ಹರಿದ ಪ್ಯಾಂಟ್ ತೊಟ್ಟು ಬಿಂದಾಸ್ ಪೋಸ್ ಕೊಟ್ಟ ರಶ್ಮಿಕಾ... Hotness overloaded ಅಂತಿದ್ದಾರೆ ಫ್ಯಾನ್ಸ್

First Published | Sep 23, 2024, 6:13 PM IST

ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಹೊಸ ಫೋಟೊ ಶೂಟ್ ಇಂಟರ್ನೆಟ್ಟಲ್ಲಿ ಕಿಡಿ ಹಚ್ಚಿದೆ. ರಶ್ಮಿಕಾ ಬಿಂದಾಸ್ ಪೋಸ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. 
 

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ )Rashmika Mandanna) ತಮ್ಮ ಸ್ಟೈಲ್ ಫ್ಯಾಷನ್ ನಿಂದಾನೆ ಹೆಚ್ಚು ಗಮನ ಸೆಳೆಯುವ ನಟಿ. ಒಂದೊಂದು ಬಾರಿ ಒಂದೊಂದು ರೀತಿಯ ಫ್ಯಾಷನ್ ಟ್ರೆಂಡ್ ಗಳಲ್ಲಿ ಕಾಣಿಸಿಕೊಳ್ಳುವ ರಶ್ಮಿಕಾರನ್ನು ಟ್ರೆಂಡ್ ಸೆಟ್ಟರ್ ಅಂತಾನೂ ಹೇಳಬಹುದು. ಈ ಬಾರಿಯೂ ನಟಿ ಸಖತ್ ಹಾಟ್ ಆಗಿರುವ ಸ್ಟೈಲಿಶ್ ಡ್ರೆಸ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಇಂಟರ್ನೆಟ್ಟಲ್ಲಿ ಕಿಚ್ಚು ಹಚ್ಚಿದ್ದಾರೆ. 
 

ಇತ್ತೀಚೆಗೆ ರಶ್ಮಿಕಾ ಮಿಲನ್ ಫ್ಯಾಷನ್ ವೀಕ್ ಮತ್ತು Versace show ನಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಧರಿಸಿದ್ದ ಡ್ರೆಸ್ ಫ್ಯಾಷನ್ ಈವೆಂಟ್ ನಲ್ಲಿ ಭಾರಿ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಈ ಫೋಟೊಗಳನ್ನು ಶೇರ್ ಮಾಡಿದ್ದು, ಕಾಮೆಂಟ್ ಸೆಕ್ಷನ್ ತುಂಬಾ ಫೈರ್ ಇಮೋಜಿ ತುಂಬಿದೆ. 
 

Tap to resize

ಡೀಪ್ ಸ್ಕೂಪ್ ನೆಕ್ ಲೈನ್ ಹೊಂದಿರುವ ಕಪ್ಪು ಬಣ್ಣದ ಸ್ಲೀವ್ ಲೆಸ್ ಕ್ರಾಸೆಟ್ ಕ್ರಾಪ್ ಟಾಪ್ (croset top) ಧರಿಸಿರುವ ರಶ್ಮಿಕಾ, ಅದರ ಜೊತೆಗೆ ಟೋರ್ನ್ ಜೀನ್ಸ್ ಧರಿಸಿದ್ದಾರೆ. ಜೊತೆಗೆ ಕಪ್ಪು ಬಣ್ಣದ ಬ್ಲೇಜರ್ ಕೈ ಮೇಲೆ ಹಾಕಿದ್ದಾರೆ. ಬಾಡಿ ಹಗ್ಗಿಂಗ್ ಟಾಪ್ ಜೊತೆ, ಹರಿದ ಜೀನ್ಸ್ ನಲ್ಲಿ ರಶ್ಮಿಕಾ ಮಂದಣ್ಣ ಎಷ್ಟೊಂದು ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ ಅಂದ್ರೆ, ಜನ ಹಾಟ್ನೆಸ್ ಓವರ್ ಲೋಡೆಡ್, ಬೋಲ್ಡ್ ನೆಸ್ ತುಂಬಿ ತುಳುಕುತ್ತಿದೆ, ರೌಡಿ ಗರ್ಲ್, ಬಾಸ್ ಲೇಡಿ ಎನ್ನುತ್ತಿದ್ದಾರೆ. 
 

ಯಾವುದೇ ಜ್ಯುವೆಲ್ಲರಿ ಧರಿಸದೇ ಕೇವಲ ಎರಡು ಪುಟ್ಟದಾದ ಇಯರಿಂಗ್ಸ್ ಧರಿಸಿರುವ ರಶ್ಮಿಕಾ, ತಮ್ಮ ಡ್ರೆಸ್ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಇದರ ಜೊತೆಗೆ ಪುಟ್ಟದಾದ ಕೆಂಪು ಬಣ್ಣದ ಬ್ಯಾಗ್ ಕ್ಯಾರಿ ಮಾಡಿದ್ದು, ರಶ್ಮಿಕಾ ಬಿಂದಾಸ್ ಪೋಸ್, ಲುಕ್, ನಗು, ಸ್ಟೈಲ್ ಹುಡುಗರ ಹೃದಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. 
 

ಕಿರಿಕ್ ಪಾರ್ಟಿ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ನಂತರ ತೆಲುಗು ಸಿನಿಮಾಗೆ ಶಿಫ್ಟ್ ಆಗಿ ಕನ್ನಡ ಚಿತ್ರರಂಗದಿಂದ ತುಂಬಾನೆ ದೂರ ಉಳಿದಿದ್ದಾರೆ. ತೆಲುಗಿನಲ್ಲಿ ಒಂದಾದ ಮೇಲೆ ಒಂದರಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ರಶ್ಮಿಕಾ ಮಂದಣ್ಣ, ಬಾಲಿವುಡ್ ಗೂ ಹಾರಿ, ಅಲ್ಲಿಯೂ ಅನಿಮಲ್ ನಂತಹ ಸೂಪರ್ ಹಿಟ್ ಸಿನಿಮಾ ನೀಡಿ ಸೈ ಎನಿಸಿಕೊಂಡಿದ್ದಾರೆ. 
 

ಸದ್ಯಕ್ಕೆ ರಶ್ಮಿಕಾ ಮಂದಣ್ಣ ಕೈಯಲ್ಲಿ ಆರು ಸಿನಿಮಾಗಳಿದ್ದು, ಪುಷ್ಪಾ 2 (Pushpa 2) ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ. ಇದಲ್ಲದೇ ರೈನ್ ಬೋ, ದ ಗರ್ಲ್ ಫ್ರೆಂಡ್, ಚವ್ವಾ,  ಸಿಕಂದರ್, ಕುಬೇರಾ ಸಿನಿಮಾಗಳಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ರಶ್ಮಿಕಾ ಫೋರ್ಬ್ಸ್ ಇಂಡಿಯಾ ಅಂಡರ್ 30 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಸದ್ಯಕ್ಕಂತೂ ಅಭಿಮಾನಿಗಳು ಕ್ರಶ್ಮಿಕಾ ಸಿನಿಮಾಗಾಗಿ ಕಾಯುತ್ತಿದ್ದಾರೆ. 
 

Latest Videos

click me!