ಇವ್ರೇ ನೋಡಿ ಅತಿ ಹೆಚ್ಚು ಸ್ಯಾಲರಿ ಪಡೆಯುತ್ತಿರೋ ಬಾಲಿವುಡ್ ಸೆಲೆಬ್ರಿಟಿಗಳ ಬಾಡಿಗಾರ್ಡ್ಸ್

First Published | Sep 23, 2024, 5:20 PM IST

ಬಾಲಿವುಡ್ ಸ್ಟಾರ್ಸ್ ಅಂದ್ರೆನೆ ಕೋಟಿ ಕೋಟೆ ಪದೆದುಕೊಳ್ಳುವ ನಟರು. ಇವರಿಗೆ ಕೋಟಿ ಸಿಗೋದಾದ್ರೆ, ಇವರಿಗೆ ಹೋದ, ಬಂದ ಜಾಗದಲ್ಲೆಲ್ಲಾ ರಕ್ಷಣೆ ಕೊಡೋದಕ್ಕೆ ಸದಾ ಸ್ಟಾರ್ಸ್ ಜೊತೆಯಾಗಿರುವ ಬಾಡಿಗಾರ್ಡ್’ಗಳ ಸ್ಯಾಲರಿ ಕೂಡ ದುಬಾರಿನೇ ಇರಬೇಕು ಅಲ್ವಾ? ಇಲ್ಲಿವೆ ನೋಡಿ ಟಾಪ್ 10 ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ಬಾಲಿವುಡ್ ಸೆಲೆಬ್ರಿಟಿಗಳ ಬಾಡಿಗಾರ್ಡ್. 
 

ಆಲಿಯಾ ಭಟ್ : ಆಲಿಯಾ ಭಟ್ (Alia Bhatt) ಬಾಡಿಗಾರ್ಡ್ ಹೆಸರು ಸುನೀಲ್ ತಲೇಕರ್. ಇವರ ವಾರ್ಷಿಕ ಆದಾಯ 50 ಲಕ್ಷ ರೂಪಾಯಿ. ಇವರು ಬಾಲ್ಯದಿಂದಲೂ ಅಲಿಯಾ ಭಟ್ ಪರಿವಾರದ ಬಾಡಿಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
 

ದೀಪಿಕಾ ಪಡುಕೋಣೆ : ಬಾಲಿವುಡ್ ದಿವಾ ದೀಪಿಕಾ ಪಡುಕೋಣೆ (Deepika Padukone) ಬಾಡಿಗಾರ್ಡ್ ಜಲಾಲುದ್ದೀನ್ ಶೇಕ್. ಇವರು ವರ್ಷಕ್ಕೆ 80 ಲಕ್ಷ ರೂಪಾಯಿ ಪಡೆಯುತ್ತಾರೆ. 
 

Tap to resize

ಶ್ರದ್ಧಾ ಕಪೂರ್ : ಸ್ತ್ರೀ 2 ಯಶಸ್ಸಿನ ಗುಂಗಿನಲ್ಲಿರುವ ಶ್ರದ್ಧಾ ಕಪೂರ್ (Shraddha Kapoor) ಬಾಡಿಗಾರ್ಡ್ ಅತುಲ್ ಕಾಂಬ್ಲೇ ಇವರ ವಾರ್ಷಿಕ ಆದಾಯ 95 ಲಕ್ಷ ರೂಪಾಯಿ. 
 

ಕತ್ರೀನಾ ಕೈಫ್ : ನಟಿ ಕತ್ರೀನಾ ಕೈಫ್ (Katrina Kaif) ಬಾಡಿಗಾರ್ಡ್ ದೀಪಕ್ ಸಿಂಗ್. ಇವರು ವರ್ಷಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. 
 

ಅನುಷ್ಕಾ ಶರ್ಮಾ : ಸದ್ಯ ಎರಡು ಮಕ್ಕಳ ತಾಯಿಯಾಗಿರುವ ಸಿನಿಮಾಗಳಿಂದ ದೂರ ಉಳಿದಿರುವ ಅನುಷ್ಕಾ ಶರ್ಮಾ (Anushka Sharma), ತಮ್ಮ ಬಾಡಿಗಾರ್ಡ್ ಪ್ರಕಾಶ್ ಸಿಂಗ್’ಗೆ ವರ್ಷಕ್ಕೆ 1.2 ಕೋಟಿ ಸಂಭಾವನೆ ಪಡೆಯುತ್ತಾರೆ. 
 

ಅಕ್ಷಯ್ ಕುಮಾರ್ : ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ (Askshay Kumar) ಸಹ ತಮ್ಮ ಬಾಡಿಗಾರ್ಡ್ ಶ್ರೇಯಸೆ ತೆಲೆ ಅವರಿಗೆ ವರ್ಷಕ್ಕೆ 1.2 ಕೋಟಿ ಸಂಭಾವನೆ ನೀಡುತ್ತಾರೆ. 
 

ಅಮಿತಾಬ್ ಬಚ್ಚನ್ : ಬಿಗ್ ಬಿ ಎಂದೇ ಖ್ಯಾತಿ ಪಡೆದಿರುವ ಅಮಿತಾಬ್ ಬಚ್ಚನ್ (Amitabh Bacchan) ಬಾಡಿಗಾರ್ಡ್ ಜೀತೇಂದ್ರ ಶಿಂಧೆ. ಇವರ ವಾರ್ಷಿಕ ಆದಾಯ 1.5 ಕೋಟಿ. 
 

ಅಮೀರ್ ಖಾನ್ : ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಪ್ರಸಿದ್ಧರಾಗಿರುವ ಅಮೀರ್ ಖಾನ್ (Ameer Khan) ಅವರ ಬಾಡಿಗಾರ್ಡ್ ಯುವರಾಜ್ ಘೋರ್ಪಡೆ ಅವರ ವಾರ್ಷಿಕ ಆದಾಯ 2 ಕೋಟಿ. 
 

ಸಲ್ಮಾನ್ ಖಾನ್ : ಸಲ್ಮಾನ್ ಖಾನ್ (Salman Khan) ಬಾಡಿಗಾರ್ಡ್ ಹೆಸರು ಶೇರಾ. ಇವರು ಕೂಡ ತುಂಬಾನೆ ಜನಪ್ರಿಯತೆ ಪಡೆದಿದ್ದಾರೆ. ಸಲ್ಮಾನ್ ಖಾನ್ ಬಳಿ ಹಲವಾರು ವರ್ಷಗಳಿಂದ ಇವರು ಕೆಲಸ ಮಾಡ್ತಿದ್ದಾರೆ. ಇವರ ವಾರ್ಷಿಕ ಆದಾಯ 2 ಕೋಟಿ. 
 

ಶಾರುಖ್ ಖಾನ್ : ಬಾಲಿವುಡ್ ಸೆಲೆಬ್ರಿಟಿಗಳ ಬಾಡಿಗಾರ್ಡ್ ಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಬಾಡಿಗಾರ್ಡ್  ಅಂದ್ರೆ ಅದು ಕಿಂಗ್ ಖಾನ್ ಬಾಡಿಗಾರ್ಡ್ (Sharukh Khan) ರವಿ ಸಿಂಗ್. ಇವರ ವಾರ್ಷಿಕ ಆದಾಯ 2.7 ಕೋಟಿ. 
 

Latest Videos

click me!