ಗಿನ್ನೆಸ್ ಬುಕ್ ಪ್ರತಿನಿಧಿಗಳು ಹಾಗೂ ಬಾಲಿವುಡ್ ನಟ ಅಮೀರ್ ಖಾನ್ ಅವರು ಚಿರಂಜೀವಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕರಾದ ರಾಘವೇಂದ್ರರಾವ್, ಬಿ.ಗೋಪಾಲ್, ಕೋದಂಡರಾಮಿ ರೆಡ್ಡಿ, ಗುಣಶೇಖರ್, ಬಾಬಿ, ನಿರ್ಮಾಪಕರಾದ ಅಲ್ಲು ಅರವಿಂದ್, ಅಶ್ವನಿದತ್, ಶ್ಯಾಮಪ್ರಸಾದ್ ರೆಡ್ಡಿ, ಸುರೇಶ್ ಬಾಬು, ಜೆಮಿನಿ ಕಿರಣ್, ಮೈತ್ರಿ ರವಿಶಂಕರ್, ತಮ್ಮಾರೆಡ್ಡಿ ಭಾರದ್ವಾಜ, ಕೆ.ಎಸ್.ರಾಮರಾವ್ ಮುಂತಾದವರು ಭಾಗವಹಿಸಿದ್ದರು.