ಅಲಿಯಾ ಭಟ್ ಪತಿ ಜೊತೆ ರಶ್ಮಿಕಾ ಆಪ್ತತೆ: ರಣಬೀರ್ ಸೆಲ್ಫಿ ವೈರಲ್

First Published | Jun 21, 2023, 2:41 PM IST

ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ಆಪ್ತರಾಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನಟಿ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ತುಂಬಾ ಆಪ್ತರಾಗಿದ್ದಾರೆ. ಅಂದಹಾಗೆ ಇಬ್ಬರೂ ಈ ಪರಿ ಕ್ಲೋಸ್ ಆಗಲು ಕಾರಣ ಅನಿಮಲ್ ಸಿನಿಮಾ. ಹೌದು ರಶ್ಮಿಕಾ ಮತ್ತು ರಣಬೀರ್ ಇಬ್ಬರೂ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ಅನಿಮಲ್ ಸಂದೀಪ್ ರೆಡ್ಡಿ ವಾಂಗ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಆಕ್ಷನ್ ಕಟ್ ಹೇಳಿರುವ ಸಿನಿಮಾ. ಸದ್ಯ ಅನಿಮಲ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. 

Tap to resize

rashmika mandanna

ಅನಿಮಲ್ ಚಿತ್ರೀಕರಣ ಮುಗಿಸಿದ ಖುಷಿಯನ್ನು ನಟಿ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ರಣಬೀರ್ ಕಪೂರ್ ಮತ್ತೆ ತಂಡದ ಜೊತೆ ರಶ್ಮಿಕಾ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.   

ಬಾಲಿವುಡ್ ರಣಬೀರ್ ಕಪೂರ್ ರಶ್ಮಿಕಾ ಅವರನ್ನು ಹಿಂದೆಯಿಂದ ಹಿಡಿದುಕೊಂಡಿದ್ದಾರೆ. ಇಬ್ಬರೂ ಕ್ಯಾಮರಾಗೆ ಸ್ಮೈಲ್ ಮಾಡಿದ್ದಾರೆ. ಈ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮತ್ತೊಂದು ಫೋಟೋದಲ್ಲೂ ರಶ್ಮಿಕಾ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ ರಣಬೀರ್. 

ರಶ್ಮಿಕಾ ಫೋಟೋಗಳನ್ನು ಶೇರ್ ಮಾಡಿ ಪೀಸ್ ಆಫ್ ಮೈ ಹಾರ್ಟ್ ಎಂದು ಕ್ಯಾಪ್ಷನ್ ನೀಡಿದ್ದಾರೆ. ಜೊತೆಗೆ ಹಾರ್ಟ್ ಇಮೋಜಿ ಇರಿಸಿದ್ದಾರೆ. ಜೊತೆಗೆ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. ರಣಬೀರ್ ಕಪೂರ್ ಅವರನ್ನು ಹಾಡಿಗಹೊಗಳಿದ್ದಾರೆ. ಅದ್ಭುತ ಎಂದು ಹೇಳಿದ್ದಾರೆ. 

ಆಕ್ಷನ್ ಥ್ರಿಲ್ಲರ್ ಅನಿಮಲ್ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಬಾಬಿ ಡಿಯೋಲ್, ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.  ಬಹುನಿರೀಕ್ಷೆಯ ಸಿನಿಮಾ ಆಗಸ್ಟ್ 11 ರಂದು ರಿಲೀಸ್ ಆಗುತ್ತಿದೆ. 

Latest Videos

click me!