ಟಾಕ್ಸಿಕ್‌ನ ಟೀಸರ್‌ಗೆ ರವಿ ಬಸ್ರೂರು ಹಿನ್ನೆಲೆ ಸಂಗೀತವಿತ್ತು. ಆದರೆ ಇಡೀ ಸಿನಿಮಾದ ಸಂಗೀತ ನಿರ್ದೇಶನವನ್ನು ಅನಿರುದ್ಧ್ ರವಿಚಂದರ್ ಮಾಡುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಅವರು ಈ ಸಿನಿಮಾದ ಭಾಗವಾಗಿಲ್ಲ.
ಯಶ್ ನಟನೆ, ನಿರ್ಮಾಣದ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾಕ್ಕೆ ರವಿ ಬಸ್ರೂರು ಅವರೇ ಸಂಗೀತ ನಿರ್ದೇಶನ ನೀಡಲಿರುವುದು ಬಹುತೇಕ ಖಚಿತವಾಗಿದೆ. ಯಶ್ ಹಾಗೂ ಅವರ ತಂಡ ರವಿ ಬಸ್ರೂರು ಅವರ ಸ್ಟುಡಿಯೋಗೆ ಭೇಟಿ ನೀಡಿದ್ದು ಈ ಸುದ್ದಿಗೆ ಪುಷ್ಠಿ ನೀಡಿದೆ.
26
ಅನಿರುದ್ಧ್ ರವಿಚಂದರ್ ಔಟ್
ಟಾಕ್ಸಿಕ್‌ನ ಟೀಸರ್‌ಗೆ ರವಿ ಬಸ್ರೂರು ಹಿನ್ನೆಲೆ ಸಂಗೀತವಿತ್ತು. ಆದರೆ ಇಡೀ ಸಿನಿಮಾದ ಸಂಗೀತ ನಿರ್ದೇಶನವನ್ನು ಅನಿರುದ್ಧ್ ರವಿಚಂದರ್ ಮಾಡುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಅವರು ಈ ಸಿನಿಮಾದ ಭಾಗವಾಗಿಲ್ಲ.
36
ಯಾವ ರೀತಿ ಮೋಡಿ ಮಾಡುತ್ತಾರೆ
ಯಶ್ ನಟನೆಯ ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಯಶಸ್ಸು ಕಾಣುವಲ್ಲಿ ರವಿ ಬಸ್ರೂರು ಅವರ ಸಂಗೀತದ ಕೊಡುಗೆ ತುಂಬಾ ದೊಡ್ಡದಿದೆ. ಅವರು ‘ಟಾಕ್ಸಿಕ್’ ಚಿತ್ರದಲ್ಲಿ ಯಾವ ರೀತಿ ಮೋಡಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ‘ಟಾಕ್ಸಿಕ್’ ನಿರ್ಮಾಣ ಮಾಡುತ್ತಿದೆ. ಯಶ್ ಅವರ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್’ ಕೂಡ ಇದಕ್ಕೆ ಕೈ ಜೋಡಿಸಿದೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ ಇದ್ದಾರೆ.
56
ಮಾರ್ಚ್ 19ರಂದು ಬಿಡುಗಡೆ
‘ಟಾಕ್ಸಿಕ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ನಡೆಯುತ್ತಿದ್ದು, ಮಾರ್ಚ್ 19ರಂದು ಸಿನಿಮಾ ಬಿಡುಗಡೆ ಕಾಣಲಿದೆ. ಇನ್ನು ‘ಟಾಕ್ಸಿಕ್’ ಸಿನಿಮಾ ಕನ್ನಡದ ಜೊತೆಗೆ ಇಂಗ್ಲಿಷ್ನಲ್ಲೂ ರಿಲೀಸ್ ಆಗುತ್ತಿದೆ.
66
ಹಾಲಿವುಡ್ ಸ್ಟುಡಿಯೋಗಳೊಂದಿಗೆ ಕೆಲಸ
ಅಲ್ಲದೆ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಂತಹ ಇತರ ಭಾಷೆಗಳಿಗೂ ಡಬ್ ಮಾಡಲಾಗುವುದು. ಇದರೊಂದಿಗೆ ರವಿ ಬಸ್ರೂರ್ ಪ್ರಮುಖ ಹಾಲಿವುಡ್ ಸ್ಟುಡಿಯೋಗಳೊಂದಿಗೂ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.