ಶಾರುಖ್ ಇನ್ನೂ ರೊಮ್ಯಾನ್ಸ್ ಮಾಡ್ತಿಲ್ವಾ? 21ರ ಯುವತಿ ಜೊತೆ ಕಿಸ್ಸಿಂಗ್ ಸೀನ್ ವಿವಾದಕ್ಕೆ ನವಾಜುದ್ದೀನ್ ಕಿಡಿ

First Published | Jun 19, 2023, 5:47 PM IST

ಶಾರುಖ್ ಇನ್ನೂ ರೊಮ್ಯಾನ್ಸ್ ಮಾಡ್ತಿಲ್ವಾ? ಯುವಪೀಳಿಗೆಗೆ ರೊಮ್ಯಾನ್ಸ್ ಬಗ್ಗೆ ಗೊತ್ತಿಲ್ಲ ಎಂದು ನವಾಜುದ್ದೀನ್ ಸಿದ್ದಕಿ 21ರ ಯುವತಿ ಜೊತೆ ಕಿಸ್ಸಿಂಗ್ ಸೀನ್ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಟಿಕು ವೆಡ್ಸ್ ಶೇರು ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಟಿಕು ವೆಡ್ಸ್ ಶೇರ್ ಕಂಗನಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈಗಾಗಲೇ ಸಿನಿಮಾತಂಡ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. 

ಟಿಕು ವೆಡ್ಸ್ ಶೇರು ಸಿನಿಮಾದ ಒಂದು ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದ್ದು ವಿವಾದ ಕೂಡ ಎಬ್ಬಿಸಿದೆ. ನವಾಜುದ್ದೀನ್ ಸಿದ್ದಿಕಿ ಮತ್ತು ನಾಯಕಿಯ ನಡುವಿನ ಲಿಪ್ ಲಾಕ್ ದೃಶ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. 
 

Tap to resize

49 ವರ್ಷದ ನವಾಜುದ್ದೀನ್ ಸಿದ್ದಿಕಿ ಮತ್ತು 21ರ ಹರೆಯದ ನಟಿ ಅವವನೀತ್ ಕೌರ್ ಜೊತೆ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಭಿಮಮಾನಿಗಳ ಕೋಪಕ್ಕೆ ಕಾರಣವಾಗಿದೆ. ಕಂಗನಾ ಸಿನಿಮಾದಲ್ಲಿ ಇಂಥ ದೃಶ್ಯಗಳನ್ನು ನಿರೀಕ್ಷಿಸಿರಲಿಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. 

ಈ ಬಗ್ಗೆ ನಟಿ ನವಾಜುದ್ದೀನ್ ಸಿದ್ದಿಕಿ ಪ್ರತಿಕ್ರಿಯೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ನವಾಜುದ್ದೀನ್, ರೊಮ್ಯಾನ್ಸ್‌ಗೆ ವಯಸ್ಸಿನಂ ಮಿತಿಯಿಲ್ಲ. ಸಮಸ್ಯೆಯೆಂದರೆ ಯುವಕರಿಗೆ ಯಾವುದೇ ರೊಮ್ಯಾನ್ಸ್ ಉಳಿದಿಲ್ಲ. ನಾವು ಪ್ರೀತಿಯಲ್ಲಿರುತ್ತೇವೆ. ಪ್ರೀತಿ ವರ್ಷಗಟ್ಟಲೇ ಇರುತ್ತೆ. ಇಂದು ಶಾರುಖ್ ಖಾನ್ ರೊಮ್ಯಾಂಟಿಕ್ ಪಾತ್ರಗಳನ್ನು ಮಾಡುವುದನ್ನು ಮುಂದುವರೆಸಿದ್ದಾರೆ. ಯುವ ಪೀಳಿಗೆಗೆ ರೊಮ್ಯಾಮ್ಸ್ ಗೊತ್ತಿಲ್ಲ' ಎಂದು ಹೇಳಿದ್ದಾರೆ. 
 

ಯುವ ಪೀಳಿಗೆ ರೊಮ್ಯಾನ್ಸ್ ನಲ್ಲಿ ಬದುಕುತ್ತಿಲ್ಲ. ವಾಟ್ಸಾಪ್‌ನಲ್ಲಿ ಪ್ರೀತಿಸುತ್ತಾರೆ, ಅಲ್ಲೇ ಬ್ರೇಕಪ್ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.  'ಇಂದು ಎಲ್ಲವೂ ವಾಟ್ಸಾಪ್‌ನಲ್ಲಿ ನಡೆಯುತ್ತದೆ. ಅದು ಪ್ರೀತಿಯಾಗಿರಲಿ ಅಥವಾ ಬ್ರೇಕಪ್ ಆಗಿರಲಿ. ಇದರ ಹಿಂದೆ ಒಂದು ಕಾರಣವಿದೆ. ರೊಮ್ಯಾನ್ಸ್ ನಲ್ಲಿ ಬದುಕಿದವರು ರೊಮ್ಯಾನ್ಸ್ ಮಾಡಬಹುದು. ಬೇರೆ ಯಾರು ಮಾಡುತ್ತಾರೆ?' ಎಂದು ಸಿದ್ಧಿಕಿ ಹೇಳಿದ್ದಾರೆ. 

ಟಿಕು ವೆಡ್ಸ್ ಶೇರು ಮೂಲಕ ನಟಿ ಅವನೀತ್ ಕೌರ್ ಮೊದಲ ಬಾರಿಗೆ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಸದ್ಯ ಪ್ರಮೋಷನ್ ನಲ್ಲಿ ಸಿನಿಮಾತಂಡ ಬ್ಯುಸಿಯಾಗಿದೆ. ನಟಿ ಕಂಗನಾ ಕೂಡ ಎಲ್ಲಾ ಕಡೆ ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಜೂನ್ 23 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಚಿತ್ರವು ಪ್ರೀಮಿಯರ್ ಆಗಲಿದೆ.
 

ಟಿಕು ವೆಡ್ಸ್ ಶೇರು ಸಾಯಿ ಕಬೀರ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾವಾಗಿದೆ. ಅವನೀತ್ ಕೌರ್ ಮತ್ತು ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂನ್ 23 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಚಿತ್ರವು ಪ್ರೀಮಿಯರ್ ಆಗಲಿದೆ.

Latest Videos

click me!