ಅವಾರ್ಡ್‌ ಶೋನಲ್ಲಿ ಪೋಸ್‌ ನೀಡಿದ ರೇಖಾ, ತಾಪ್ಸಿ ಪನ್ನು, ಅನನ್ಯಾ ಪಾಂಡೆ

First Published | Mar 14, 2022, 4:58 PM IST

ಮಾರ್ಚ್ 13ರ ಭಾನುವಾರ ರಾತ್ರಿ ಮುಂಬೈನಲ್ಲಿ ತಾರೆಯರ ದಂಡು ನೆರೆದಿತ್ತು. ಹಲೋ ಹಾಲ್ ಆಫ್ ಫೇಮ್ ಅವಾರ್ಡ್ಸ್ 2022 (Hello Hall Of Fames Award 2022) ರ ರೆಡ್ ಕಾರ್ಪೆಟ್‌ ಕಾರ್ಯಕ್ರಮಕ್ಕೆ ಅನೇಕ ದೊಡ್ಡ ಸ್ಟಾರ್ಸ್‌ ಆಗಮಿಸಿದರು. ಪ್ರಶಸ್ತಿ ಕಾರ್ಯಕ್ರಮದಲ್ಲಿ  ಎವರ್‌ಗ್ರೀನ್‌ ನಟಿ ರೇಖಾ (Rekha) ಎಲ್ಲರ ಗಮನ ಸೆಳೆದರು. ಅವರು ತಮ್ಮ ಗೋಲ್ಡನ್ ಸೀರೆಯಲ್ಲಿ ಎಂದಿನಂತೆ ಬೆರಗುಗೊಳಿಸಿದರು. ಇದರೊಂದಿಗೆ ತಾಪ್ಸಿ ಪನ್ನು (Taapsee Pannu), ಅನನ್ಯಾ ಪಾಂಡೆ (Ananya Pandey), ಅಕ್ಷಯ್ ಕುಮಾರ್ (Akshay Kumar) ಸೇರಿದಂತೆ ಹಲವು ತಾರೆಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. 

ರೇಖಾ ಎಲ್ಲಿಗೆ ಹೋದರೂ ತನ್ನ ಸೌಂದರ್ಯದಿಂದ ಎಲ್ಲರ ಗಮನ ಸೆಳೆದರು.  ಬನಾರಸಿ ಸೀರೆಯಲ್ಲಿ ಹಿರಿಯ ನಟಿ ತಮ್ಮ ಲುಕ್‌ನಿಂದ  ಹಲೋ ಹಾಲ್ ಆಫ್ ಫೇಮ್ ಪ್ರಶಸ್ತಿ 2022 ರಲ್ಲಿ, ರೇಖಾ ಇಡೀ ಸಭೆಯನ್ನು ದೋಚಿದ್ದಾರೆ. ಪ್ರಶಸ್ತಿ ಸಮಾರಂಭದಲ್ಲಿ, ರೇಖಾ ಚಿನ್ನದ ಬಣ್ಣದ ಸೀರೆಯನ್ನು ಧರಿಸಿದ್ದರು, ಅದರೊಂದಿಗೆ ನಟಿ ಮಲ್ಲಿಗೆ ಮುಡಿದ ಅವರು ಭಾರೀ ಮೇಕ್ಅಪ್ ಮತ್ತು ಕೆಂಪು ಲಿಪ್‌ಸ್ಟಿಕ್‌ನಲ್ಲಿ ಕಾಣಿಸಿಕೊಂಡರು.

ಹಲೋ ಹಾಲ್ ಆಫ್ ಫೇಮ್ ಅವಾರ್ಡ್ಸ್‌ನಲ್ಲಿ ತಾಪ್ಸಿ ಪನ್ನು ಕೆಂಪು ಉಡುಪಿನಲ್ಲಿ ಕಾಣಿಸಿಕೊಂಡರು. ಅವರು ಕೂದಲನ್ನು ಕಟ್ಟಿಕೊಂಡಿದ್ದ ತಾಪ್ಸಿ ಹೇವಿ ಮೇಕಪ್‌ನಲ್ಲಿ  ತುಂಬಾ ಸುಂದರವಾಗಿ ಕಾಣುತ್ತಿದ್ದರು. ಉಂಗುರ, ಇಯರ್‌ ರಿಂಗ್‌ ಜೊತೆ ತಮ್ಮ ಲುಕ್‌ ಪೂರ್ಣಗೊಳಿಸುತ್ತಿದ್ದರು.

Tap to resize

ಹಲೋ ಹಾಲ್ ಆಫ್ ಫೇಮ್ ಅವಾರ್ಡ್ಸ್ 2022 ಕಾರ್ಯಕ್ರಮಕ್ಕೆ ಅನನ್ಯಾ ಪಾಂಡೆ ಕೂಡ ಆಗಮಿಸಿದ್ದರು. 'ಘೆಹ್ರಾಯಿನ್' ಖ್ಯಾತಿಯ ನಟಿ ಈ ಇವೆಂಟ್‌ಗಾಗಿ ಕಪ್ಪು ನೆಟ್ ಉಡುಪನ್ನು ಆಯ್ಕೆ ಮಾಡಿದ್ದರು.  ಮುಂಭಾಗದಲ್ಲಿ ಶಾರ್ಟ್‌ ಆಗಿದ್ದ ಡ್ರೆಸ್‌  ಬಹಳ ಉದ್ದವಾಗಿತ್ತು ಅದರೊಂದಿಗೆ ಅನನ್ಯಾ  ನ್ಯೂಡ್ ಮೇಕಪ್ ಮಾಡಿಕೊಂಡಿದ್ದರು. 

ಈ ಪ್ರಶಸ್ತಿ ಸಮಾರಂಭದಲ್ಲಿ ಜಾವೇದ್ ಅಖ್ತರ್ ಕೂಡ ಭಾಗವಹಿಸಿದ್ದರು. ಎಂದಿನಂತೆ, ಈ ವಿಶೇಷ ಸಂದರ್ಭಕ್ಕಾಗಿ ಅವರು ಬ್ಲ್ಯಾಕ್‌ ಔಟ್‌ಫಿಟ್‌ ಅನ್ನು ಆರಿಸಿಕೊಂಡರು. ಅವರು ಕುರ್ತಾ ಪೈಜಾಮದೊಂದಿಗೆ ಕಪ್ಪು ಜಾಕೆಟ್ ಧರಿಸಿದ್ದರು.


ಅಕ್ಷಯ್ ಕುಮಾರ್ ರೆಡ್ ಕಾರ್ಪೆಟ್ ಮೇಲೆ ಇಳಿದ ತಕ್ಷಣ ಎಲ್ಲರ ಕಣ್ಣು ಅವರ ಮೇಲೆ ನೆಟ್ಟಿತ್ತು. ಎಂದಿನಂತೆ ಡ್ಯಾಶಿಂಗ್ ಆಗಿ ಕಾಣುತ್ತಿದ್ದರು. ಕ  ಅಕ್ಷಯ್ ಕುಮಾರ್ ಅಭಿನಯದ 'ಬಚ್ಚನ್ ಪಾಂಡೆ' ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸಂಜಯ್ ಕಪೂರ್ ತಮ್ಮ ಪತ್ನಿ ಮಹೀಪ್ ಕಪೂರ್ ಅವರೊಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಫೇಮಸ್‌ ದಂಪತಿಗಳು ಕಪ್ಪು ಬಟ್ಟೆಯನ್ನು ಆರಿಸಿಕೊಂಡ ಈ ಜೋಡಿ ತಂಬಾ ಕ್ಯೂಟ್‌ ಆಗಿ ಮುದ್ದಾಗಿ ಕಾಣುತ್ತಿದ್ದರು.

ನೀಲಂ ಕೊಠಾರಿ ಬಹಳ ದಿನಗಳ ನಂತರ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.  ಆ ಕಾಲದ ಪ್ರಸಿದ್ಧ ನಟಿ ಕಪ್ಪು ಗೌನ್‌ನಲ್ಲಿ ಸಖತ್‌ ಹಾಟ್‌ ಆಗಿ ಕಂಡುಬಂದರು.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇಶಾ ಕೊಪ್ಪಿಕರ್ ಕೂಡ ಭಾಗವಹಿಸಿದ್ದರು. ಈ ವಿಶೇಷ ಸಂದರ್ಭಕ್ಕಾಗಿ  ಗುಲಾಬಿ ಬಣ್ಣದ ಉಡುಪನ್ನು ಆರಿಸಿಕೊಂಡಿದ್ದ ಇಶಾ ಕೊಪ್ಪಿಕರ್ ಅವರು ಮನಮೋಹಕ ಲುಕ್‌ನಲ್ಲಿ ಕಾಣಿಸಿಕೊಂಡರು.
 

Latest Videos

click me!