ಯೆಲ್ಲೋ ಸೀರೆಯಲ್ಲಿ ಧಡ್ಕನ್‌ ಚೆಲುವೆ ಮಾಧುರಿ ದೀಕ್ಷಿತ್: ನಿಮ್ಮ ರಿಯಲ್ ಏಜ್ ಗೆಸ್ ಮಾಡೋದು ಭಾರೀ ಕಷ್ಟ ಎಂದ ಫ್ಯಾನ್ಸ್‌!

Published : Jan 21, 2024, 12:03 PM IST

ಬಾಲಿವುಡ್ ಧಕ್‌ ಧಕ್‌ ಚೆಲುವೆ ಮಾಧುರಿ ದೀಕ್ಷಿತ್ ನೇನೆ ಸೊಬಗಿನ ಪ್ರತಿರೂಪ. ನಟಿ ತನ್ನ ಭಾರತೀಯ ಉಡುಗೆಯನ್ನು ಪ್ರೀತಿಸುತ್ತಾರೆ. ಅವರ ಅಭಿಮಾನಿಗಳಿಗೂ ಅದು ಸಾಕಷ್ಟು ಇಷ್ಟ. ನಟಿಯ ಲೇಟೆಸ್ಟ್ ಸೀರೆ ಲುಕ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.   

PREV
16
ಯೆಲ್ಲೋ ಸೀರೆಯಲ್ಲಿ ಧಡ್ಕನ್‌ ಚೆಲುವೆ ಮಾಧುರಿ ದೀಕ್ಷಿತ್: ನಿಮ್ಮ ರಿಯಲ್ ಏಜ್ ಗೆಸ್ ಮಾಡೋದು ಭಾರೀ ಕಷ್ಟ ಎಂದ ಫ್ಯಾನ್ಸ್‌!

ಬಾಲಿವುಡ್​ನ ಕ್ಯೂಟ್ ನಟಿ ಮಾಧುರಿ ದೀಕ್ಷಿತ್ ಅವರು ಸುಂದರವಾದ ಸೀರೆ ಉಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಬಾಲಿವುಡ್ ಬ್ಯೂಟಿ ಮಾಧುರಿ ದೀಕ್ಷಿತ್ ನೆನೆ ಅವರು ಹಳದಿ ಬಣ್ಣದ ಗ್ರ್ಯಾಂಡ್ ಪಾರ್ಟಿವೇರ್ ಸೀರೆಯುಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

26

ಮಾಧುರಿ ದೀಕ್ಷಿತ್ ಫೋಟೋ ನೋಡಿದ ನೆಟ್ಟಿಗರು, ನಟಿಯ ವಯಸ್ಸೆಷ್ಟು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನಟಿಯ ಫೋಟೋ ನೋಡಿ ರಿಯಲ್ ಏಜ್ ಗೆಸ್ ಮಾಡೋದು ಭಾರೀ ಕಷ್ಟ ಎಂದು ಕೆಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

36

ಅಂದಹಾಗೆ ಮಾಧುರಿ ದೀಕ್ಷಿತ್ ಅವರ ವಯಸ್ಸು 56. ಅಂದರೆ 60ರ ಸಮೀಪದಲ್ಲಿದ್ದಾರೆ ಬಾಲಿವುಡ್​ನ ಮೋಸ್ಟ್ ಬ್ಯೂಟಿಫುಲ್ ನಟಿ. ಅವರ ಮುಖ ನೋಡಿದರೆ ಇದನ್ನು ಖಂಡಿತಾ ನಂಬಲಾಗದು.

46

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರು ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್​ನಲ್ಲಿ ಅಷ್ಟಾಗಿ ಆ್ಯಕ್ಟಿವ್ ಆಗಿಲ್ಲ. ಸಿನಿಮಾಗಳಿಂದ ಸ್ವಲ್ಪ ದೂರ ಆಗಿರುವ ನಟಿ ಸದ್ಯ ಒಟಿಟಿ ಕಡೆಗೂ ಗಮನ ಹರಿಸಿದ್ದಾರೆ. 

56

ಮಾಧುರಿ ದೀಕ್ಷಿತ್ ಅವರು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಭಾಗವಹಿಸುತ್ತಾ ಕೆರಿಯರ್​ನಲ್ಲಿ ಸದ್ಯಕ್ಕೆ ಬ್ಯುಸಿಯಾಗಿದ್ದಾರೆ. ಅದರ ಜೊತೆ ಜೊತೆಗೇ ನಟಿ ಸೋಷಿಯಲ್ ಮಿಡಿಯಾದಲ್ಲಿಯೂ ಸಖತ್ ಆ್ಯಕ್ಟಿವ್ ಆಗಿದ್ದಾರೆ.

66

ನಟಿ  ಮಾಧುರಿ ಸುಂದರವಾದ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಲೇ ಇರುತ್ತಾರೆ. ಸದ್ಯ ಅವರ ಲೇಟೆಸ್ಟ್ ಸೀರೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Read more Photos on
click me!

Recommended Stories