ತಾಯಿ ರವೀನಾ ಟಂಡನ್ ಜೊತೆ 12 ಜ್ಯೋತಿರ್ಲಿಂಗಗಳ ದರ್ಶನ ಅಭಿಯಾನದಲ್ಲಿ ಮಗಳು ರಾಶಾ ಥಡಾನಿ

First Published | Jan 22, 2024, 11:59 AM IST

ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿರುವ ರಾಶಾ, ತನ್ನ ತಾಯಿ ರವೀನಾ ಟಂಡನ್‌ರೊಂದಿಗೆ  12 ಜ್ಯೋತಿರ್ಲಿಂಗ ದೇವಾಲಯಗಳ ದರ್ಶನ ಮಾಡುತ್ತಿದ್ದಾರೆ.

Raveena Tandon And Daughter Rasha Offer Prayers At Somnath's Jyotirling Temple

ರವೀನಾ ಟಂಡನ್ ಮತ್ತು ಮಗಳು ರಾಶಾ ಥಡಾನಿ ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ರವೀನಾ ಮತ್ತು ರಾಶಾ 12 ಪವಿತ್ರ ಜ್ಯೋತಿರ್ಲಿಂಗಗಳ ದರ್ಶನ ಮಾಡಲು ಪಣ ತೊಟ್ಟಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

Tap to resize

ಶೀಘ್ರದಲ್ಲೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿರುವ ರಾಶಾ, ಅದಕ್ಕೂ ಮುನ್ನ ತಾಯಿಯೊಂದಿಗೆ ದೇವಾಲಯಗಳ ಭೇಟಿಯಲ್ಲಿ ತೊಡಗಿ ಅದರ ಫೋಟೋಗಳನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರವೀನಾ ಮತ್ತು ರಾಶಾ ಅವರು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ವಿಗ್ರಹಗಳ ಮುಂದೆ ಪೋಸ್ ಕೊಡುವುದನ್ನು ಕಾಣಬಹುದು. ದೇವಸ್ಥಾನದ ಹಿನ್ನೆಲೆಯಲ್ಲಿ ತಾಯಿ ಮಗಳು ಫೋಟೋ ಹಂಚಿಕೊಂಡಿದ್ದಾರೆ. 

ಒಂದು ಫೋಟೋದಲ್ಲಿ ರಾಶಾಗೆ ಅರ್ಚಕರು ತಿಲಕ ಇಡುತ್ತಿರುವುದನ್ನು ಕಾಣಬಹುದು. ಈ ಚಿತ್ರಗಳನ್ನು ಹಂಚಿಕೊಂಡ ರಾಶಾ, 'ಹರ್ ಹರ್ ಮಹಾದೇವ್' ಎಂದು ಬರೆದಿದ್ದಾರೆ.

ರವೀನಾ ಮತ್ತು ರಾಶಾ ದೇವಸ್ಥಾನದಲ್ಲಿ ಭಜನಾ ಕೀರ್ತನೆಯಲ್ಲಿ ಪಾಲ್ಗೊಂಡಿದ್ದಾರೆ. ರವೀನಾ ಮತ್ತು ರಾಶಾ ಪ್ರಾರ್ಥನೆ ಸಲ್ಲಿಸಿದ ನಂತರ, ದೇವಾಲಯದ ಅರ್ಚಕರು ನಟಿಗೆ ಶಾಲು ಮತ್ತು ವಿಗ್ರಹ ನೀಡಿದ್ದಾರೆ.

ಕಳೆದ ತಿಂಗಳು ರವೀನಾ ಟಂಡನ್ ತಮಿಳುನಾಡಿನ ರಾಮೇಶ್ವರಂ ದೇವಸ್ಥಾನದಲ್ಲಿ ತನ್ನ ಮಗಳೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿರುವ ಫೋಟೋ ಹರಿಬಿಟ್ಟಿದ್ದರು. ರಾಮಸೇತು, ರಾಮೇಶ್ವರಂ, ಧನುಷ್ಕೋಡಿ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಪೋಸ್ಟ್ ಅನ್ನು ಕೊನೆಗೊಳಿಸಿದ್ದರು.

ಇದಕ್ಕೂ ಮುನ್ನ, ರಾಶಾ ಥಡಾನಿ ತಮ್ಮ ಇತ್ತೀಚಿನ ಕೇದಾರನಾಥ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದರು. ಕೇದಾರನಾಥ ದೇವಸ್ಥಾನದಲ್ಲಿ ತಾಯಿ-ಮಗಳು ಆಶೀರ್ವಾದ ಕೋರಿದರು.

ಏತನ್ಮಧ್ಯೆ, ಕನ್ನಡದ ಕೆಜಿಎಫ್‌ನಲ್ಲಿ ಪವರ್‌ಫುಲ್ ಪಾತ್ರವನ್ನು ನಿಭಾಯಿಸಿದ್ದ ರವೀನಾ ಟಂಡನ್ ಡಿಸ್ನಿ + ಹಾಟ್‌ಸ್ಟಾರ್ ಸರಣಿ 'ಕರ್ಮ ಕಾಲಿಂಗ್'‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ರಾಶಾ ಮೊದಲ ಚಿತ್ರಕ್ಕೆ ಇನ್ನೂ ಹೆಸರಿಡಬೇಕಿದ್ದು, ಅವರು ಅಜಯ್ ದೇವಗನ್ ಅಳಿಯ ಅಮನ್ ದೇವಗನ್ ಜೊತೆ ಅಭಿಷೇಕ್ ಕಪೂರ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. 

Latest Videos

click me!