ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ವಯಸ್ಸಿನ ಅಂತರ ಎಷ್ಟು? ಸೆಲೆಬ್ರೆಟಿ ಜೋಡಿಗಳು ಸಿದ್ದಿಲ್ಲದೆ ಎಂಗೇಜ್ಮೆಂಟ್ ಮುಗಿಸಿರುವುದಾಗಿ ವರದಿಯಾಗಿದೆ. ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಈ ಜೋಡಿಗಳ ಏಜ್ ಗ್ಯಾಪ್ ಎಷ್ಟಿದೆ?
ಭಾರತೀಯ ಸಿನಿಮಾ ರಂಗದಲ್ಲಿ ಹ್ಯಾಟ್ರಿಕ್ ಹಿಟ್ ಕೊಟ್ಟ ರಶ್ಮಿಕಾ ಮಂದಣ್ಣ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ರಶ್ಮಿಕಾ ಸಿನಿಮಾಗಳು ಗಳಿಕೆಯಲ್ಲೂ ದಾಖಲೆ ಬರೆದಿದೆ. ಇತ್ತ ವಿಜಯ್ ದೇವರಕೊಂಡ ಭಾರಿ ಭರವಸೆ ಮೂಡಿಸಿದ ನಟ. ಇದೀಗ ಇವರಿಬ್ಬರು ಸದ್ದಿಲ್ಲದೆ ನಿಶ್ಚಿತಾರ್ಥ ಮುಗಿಸಿದ್ದಾರೆ ಎಂದು ವರದಿಯಾಗಿದೆ. ಇವರಿಬ್ಬರ ನಡುವಿನ ವಯಸ್ಸಿನ ಅಂತರ ಇದೀಗ ಚರ್ಚೆಯಾಗುತ್ತಿದೆ.
26
ರಶ್ಮಿಕಾ ಮಂದಣ್ಣ-ವಿಜಯ್ ಏಜ್ ಗ್ಯಾಪ್
ರಶ್ಮಿಕಾ ಮಂದಣ್ಣ-ವಿಜಯ್ ಏಜ್ ಗ್ಯಾಪ್
ರಶ್ಮಿಕಾ ಮಂದಣ್ಣ ವಯಸ್ಸು 29. ಇತ್ತ ವಿಜಯ್ ದೇವರಕೊಂಡ ವಯಸ್ಸು 36. ಇವರಿಬ್ಬರ ನಡುವಿನ ವಯಸ್ಸಿನ ಅಂತರ 7 ವರ್ಷ. ಕಳೆದ ಕೆಲ ವರ್ಷಗಳಿಂದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಲೇ ಇತ್ತು. ಇದೀಗ ನಿಶ್ಚಿತಾರ್ಥದ ಮೂಲಕ ಊಹಾಪೋಹಕ್ಕೆ ತೆರೆ ಬಿದ್ದಿದೆ.
36
ಮನಸ್ಸುಗಳು ಬೆರೆತಾಗ
ಮನಸ್ಸುಗಳು ಬೆರೆತಾಗ
ಸಿನಿಮಾದಲ್ಲಿ ಜೊತೆಯಾದ ಬಳಿಕ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಡುವೆ ಹೆಚ್ಚಿನ ಆತ್ಮೀಯತೆ ಇತ್ತು. ಈ ಹಿಂದೆ ಅಂದರೆ 2017ರಲ್ಲಿ ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಬಳಿಕ ಸಂಬಂಧ ಮುರಿದು ಬಿದ್ದಿತ್ತು. ಈ ವೇಳೆ ರಶ್ಮಿಕಾ ಹಾಗೂ ನಟನ ನಡುವಿನ ವಯಸ್ಸಿನ ಅಂತರ ಸರಿಸುಮಾರು 11 ವರ್ಷಗಳಿತ್ತು.
ಗೀತಾ ಗೋವಿಂದ ಸಿನಿಮಾದಲ್ಲಿ ವಿಜಯ್ ದೇವರಕೊಂಡಗೆ ನಾಯಕಿಯಾಗಿ ನಟಿಸಿದ್ದ ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳು ಮನಸೋತಿದ್ದರು. ಇವರಿಬ್ಬರ ಜೋಡಿ ತೆರೆ ಮೇಲೆ ಬಾರಿ ಮೋಡಿ ಮಾಡಿತ್ತು. ಸೂಪರ್ ಜೋಡಿ ಎಂದೇ ಕರೆಯಿಸಿಕೊಂಡಿತ್ತು. ಈ ಸಿನಿಮಾ ಬಳಿಕ ಆಫ್ ಸ್ಕ್ರೀನ್‌ನಲ್ಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ತೆರೆ ಮೇಲೆ ಮಾತ್ರವಲ್ಲ ಬದುಕಿನಲ್ಲೂ ಈ ಜೋಡಿ ಸೂಪರ್ ಎಂಬ ಮಾತು ಕೇಳಿಬಂದಿತ್ತು.
56
ಫೆಬ್ರವರಿಯಲ್ಲಿ ಮದುವೆ
ಫೆಬ್ರವರಿಯಲ್ಲಿ ಮದುವೆ
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ 2026ರ ಫೆಬ್ರವರಿಯಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಮದುವೆ ಎಲ್ಲಿ ನಡೆಯಲಿದೆ, ಆರತಕ್ಷತೆ ಎಲ್ಲಿ ಅನ್ನೋ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಫೆಬ್ರವರಿ ಆರಂಭಿಕ ವಾರದಲ್ಲೇ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
66
ವಿಜಯ್ ದೇವರಕೊಂಡ ಅಭಿಮಾನಿಗಳು ಫುಲ್ ಖುಷ್
ವಿಜಯ್ ದೇವರಕೊಂಡ ಅಭಿಮಾನಿಗಳು ಫುಲ್ ಖುಷ್
ವಿಜಯ್ ದೇವರಕೊಂಡ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಸರಿಯಾದ ಜೋಡಿ ಎಂದು ಅಭಿಮಾನಿಗಳು ಮೊದಲೇ ಊಹಿಸಿದ್ದರು. ವಿಜಯ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಅದ್ಧೂರಿ ಮದುವೆಗೆ ತಯಾರಿಗಳ ನಡೆಯುತ್ತಿದೆ.