ಬಾಲಿವುಡ್‌ನಿಂದ ಟಾಲಿವುಡ್ ತನಕ 'ನ್ಯಾಷನಲ್ ಕ್ರಶ್' ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಈಗ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸೌಂದರ್ಯಕ್ಕಲ್ಲ ಬದಲಿಗೆ ಕೇರಳದಲ್ಲಿ ಈ ನಟಿ ಮಾಡಿರುವ ಕೆಲಸಕ್ಕೆ.. ಏನಿದು ಮ್ಯಾಟರ್ ನೋಡಿ..
ಬಾಲಿವುಡ್‌ನಿಂದ ಟಾಲಿವುಡ್ ತನಕ 'ನ್ಯಾಷನಲ್ ಕ್ರಶ್' ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಈಗ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸೌಂದರ್ಯಕ್ಕಲ್ಲ, ತಮ್ಮ ಅದ್ಭುತ ಧೈರ್ಯ ಮತ್ತು ವೃತ್ತಿಪರತೆಗಾಗಿ! ಸದ್ಯ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ತಮ್ಮ ಮುಂಬರುವ ಚಿತ್ರ 'ಮೈಸಾ' (Maaisa) ಚಿತ್ರಕ್ಕಾಗಿ ಜಬರ್ದಸ್ತ್ ರಿಸ್ಕ್ ತಗೊಂಡಿದ್ದಾರೆ. ಚಿತ್ರದ ಪಾತ್ರಕ್ಕಾಗಿ ಅವರು ತೋರುತ್ತಿರುವ ಸಮರ್ಪಣಾ ಭಾವ ಈಗ ಇಡೀ ಚಿತ್ರರಂಗ ಮೆಚ್ಚುವಂತೆ ಮಾಡಿದೆ.
26
ಬುಡಕಟ್ಟು ಯುವತಿಯಾಗಿ ರಶ್ಮಿಕಾ ಅಬ್ಬರ:
ನಿರ್ದೇಶಕ ರವೀಂದ್ರ ಪುಲ್ಲೆ ಅವರ ಕನಸಿನ ಪ್ರಾಜೆಕ್ಟ್ ಆದ 'ಮೈಸಾ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಗೊಂಡ್ ಬುಡಕಟ್ಟು ಸಮುದಾಯದ ಕಿಚ್ಚು ಹಚ್ಚುವ ಯುವತಿಯಾಗಿ ಅಬ್ಬರಿಸಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಮತ್ತು ಗ್ಲಿಂಪ್‌ಗಳು ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಭಾರಿ ಕುತೂಹಲ ಮೂಡಿಸಿವೆ.
36
ಕೇರಳದ ದಟ್ಟ ಕಾಡಿನಲ್ಲಿ 'ಪ್ರಾಣ ಸಂಕಟದ' ಶೂಟಿಂಗ್:
ಇತ್ತೀಚೆಗಷ್ಟೇ ಕೇರಳದ ದಟ್ಟ ಕಾಡುಗಳಲ್ಲಿ ಈ ಚಿತ್ರದ ಸುದೀರ್ಘ ವೇಳಾಪಟ್ಟಿ ಮುಕ್ತಾಯಗೊಂಡಿದೆ. ಕೊಚ್ಚಿಯ ಹಚ್ಚ ಹಸಿರಿನ ನಡುವೆ, ಕಣ್ಣಿಗೆ ಕಾಣದ ಅಪಾಯಗಳ ನಡುವೆ ಶೂಟಿಂಗ್ ನಡೆದಿದೆ. ಮಳೆ ಸುರಿಯುತ್ತಿದ್ದರೂ, ಕಾಡಿನ ಮಧ್ಯೆ ಸರಿಯಾದ ದಾರಿ ಇಲ್ಲದ ಜಾಗಗಳಲ್ಲಿ ಮೈಲುಗಟ್ಟಲೆ ಟ್ರೆಕ್ಕಿಂಗ್ ಮಾಡಿಕೊಂಡು ರಶ್ಮಿಕಾ ಶೂಟಿಂಗ್ ಸ್ಪಾಟ್ ತಲುಪುತ್ತಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಶ್ಮಿಕಾ, "ಕಾಡಿನ ಮಧ್ಯೆ ಶೂಟಿಂಗ್ ಮಾಡುವುದು ಕಷ್ಟವಾಗಿತ್ತು ನಿಜ, ಆದರೆ ಆ ಪ್ರಕೃತಿಯ ಶಾಂತಿ ನನ್ನಲ್ಲಿ ಹೊಸ ಚೈತನ್ಯ ತುಂಬಿತು" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಬರುವ ಆಕ್ಷನ್ ಸೀನ್ಸ್‌ಗಳು ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ನಿಲ್ಲಿಸಲಿವೆಯಂತೆ. ಎತ್ತರದ ಬೆಟ್ಟಗಳ ತುದಿ ಮತ್ತು ಆಳವಾದ ಕಣಿವೆಗಳ ಅಂಚಿನಲ್ಲಿ ನಡೆಯುವ ಫೈಟ್ ಸೀನ್‌ಗಳಲ್ಲಿ ರಶ್ಮಿಕಾ ಯಾವುದೇ 'ಡ್ಯೂಪ್' ಬಳಸದೆ ನಟಿಸಲು ಮುಂದಾದರು. ಕೆಲವು ಬಾರಿ ಮಳೆಯಿಂದಾಗಿ ಜಾರುವ ಅಪಾಯವಿದ್ದರೂ, ಕಿಂಚಿತ್ತೂ ಎದರದೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಟಿಸಿದ್ದಾರೆ.
56
ಈ ಅಪಾಯಕಾರಿ ಸಾಹಸಗಳಿಗಾಗಿ ರಶ್ಮಿಕಾ ವಿಶೇಷ ತರಬೇತಿ ಕೂಡ ಪಡೆದಿದ್ದರು. ತಮ್ಮ ಭಯವನ್ನು ಬದಿಗಿಟ್ಟು ಪಾತ್ರದ ಯಶಸ್ಸಿಗಾಗಿ ಅವರು ನೀಡುತ್ತಿರುವ ಶ್ರಮ ನಿಜಕ್ಕೂ ಅಸಾಧಾರಣ. ಒಟ್ಟಿನಲ್ಲಿ 'ಪುಷ್ಪ'ದ ಶ್ರೀವಲ್ಲಿ ಈಗ 'ಮೈಸಾ' ಆಗಿ ಹೊಸ ಅವತಾರ ಎತ್ತುತ್ತಿದ್ದಾರೆ.
66
ರಶ್ಮಿಕಾ ಮಂದಣ್ಣ ಕೇವಲ ಗ್ಲಾಮರ್ ಗೊಂಬೆಯಲ್ಲ, ಸವಾಲಿನ ಪಾತ್ರಗಳನ್ನು ಎದುರಿಸುವ ಗಟ್ಟಿಗಿತ್ತಿ ಎಂದು ಸಾಬೀತುಪಡಿಸಿದ್ದಾರೆ. ಅಭಿಮಾನಿಗಳಂತೂ ತಮ್ಮ ನೆಚ್ಚಿನ ನಟಿಯ ಈ 'ಪವರ್ ಪ್ಯಾಕ್ಡ್' ಅವತಾರವನ್ನು ಬೆಳ್ಳಿತೆರೆಯ ಮೇಲೆ ನೋಡಲು ತುದಿಗಾಲಲ್ಲಿ ಕಾಯುತ್ತಿದ್ದಾರೆ. 'ಮೈಸಾ' ರಶ್ಮಿಕಾ ಅವರ ಕೆರಿಯರ್‌ನಲ್ಲಿ ಮತ್ತೊಂದು ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.