ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯು ಭಾರತೀಯ ಕಲಾವಿದರು ತಮ್ಮ ವೃತ್ತಿಜೀವನದಲ್ಲಿ ಪಡೆಯಬಹುದಾದ ಅತ್ಯಂತ ಗೌರವಾನ್ವಿತ ಗೌರವವಾಗಿದೆ. ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು 1967ರಲ್ಲಿ ಆರಂಭಿಸಲಾಯಿತು. ನರ್ಗೀಸ್, ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಪಡೆದರು
ಆಲಿಯಾ ಭಟ್ ಮತ್ತು ಕೃತಿ ಸನೋನ್ ಇತ್ತೀಚಿನ ಪುರಸ್ಕೃತರಾಗಿದ್ದು, ಅವರು ಕ್ರಮವಾಗಿ ಗಂಗೂಬಾಯಿ ಕಥಿವಾಡಿ ಮತ್ತು ಮಿಮಿಯಲ್ಲಿ ತಮ್ಮ ಅದ್ಭುತ ಅಭಿನಯಕ್ಕಾಗಿ ಗೌರವವನ್ನು ಗೆದ್ದಿದ್ದಾರೆ. ಆದರೆ, ಬಾಲಿವುಡ್‌ನ ಈ ನಟಿ ಅತ್ಯುತ್ತಮ ನಟಿಗಾಗಿ ಅತಿ ಹೆಚ್ಚು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಹೀಗೆ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿರೋದು ಆಲಿಯಾ ಭಟ್, ಕೃತಿ ಸನೋನ್ ಅಲ್ಲ. ಬದಲಿಗೆ ಹಿರಿಯ ನಟಿ ಶಬಾನಾ ಅಜ್ಮಿ. ಶಬಾನಾ, ತಮ್ಮ ಅಭಿನಯಕ್ಕಾಗಿ ಇಲ್ಲಿಯವರೆಗೆ ವೃತ್ತಿಜೀವನದಲ್ಲಿ ಐದು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
1974ರಲ್ಲಿ ಬಿಡುಗಡೆಯಾದ ತನ್ನ ಚೊಚ್ಚಲ ಚಿತ್ರವಾದ ಶ್ಯಾಮ್ ಬೆನಗಲ್ ಅವರ 'ಅಂಕುರ್' ಚಿತ್ರಕ್ಕಾಗಿ ಆಕೆಗೆ ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಯಿತು. ಆ ಬಳಿಕ ನಟಿ ಸತತ ಮೂರು ವರ್ಷಗಳಲ್ಲಿ ಮೂರು ಬಾರಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಿದರು.
ಮಹೇಶ್ ಭಟ್ ಅವರ ಅರ್ಥ್ (1982), ಮೃಣಾಲ್ ಸೇನ್ ಅವರ ಕಂಧರ್ (1983), ಮತ್ತು ಗೌತಮ್ ಘೋಸ್ ಅವರ ಪಾರ್ (1984) ಗಾಗಿ ಶಬಾನಾ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು.
ವಿನಯ್ ಶುಕ್ಲಾ ಅವರ ಗಾಡ್ ಮದರ್, 1998 ರಲ್ಲಿ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ನಂತರ 1999 ರಲ್ಲಿ ಬಿಡುಗಡೆಯಾದ ಆಕೆಯ ಕೊನೆಯ ಚಿತ್ರವಾಗಿದೆ.
ಆ ನಂತರ, ಕಂಗನಾ ರಣಾವತ್ ಸಹ ಮೂರು ಬಾರಿ ನ್ಯಾಷನಲ್ ಅವಾರ್ಡ್‌ನ್ನು ನೀಡಿದ್ದಾರೆ. ದಕ್ಷಿಣ ಭಾರತದ ನಟಿ ಶಾರದಾ, ತಬು, ಸ್ಮಿತಾ ಪಾಟೀಲ್, ಶೋಭನಾ ಮತ್ತು ಅರ್ಚನಾ ಸಹ ತಮ್ಮ ವೃತ್ತಿಜೀವನದಲ್ಲಿ ಎರಡು ಬಾರಿ ಗೌರವಕ್ಕೆ ಪಾತ್ರರಾಗಿದ್ದಾರೆ. ವಿದ್ಯಾ ಬಾಲನ್ ಮತ್ತು ಡಿಂಪಲ್ ಕಪಾಡಿಯಾ ಅತ್ಯುತ್ತಮ ನಟಿಗಾಗಿ ಕೇವಲ ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಶಬಾನಾ ಅಜ್ಮಿ, ಕರಣ್ ಜೋಹರ್ ಅವರ ರೋಮ್ಯಾಂಟಿಕ್ ಸಿನಿಮಾ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಮತ್ತು 'ಘೂಮರ್'ನಲ್ಲಿ ಕಾಣಿಸಿಕೊಂಡರು. 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'ಯಲ್ಲಿ ಧರ್ಮೇಂದ್ರ ಜೊತೆಗಿನ ಆಕೆಯ ಕಿಸ್ಸಿಂಗ್ ಸೀನ್ ವಿವಾದಕ್ಕೆ ಕಾರಣವಾಗಿತ್ತು.