ಯೆಲ್ಲೋ ಸೀರೆಯಲ್ಲಿ ರಶ್ಮಿಕಾ ಮಂದಣ್ಣ ಮಿಂಚಿಂಗ್: ನಿಂಬೆ ಹಣ್ಣಿನಂಥ ಹುಡುಗಿ ಬಂದ್ಳು ನೋಡು ಎಂದ ಫ್ಯಾನ್ಸ್‌!

First Published | Jan 6, 2024, 6:01 PM IST

ನಟಿ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ರಶ್ಮಿಕಾ ರೇಂಜ್ ಬದಲಾಗಿದೆ. ಬಾಲಿವುಡ್ ಟಾಪ್ ಹೀರೋಯಿನ್ ಪಟ್ಟಿಯಲ್ಲಿ ರಶ್ಮಿಕಾ ಕೂಡ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಸೀರೆಯುಟ್ಟ ಫೋಟೋ ಹಂಚಿಕೊಂಡಿದ್ದಾರೆ.

ಸ್ಲೀವ್‌ಲೆಸ್‌ ಬ್ಲೌಸ್‌ ಯೆಲ್ಲೋ ಸೀರೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಸಖತ್ ಕೂಲ್​ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

ರಶ್ಮಿಕಾ ಮಂದಣ್ಣ ಫೋಟೋ ನೋಡಿದ ನೆಟ್ಟಿಗರು, ಯೆಲ್ಲೋ ಸೀರೆಯಲ್ಲಿ ಅಂದವಾಗಿ ಕಾಣುತ್ತಿದ್ದೀರಾ, ಬ್ಯೂಟಿಫುಲ್, ಜಸ್ಟ್ ಲೈಕ್ ಎ ವಾವ್,  ನಿಂಬೆ ಹಣ್ಣಿನಂಥ ಹುಡುಗಿ ಬಂದ್ಳು ನೋಡು ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

Tap to resize

ನಟಿ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್​ ಜೊತೆ ನಟಿಸಿರುವ ಅನಿಮಲ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್​ನಲ್ಲೂ ಸಖತ್ ಸೌಂಡ್ ಮಾಡ್ತಿದೆ. ರಶ್ಮಿಕಾ ಮಂದಣ್ಣ ಅನಿಮಲ್ ಸಿನಿಮಾ ಸಕ್ಸಸ್​ ಖುಷಿಯಲ್ಲಿ ತೇಲಾಡುತ್ತಿದ್ದಾರೆ.

ಅನಿಮಲ್ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಸ್ಸಿಂಗ್ ವಿಡಿಯೋ, ಇಂಟಿಮೆಂಟ್ ಸೀನ್​ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸದ್ಯ ರಶ್ಮಿಕಾ ಮಂದಣ್ಣ ತೆಲುಗು, ಕನ್ನಡ, ತಮಿಳು, ಹಿಂದಿ ಹೀಗೆ ಎಲ್ಲಾ ಇಂಡಸ್ಟ್ರಿಗಳಲ್ಲೂ ತಮ್ಮ ಶಕ್ತಿ ತೋರಿಸುತ್ತಿದ್ದಾರೆ. ಹಿಂದಿಯಲ್ಲಿ ಟಾಪ್ ಟಕ್ಕರ್ ಎಂಬ ಆಲ್ಬಂ ಮೂಲಕ ಫೇಮಸ್ ಆದ ರಶ್ಮಿಕಾ ನಂತರ ‘ಗುಡ್ ಬೈ’ ಮತ್ತು ‘ಮಿಷನ್ ಮಜ್ನು’ ಚಿತ್ರಗಳ ಮೂಲಕ ಬಾಲಿವುಡ್​ ಜರ್ನಿ ಆರಂಭಿಸಿದರು.

ಇದೀಗ ರಶ್ಮಿಕಾ ಮಂದಣ್ಣ ಅನಿಮಲ್ ಸಿನಿಮಾ ಮೂಲಕ ಬಿಗ್ ಹಿಟ್ ನೀಡಿದ್ದಾರೆ. ಈ ಚಿತ್ರದ ಬಳಿಕ ರಶ್ಮಿಕಾ ಮಂದಣ್ಣ ಬಾಲಿವುಡ್​ ಟಾಪ್​ ನಟಿಯರ ಲಿಸ್ಟ್​ ಸೇರಿಕೊಂಡಿದ್ದಾರೆ.

ಅನಿಮಲ್ ಬಳಿಕ ನಟಿ ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗ್ತಿದ್ದಾರೆ. ಜೊತೆಗೆ ತೆಲುಗು ಸಿನಿಮಾಗಳ ಶೂಟಿಂಗ್​ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಶ್ರೀವಲ್ಲಿಗೆ ಅಪಾರ ಫ್ಯಾನ್ ಫಾಲೋವರ್ಸ್ ಇದ್ದಾರೆ.

Latest Videos

click me!