗೆ ಭಾರಿ ಹೊಡೆತ ಬಿದ್ದಿದೆ.

PREV
15
ರಂಗ ಪ್ರವೇಶ ಮಾಡಿದ ಕೇಂದ್ರ ಸರ್ಕಾರ

ಕನ್ನಡ ಕೆಡಿ ಸಿನಿಮಾ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದ ಸರ್ಸೆ ನಿನ್ನ ಸೆರಗ ಹಾಡಿನಿಂದ ಕನ್ನಡ ಚಿತ್ರರಂಗದ ಮಾನ, ಘನತೆ ದೇಶದಲ್ಲಿ ಮೂರು ಕಾಸಿಗೆ ಹರಾಜಾಗಿದೆ. ಬಾಲಿವುಡ್‌ನ ನೋರಾ ಫತೇಹಿ, ಸಂಜಯ್ ದತ್ ಸೇರಿ ಸೆಲೆಬ್ರೆಟಿಗಳ ದಂಡನ್ನೇ ಕರೆಯಿಸಿ ಕುಣಿಸಿ ಇದೀಗ ತಲೆ ಮೇಲೆ ಕೈಹೊತ್ತುಕೊಂಡಿದೆ. ಸರ್ಸೆ ನಿನ್ನ ಸೆರಗ ಹಾಡಿನ ಸಾಹಿತ್ಯ ಹಾಗೂ ಡ್ಯಾನ್ಸ್ ಎರಡೂ ಅಶ್ಲೀಲವಾಗಿದೆ ಎಂದು ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಹಲವೆಡೆ ದೂರು ದಾಖಲಾಗಿದೆ. ಮಾನವ ಹಕ್ಕುಗಳ ಆಯೋಗ ನೋಟಿಸ್ ನೀಡಿದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ರಂಗ ಪ್ರವೇಶ ಮಾಡಿದೆ.

25
ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ವಾರ್ನಿಂಗ್

ಕನ್ನಡದಲ್ಲಿ ಸರ್ಸೆ ನಿನ್ನ ಸೆರಗ ಹಾಡಾಗಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದರೆ, ಹಿಂದಿಯಲ್ಲಿ ಸರ್ಕೆ ಚುನರ್ ಹಾಡಾಗಿ ಬಿಡುಗಡೆಯಾಗಿದೆ. ಹಲವು ಬಾಲಿವುಡ್ ದಿಗ್ಗಜರೂ ಆಕ್ರೋಶ ಹೊರಹಾಕಿದ್ದಾರೆ. ಇದೀಗ ಮಾಹಿತಿ ಮತ್ತು ಪ್ರಸಾರ ಇಲಾಖೆ ಖಡಕ್ ವಾರ್ನಿಂಗ್ ನೀಡಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಪ್ಲಾಟ್‌ಫಾರ್ಮ್‌ನಿಂದ ಸರ್ಸೆ ನಿನ್ನ ಸೆರಗು ಹಾಡನ್ನು ಡಿಲೀಟ್ ಮಾಡಲು ವಾರ್ನಿಂಗ್ ನೀಡಿದೆ ಎಂದು ಇಂಡಯಾ ಟುಡೆ ವರದಿ ಮಾಡಿದೆ.

35
ಕಠಿಣ ಕ್ರಮ ಕೈಗೊಳ್ಳಲು CBFCಗೆ ಸೂಚನೆ

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲ ಈ ಅಶ್ಲೀಲ ಹಾಡನ್ನು ಎಲ್ಲಾ ವೇದಿಕೆಗಳಿಂದ ತೆಗೆಯಲು ಸೂಚಿಸಿದ ಬೆನ್ನಲ್ಲೇ ಸೆಂಟ್ರಲ್ ಬೋರ್ಡ್ ಫಿಲ್ಮ್ ಸರ್ಟಿಫಿಕೇಟ್ (CBFC)ಮಂಡಳಿಗೆ ಖಡಕ್ ಆದೇಶ ನೀಡಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಸದ್ಯ ಕೇಳಿಬಂದಿರುವ ಆರೋಪಗಳು ಸಾಬೀತಾಗಿದ್ದರೆ, ಈ ಸಿನಿಮಾ ತಂಡದ ವಿರುದ್ದ ಕಠಿಣ ಕ್ರಮ ಹಾಗೂ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಹಾಡು ಡಿಲೀಟ್ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

45
ಸಿನಿ ವರ್ಕರ್ ಆಸೋಯೇಶನ್ ದೂರು

ಸರ್ಸೆ ನಿನ್ನ ಸೆರಗು ಹಾಡಿನ ವಿರುದ್ದ ದೆಹಲಿಯಲ್ಲಿ ಸಮಾಜಿಕ ಕಾರ್ಯಕರ್ತ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಸಿನಿ ವರ್ಕರ್ ಆಸೋಯೇಶನ್ ಕೂಡ ಸಿಬಿಎಫ್‌ಸಿ ಹಾಗೂ ಕೇಂದ್ರ ಪ್ರಸಾರ ಹಾಗೂ ಮಾಹಿತಿ ಸಚಿವಾಲಯಕ್ಕೆ ದೂರು ನೀಡಿದೆ. ಸಾರ್ವಜನಿಕ ಹಿತಾಸಕ್ತಿಯಿಂದ ಈ ವಿಚಾರ ಗಂಭೀರವಾಗಿ ಪರಿಗಣಿಸಲು ಸೂಚಿಸಿದೆ.

55
ಪ್ರೇಮ್ ಸಾಹಿತ್ಯಕ್ಕೆ ಬಾರಿ ಆಕ್ರೋಶ

ಪ್ರೇಮ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಇದೇ ಹಾಡನ್ನು ಹಿಂದಿಗೆ ಭಾಷಾಂತರ ಮಾಡಲಾಗಿದೆ. ಕನ್ನಡ ಹಾಗೂ ಹಿಂದಿ ಎರಡೂ ಭಾಷೆಯಲ್ಲಿ ಈ ಹಾಡು ಕೋಲಾಹಲ ಸೃಷ್ಟಿಸಿದೆ. ಅಶ್ಲೀಲ ಪದ ಬಳಕೆ, ಕೊಳಕು ಸಾಹಿತ್ಯ ಬರೆದಿರುವ ಪ್ರೇಮ್ ವಿರುದ್ದ ದೇಶಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಉತ್ತಮ ಸಿನಿಮಾ ನೀಡಿ ಜನ ಮೆಚ್ಚಿದ ನಿರ್ದೇಶಕ ಪ್ರೇಮ್ ಇದೀಗ ಒಂದು ಹಾಡಿನಿಂದ ತಮ್ಮ ಮಾನ ಮಾತ್ರವಲ್ಲ, ಕನ್ನಡ ಸಿನಿಮಾ ರಂಗ ಕಾಪಾಡಿಕೊಂಡಿದ್ದ ಘನತೆಯನ್ನೂ ಕಳೆದಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗುತ್ತಿದೆ.

ಪ್ರೇಮ್ ಸಾಹಿತ್ಯಕ್ಕೆ ಬಾರಿ ಆಕ್ರೋಶ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories