ಬೆಂಗಳೂರು RCB ಮ್ಯಾಚ್‌; ಅನುಷ್ಕಾ ಶರ್ಮಾ ಧರಿಸಿದ್ದ ವಾಚ್‌ ಬೆಲೆಗೆ, VIP ಗ್ಯಾಲರಿಯ 53 ಟಿಕೆಟ್‌ ಬರುತ್ತೆ!

Published : Apr 26, 2026, 05:12 PM IST

Anushka Sharma Watch Price: ಇತ್ತೀಚೆಗೆ ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB vs GT ಪಂದ್ಯ ನಡೆಯಿತು. ಮದುವೆ ಬಳಿಕ ನಟನೆಯಿಂದ ದೂರ ಇರುವ ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿ ಕ್ರಿಕೆಟ್‌ ಮ್ಯಾಚ್‌ ನೋಡಲು ಬಂದೇ ಬರುತ್ತಾರೆ. ಈಗ ಇವರ ವಾಚ್‌ ಬೆಲೆ ಸಂಚಲನ ಮೂಡಿಸುತ್ತಿದೆ. 

PREV
15
ಸಿಂಪಲ್‌ ಉಡುಗೆಯಲ್ಲಿ ಮಿಂಚುತ್ತಾರೆ!

ಪತಿಯ ಆಟವನ್ನು ಹುರಿದುಂಬಿಸಲು ಬಂದ ಅನುಷ್ಕಾ ಶರ್ಮಾ ಈ ಬಾರಿ ಸರಳ ಬಿಳಿ ಬಣ್ಣದ ಟಾಪ್ ಹಾಗೂ ಪ್ಯಾಂಟ್‌ ಹಾಕಿಕೊಂಡು ಬಂದಿದ್ದರು. ಇತ್ತೀಚೆಗೆ ಅನುಷ್ಕಾ ಶರ್ಮಾ ಅವರು ಸಿಂಪಲ್‌ ಉಡುಗೆಯಲ್ಲಿ ಮಿಂಚುತ್ತಿದ್ದಾರೆ.

25
ಅನುಷ್ಕಾ ಶರ್ಮಾ-ವಿರಾಟ್‌ ಕೊಹ್ಲಿ ಲವ್

ಕ್ರಿಕೆಟ್‌ ಮ್ಯಾಚ್‌ ನೋಡಲು ಅನುಷ್ಕಾ ಶರ್ಮಾ ಬಂದಾಗಲೆಲ್ಲ ತಮ್ಮ ಫ್ಯಾಶನ್ ಆಯ್ಕೆಗಳ ಮೂಲಕ ಗಮನ ಸೆಳೆದಿದ್ದಾರೆ. ಪಂದ್ಯದ ಟೈಮ್‌ನಲ್ಲಿ ವಿರಾಟ್‌ ಕೊಹ್ಲಿ ಅವರು ಅನುಷ್ಕಾಗೆ ಫ್ಲೈಯಿಂಗ್‌ ಕಿಸ್‌ ನೀಡುತ್ತಾರೆ, ಅವರ ಕಣ್ಣುಗಳು ಸದಾ ಅನುಷ್ಕಾ ಶರ್ಮಾ ಅವರನ್ನು ಹುಡುಕುತ್ತಿರುತ್ತವೆ. ಇವರಿಬ್ಬರ ಲವ್‌ ಯಾವಾಗಲೂ ನೋಡುಗರ ಮನಸೆಳೆಯುತ್ತವೆ.

35
ಕಾಸ್ಟ್ಲೀ ವಾಚ್‌

ಏಪ್ರಿಲ್ 24 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಅನುಷ್ಕಾ ಶರ್ಮಾ ಮತ್ತೊಮ್ಮೆ ವೀಕ್ಷಕರ ಗಮನ ಸೆಳೆದರು. ಅನುಷ್ಕಾ ಶರ್ಮಾ ಧರಿಸಿದ್ದ ಐಷಾರಾಮಿ ಕಾರ್ಟಿಯರ್ (Cartier) ವಾಚ್, ನಿಜಕ್ಕೂ ಕ್ಲಾಸಿ ಲುಕ್‌ ನೀಡಿತ್ತು.

45
ಡ್ರೆಸ್‌ ಬೆಲೆ ಎಷ್ಟು?

ಅನುಷ್ಕಾರ ಬಿಳಿ ಬಣ್ಣದ ಟಾಪ್ ಪ್ಯಾರಿಸ್ ಮೂಲದ 'Sézane' ಬ್ರ್ಯಾಂಡ್‌ನ 'ರೊಡೊಲ್ಫೋ ಬ್ಲೌಸ್' (Rodolfo Blouse) ಆಗಿದೆ. ಸುಮಾರು 17,700 ರೂಪಾಯಿ ಬೆಲೆಯ ಟಾಪ್‌ನಲ್ಲಿ ಸುಂದರವಾದ ಎಂಬ್ರಾಯ್ಡರಿ, ವಿಭಿನ್ನವಾದ ವಿನ್ಯಾಸ ಇತ್ತು.

55
ಐಷಾರಾಮಿ ವಾಚ್ ಬೆಲೆ ಎಷ್ಟು?

ಅನುಷ್ಕಾ ಧರಿಸಿದ್ದ 'Panthère de Cartier' ವಾಚ್. ಹಳದಿ ಚಿನ್ನದ ಲೇಪನವಿರುವ ಈ ಅತ್ಯಾಧುನಿಕ ವಾಚ್‌ನ ಬೆಲೆ ಅಂದಾಜು 2,470,000 ರೂಪಾಯಿ (ಸುಮಾರು 24.7 ಲಕ್ಷ ರೂ.) ಎಂದು ವರದಿಯಾಗಿದೆ. RCB ವಿಐಪಿ ಗ್ಯಾಲರಿಯ ಒಂದು ಟಿಕೆಟ್‌ಗೆ 45000 ರೂಪಾಯಿ ಇದ್ದು, ಅನುಷ್ಕಾ ಶರ್ಮಾ ಧರಿಸಿದ್ದ ವಾಚ್‌ ಬೆಲೆಗೆ 53 ಟಿಕೆಟ್‌ ಬರುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories