Breaking: ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ, ಇದು ನಿಜವೇ?

Published : Oct 03, 2025, 11:18 PM IST

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ, ಇದು ನಿಜವೇ? ಇಬ್ಬರು ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಪೋಷಕರು, ಆಪ್ತರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮುಗಿಸಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ನಿಜಕ್ಕೂ ನಿಶ್ಚಿತಾರ್ಥ ನಡೆದೊಯ್ತಾ?

PREV
15
ಸದ್ದಿಲ್ಲದೆ ರಶ್ಮಿಕಾ ಮಂದಣ್ಣ-ವಿಜಯ್ ದೇವರೊಂಡ ನಿಶ್ಚಿತಾರ್ಥ ಸುದ್ದಿ

ಸದ್ದಿಲ್ಲದೆ ರಶ್ಮಿಕಾ ಮಂದಣ್ಣ-ವಿಜಯ್ ದೇವರೊಂಡ ನಿಶ್ಚಿತಾರ್ಥ ಸುದ್ದಿ

ನ್ಯಾಶನಲ್ ಕ್ರಶ್ ಎಂದೇ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ರಿಲೇಶನ್‌ಶಿಪ್, ಡೇಟಿಂಗ್ ಕುರಿತು ಹಲವು ಸುದ್ದಿಗಳು ಹರಿದಾಡಿತ್ತು. ಪ್ರಮುಖವಾಗಿ ತೆಲುಗು ಸ್ಟಾರ್ ನಟ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬಂದಿತ್ತು. ಇದೀಗ ಈ ಜೋಡಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದೆ ಎಂದು ವರದಿಯಾಗಿದೆ.

25
ಹೈದರಾಬಾದ್‌ನಲ್ಲಿ ಎಂಗೇಜ್‌ಮೆಂಟ್

ಹೈದರಾಬಾದ್‌ನಲ್ಲಿ ಎಂಗೇಜ್‌ಮೆಂಟ್

ಹೈದರಾಬಾದ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಿಶ್ಚಿತಾರ್ಥ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಲ ಮಾಧ್ಯಮ ವರದಿ ಪ್ರಕಾರ ದೇವರಕೊಂಡ ಮನೆಯಲ್ಲಿ ಪೋಷಕರು, ಆಪ್ತರ ವಲಯ, ಸಿನಿಮಾ ಕ್ಷೇತ್ರದ ಕೆಲವೇ ಕೆಲವು ಮಂದಿ ಎಂಗೇಜ್‌ಮೆಂಟ್‌ನಲ್ಲಿ ಪಾಲ್ಗೊಂಡಿದ್ದಾರೆ ಎಂದು ವರದಿಯಾಗಿದೆ.

35
ವಿಜಯದಶಮಿ ದಿನ ನಡೆದಿತ್ತು ನಿಶ್ಚಿತಾರ್ಥ

ವಿಜಯದಶಮಿ ದಿನ ನಡೆದಿತ್ತು ನಿಶ್ಚಿತಾರ್ಥ

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ವಿಜಯದಶಮಿ ದಿನ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಕೆಲ ಮಾಧ್ಯಮಗಳು ಅಕ್ಟೋಬರ್ 3ರಂದು ನಿಶ್ಚಿತಾರ್ಥ ಮಾಡಿಕೊಂಡಿದೆ ಎಂದು ವರದಿ ಮಾಡಿದೆ. ಇಷ್ಟೇ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ವೇದಿಕೆಗಳಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಟ್ರೆಂಡ್ ಆಗಿದೆ.

45
2026ರ ಫೆಬ್ರವರಿಯಲ್ಲಿ ಮದುವೆ

2026ರ ಫೆಬ್ರವರಿಯಲ್ಲಿ ಮದುವೆ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸೈಲೆಂಟ್ ಆಗಿ ಎಂಗೇಜ್ಮೆಂಟ್ ಮುಗಿಸಿದ್ದು, 2026ರ ಫೆಬ್ರವರಿಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿದೆ. ಎಂಗೇಜ್‌ಮೆಂಟ್ ಗೌಪ್ಯವಾಗಿಟ್ಟಿರುವ ಈ ಜೋಡಿ, ಮುಂದಿನ ವರ್ಷದ ಆರಂಭದಲ್ಲೇ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

55
ಸೈಮಾ ಅವರಾಡ್ ವೇಳೆಯೂ ನಿಶ್ಚಿತಾರ್ಥ ಗುಲ್ಲು

ಸೈಮಾ ಅವರಾಡ್ ವೇಳೆಯೂ ನಿಶ್ಚಿತಾರ್ಥ ಗುಲ್ಲು

ಇತ್ತೀಚೆಗೆ ನಡೆದ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆಯೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಗುಲ್ಲು ಹಬ್ಬಿತ್ತು. ಪ್ರಮುಖವಾಗಿ ಅವಾರ್ಡ್ ವೇಳೆ ರಶ್ಮಿಕಾ ಮಂದಣ್ಣ ವಜ್ರದ ಉಂಗುರ ಹಾಕಿದ್ದರು. ಹೀಗಾಗಿ ರಶ್ಮಿಕಾ ಮಂದಣ್ಣ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು.

Read more Photos on
click me!

Recommended Stories